ಸೌಲಭ್ಯ ಕಾಣದ ನೀರಾವರಿ ಇಲಾಖೆ ಕಚೇರಿ-ಕ್ವಾರ್ಟರ್ಸ್
ಶಿಥಿಲಗೊಂಡ ವಸತಿ ಗೃಹಗಳಲ್ಲೇ ಸಿಬ್ಬಂದಿ ವಾಸ
Team Udayavani, Feb 5, 2020, 3:12 PM IST
ಕುರುಗೋಡು: ಪಟ್ಟಣದ ಬಳ್ಳಾರಿ ಮುಖ್ಯ ರಸ್ತೆಯಲ್ಲಿರುವ ನೀರಾವರಿ ಇಲಾಖೆಯ ತುಂಗಭದ್ರಾ ಮೇಲ್ದಂಡೆ ನಂ.2 ಉಪ ಕಾಲುವೆ ವಿತರಣಾ ವಿಭಾಗದ ಕಚೇರಿ ಸುಮಾರು ವರ್ಷಗಳಿಂದ ನಾನಾ ಸೌಲಭ್ಯಗಳು ಕಾಣದೆ ಭೂತ ಬಂಗ್ಲೆಯಂತೆ ಗೋಚರಿಸುತ್ತಿವೆ.
ಕಚೇರಿಗೆ ಬರುವ ರೈತರಿಗೆ ಶೌಚಾಲಯ, ಕುಡಿಯುವ ನೀರಿಲ್ಲದಂತಾಗಿದೆ. ಶಿಥಿಲಗೊಂಡ ಹಳೇ ಕಟ್ಟಡದಲ್ಲಿಯೇ ಕಚೇರಿ ನಡೆಸುತ್ತಿದ್ದು, ಮಳೆ ಬಂದರೆ ಮೇಲ್ಛಾವಣಿಯಿಂದ ನೀರು ಸೋರುತ್ತಿವೆ. ಕಡತಗಳ ರಕ್ಷಣೆ ಇಲ್ಲದಂತಾಗಿದೆ. ರೈತರಿಗೆ ಅನುಕೂಲವಾಗುವ ರೈತ ಭವನದ ಕಟ್ಟಡ ಶಿಥಿಲಗೊಂಡು ನಿರುಪಯುಕ್ತವಾಗಿದೆ.
ಶಿಥಿಲಗೊಂಡಿರುವ ವಸತಿ ಗೃಹಗಳಲ್ಲೇ ಸಿಬ್ಬಂದಿಗಳ ವಾಸವಾಗಿದೆ. ದುರಸ್ತಿ ಮಾಡಿಸಲು ಮೇಲಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ವಿಭಾಗದ ಆರ್‌ಬಿಎಚ್‌ಎಲ್‌ಸಿ ವ್ಯಾಪ್ತಿಗೆ ಡಿ7, ಡಿ8, ಡಿ9, ಡಿ10, ಡಿ11 ಉಪ ಕಾಲುವೆಗಳಿಗೆ 46 ಹಳ್ಳಿಗಳಲ್ಲಿ ಒಟ್ಟು 53,000 ಎಕರೆ ಇದ್ದು. ಎಲ್.ಎಲ್.ಸಿ ವ್ಯಾಪ್ತಿಗೆ ನಡವಿ ವಿತರಣಾ ಹಾಗೂ ಮುದ್ದಟನೂರು ಉಪ ಕಾಲುವೆಗಳಿಗೆ 10 ಸಾವಿರ ಎಕರೆ ಜಮೀನಿನ ರೈತರು ಬೆಳೆ ಬೆಳೆಯುತ್ತಿದ್ದಾರೆ.
ಕಟ್ಟಡ ಶಿಥಿಲ: ಟಿ.ಬಿ. ಬೋರ್ಡ್‌ನ 7 ಎಕರೆ ಪ್ರದೇಶದಲ್ಲಿ 1965ರಲ್ಲಿ ನೀರಾವರಿ ಇಲಾಖೆಯ 1 ಕಟ್ಟಡ ಕಚೇರಿ, 1 ರೈತ ಭವನ ಹಾಗೂ 13 ವಸತಿ ಗೃಹಗಳು ನಿರ್ಮಾಣಗೊಂಡಿದ್ದವು. ನೀರಾವರಿ ಇಲಾಖೆಯ ಮೇಲ್ದಂಡೆ ಉಪ ಕಾಲುವೆಯ ಕಚೇರಿಯ ಕಟ್ಟಡ ಶಿಥಿಲಗೊಂಡು ಮಳೆ ಬಂದರೆ ಸೋರುತ್ತಿದೆ ಎಂದು ಖಾಲಿಯಿರುವ ರೈತ ಭವನದಲ್ಲಿ 2013ರಲ್ಲಿ ವರ್ಗಾವಣೆ ಮಾಡಿ ಕಚೇರಿ ನಡೆಸಿದರು.
