ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ
ಬಿಲ್ ಸರಿಯಾಗಿ ಪಾವತಿಯಾಗದೆ ಆರ್ಥಿಕ ಹೊರೆ: ರೈತರ ಅಳಲು
Team Udayavani, Mar 6, 2020, 12:44 PM IST
ಕುರುಗೋಡು: ಸಮೀಪದ ಸಿರಿಗೇರಿ ಮತ್ತು ಕರೂರು ಉಪ ಎಪಿಎಂಸಿ ಮಾರುಕಟ್ಟೆಯಲ್ಲಿ ದವಸ ಧಾನ್ಯಗಳ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿ ಸುತ್ತಮುತ್ತಲಿನ ರೈತರು ಎಪಿಎಂಸಿ ಅಧ್ಯಕ್ಷ ಸಿರಿಗೇರಿ ಹಾಗಲೂರು ಮಲ್ಲನಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ, ರೈತರು ಪ್ರತಿಯೊಂದು ದವಸ ಧಾನ್ಯಗಳನ್ನು ಮಾರಾಟ ಮಾಡಲು 40 ಕಿ.ಮೀ ದೂರದ ಸಿರುಗುಪ್ಪ, ಬಳ್ಳಾರಿ ಮಾರುಕಟ್ಟೆಗಳಿಗೆ ದುಂದುವೆಚ್ಚ ಭರಿಸಿ ಕೊಂಡೂಯ್ಯಬೇಕಾಗಿದೆ. ಅಲ್ಲಿಯೂ ಕೂಡ ಬಿಲ್ಲು ಸರಿಯಾಗಿ ಪಾವತಿಯಾಗದೆ ಆರ್ಥಿಕ ಹೊರೆ ಅನುಭವಿಸುತ್ತಿದ್ದೇವೆ. ಇದಲ್ಲದೆ ಮಧ್ಯವರ್ತಿಗಳಿಗೆ ನೀಡಿದ ದವಸ ಧಾನ್ಯಗಳ ಹಣ ಬಾರದೆ ವಂಚನೆಗೀಡಾಗಿದ್ದೇವೆ. ಕಾರಣ ಸಿರಿಗೇರಿ ಮತ್ತು ಕುರೂರು ವ್ಯಾಪ್ತಿಯ ಮುದ್ದಟನೂರು, ಸಿರಿಗೇರಿ, ಉತ್ತನೂರು, ಎಂ.ಸೂಗೂರು, ಕರೂರು ರೈತರಿಗೆ ಅನುಕೂಲವಾಗುವಂತೆ ಕೂಡಲೇ ಖರೀದಿ ಕೇಂದ್ರವನ್ನು ಸ್ಥಳೀಯವಾಗಿ ತೆರೆಯಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಎಪಿಎಂಸಿ ಅಧ್ಯಕ್ಷ ಹಾಗಲೂರು ಮಲ್ಲನಗೌಡ ಮಾತನಾಡಿ, ಈಗಾಗಲೇ ಕರೂರು ಮತ್ತು ಸಿರಿಗೇರಿ ಉಪ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ತೆರೆಯುವ ಸಲುವಾಗಿ 16 ಮಳಿಗೆಗಳನ್ನು ನಿರ್ಮಿಸಲಾಗಿದೆ. ಕಣದ ಕಟ್ಟೆಗಳನ್ನು ಪುನರ್ ಅಭಿವೃದ್ಧಿಪಡಿಸಲಾಗಿದೆ. ಗೋದಾಮು ವ್ಯವಸ್ಥೆ ಕೂಡ ಮಾಡಲಾಗಿದೆ. ಶೀಘ್ರದಲ್ಲೇ ಮಳಿಗೆ ಉದ್ಘಾಟಿಸಿ ಖರೀದಿ ಕೇಂದ್ರ ತೆರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಗ್ರಾಮದ ಮುಖಂಡರಾದ ಜಿ.ವೀರನಗೌಡ, ಎನ್.ವಿರುಪಾಕ್ಷಪ್ಪ, ಬಕ್ಕಾಟೆ ಈರಯ್ಯ, ಸಿ.ಎಂ. ನಾಗರಾಜ ಸ್ವಾಮಿ, ನಾರಾಯಣಪ್ಪ, ಬಸವನಗೌಡ, ಕುಪೇಂದ್ರ, ರಂಗಪ್ಪ, ಹೊನ್ನೂರ್ ಸಾಬು, ಬಿ. ಉಮೇಶ, ಮಂಜುನಾಥ, ರುದ್ರಪ್ಪ, ಪಂಪಾಪತಿ, ರಜಕ್ ಸಾಬು, ಮರಿಸ್ವಾಮಿ, ವೇಮಣ್ಣ, ನಟರಾಜ ಸೇರಿದಂತೆ ನೂರಾರು ರೈತರು ಉಪಸ್ಥಿತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.