ಮಳೆ ಬಂದರೆ ರಾತ್ರಿಯಿಡೀ ಜಾಗರಣೆಯೇ ಗತಿಯಾಗಿದೆ. ಸೌಲಭ್ಯ ಕೊರತೆ: ಕಚೇರಿಗೆ ಬರುವ ರೈತರಿಗೆ ಶೌಚಾಲಯ, ಕುಡಿಯುವ ನೀರು ಹಾಗೂ ಚರ್ಚಿಸಲು ಸ್ಥಳವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ರೈತರು ಕಾಲ ಕಳೆಯುವ ಸ್ಥಿತಿ ಒದಗಿದೆ. ಕಚೇರಿಯಲ್ಲಿ ಕಡತಗಳ ಸಂರಕ್ಷಣೆಗೆ ಸುರಕ್ಷಿತವಾದ ಕೊಠಡಿ ಇಲ್ಲ, ಸಿಬ್ಬಂದಿಗೆ ಚೇರ್ ಮತ್ತು ಟೇಬಲ್‌ಗಳು ಇಲ್ಲ ಹಾಗೂ ಕಂಪ್ಯೂಟರ್ ವ್ಯವಸ್ಥೆ ಇಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
50 ವರ್ಷದಿಂದ ದುರಸ್ತಿ ಕಾಣದೇ ಅವ್ಯವಸ್ಥೆಯಲ್ಲಿ
ಇದೆ. ಕಚೇರಿಯ ಸುತ್ತಲೂ ಎಲ್ಲಿ ® ೆ ೂ à ಡಿ ¨ Ã ೂ ತಪ್ಪಲೂ ಹಾಗೂ ಗಿಡ ಗಂಟೆಗಳು ಬೆಳೆದು ನಿಂತಿವೆ. ವಿಷ ಜಂತುಗಳ ವಾಸಸ್ಥಾನವಾಗಿದೆ.
ನಿರ್ಲಕ್ಷ್ಯ: ನೂತನ ತಾಲೂಕು ಕೇಂದ್ರವಾಗಿ ಎರಡು ವರ್ಷ ಕಳೆದಿದೆ. ಹೊಸ ಕಚೇರಿಗಳಂತೂ ಇಲ್ಲ ಇರುವ ಕಚೇರಿಗಳ ದುರಸ್ತಿ, ವಾಹನಗಳ ಹಾಗೂ ಮೂಲ ಸೌಲಭ್ಯಗಳ ವ್ಯವಸ್ಥೆಯನ್ನು
ಮೇಲಧಿ ಕಾರಿಗಳು ತಕ್ಷಣವೇ ಕಲ್ಪಿಸಬೇಕು. ಇಲ್ಲದಿದ್ದರೆ ಕುರುಗೋಡು ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಸಂಘ ಸಂಸ್ಥೆಗಳ ಮುಖಂಡರು ಆಗ್ರಹಿಸಿದ್ದಾರೆ.
ಮೇಲ್ದಂಡೆ ಉಪ ಕಾಲುವೆಯ ವ್ಯಾಪ್ತಿ ಹೆಚ್ಚಿದ್ದರೂ, ಕೆಳಭಾಗದ ರೈತರ ಹೊಲಗಳಿಗೆ ನೀರು ಸರಿಯಾಗಿ ಸರಾಬರಾಜು ಆಗುತ್ತಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ. ಕಚೇರಿಯಲ್ಲಿ ರೈತರಿಗಾಗಿ ಯಾವುದೇ ವ್ಯವಸ್ಥೆಗಳಿಲ್ಲ. ಸಂಬಂಧಿಸಿದ ಅಧಿ ಕಾರಿಗಳು ಕಚೇರಿ ದುರಸ್ತಿ ಹಾಗೂ ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ವಿ.ಎಸ್.ಶಿವಶಂಕರ್, ಜಿಲ್ಲಾಧ್ಯಕ್ಷರು,
ಕರ್ನಾಟಕ ಪ್ರಾಂತ ರೈತ ಸಂಘ.
ಕಚೇರಿ ಸ್ಥಿತಿಯ ಕುರಿತು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅನುದಾನ ಬಂದ ನಂತರ ದುರಸ್ತಿ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಇರುವುದರಲ್ಲಿಯೇ ವ್ಯವಸ್ಥೆ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ.
ಸುರೇಂದ್ರ ರೆಡ್ಡಿ, ಸಹಾಯಕ
ಕಾರ್ಯನಿರ್ವಾಹಕ
ಅಭಿಯಂತರರು, ಕುರುಗೋಡು.
ಸುಧಾಕರ್ ಮಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.