![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, May 30, 2020, 3:42 PM IST
ಸಾಂದರ್ಭಿಕ ಚಿತ್ರ
ಕುರುಗೋಡು: ಮಹಾಮಾರಿ ಕೋವಿಡ್ ವೈರಸ್ ಲಾಕ್‌ಡೌನ್ ಪರಿಣಾಮದಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿಕಾರ್ಮಿಕರಿಗೆ ನರೇಗಾ ಹೂಳೆತ್ತುವ ಕಾಮಗಾರಿ ಭರದಿಂದ ಸಾಗುತ್ತಿದೆ. ಸಮೀಪದ ಗೆಣಿಕೆಹಾಳ್ ಗ್ರಾಪಂ ವ್ಯಾಪ್ತಿಯ ಬಸಾಪುರ, ಗೆಣಿಕೆಹಾಳ್, ಹೊಸ ಗೆಣಿಕೆಹಾಳ್, ಕ್ಯಾದಿಗೆಹಾಳ್‌ಗ್ರಾಮದ ಕೂಲಿ ಕಾರ್ಮಿಕರು ಲಾಕ್ ಡೌನ್‌ನಿಂದಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಖಾಲಿ ಇದ್ದು, ಇದೀಗ ಗೆಣಿಕೆಹಾಳ್ ಗ್ರಾಪಂ ವತಿಯಿಂದ ಗುಂಡಿಗನೂರು ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಭರದಿಂದ ಪ್ರಾರಂಭಗೊಂಡಿದ್ದು ಕೋವಿಡ್ ಕರಿ ನೆರಳಿಗೆ ನರೇಗಾ ಆಸರೆಯಾಗಿದೆ.
ಗ್ರಾಪಂ ವತಿಯಿಂದ ಗುಂಡಿಗನೂರು ಕೆರೆಯಲ್ಲಿ ಒಂದು ವಾರದಿಂದ ಸುಮಾರು 1966 ಕೂಲಿ ಕಾರ್ಮಿಕರಿಗೆ ನರೇಗಾದಲ್ಲಿ ಕೆಲಸ ನೀಡಲಾಗುತ್ತಿದೆ. ಗ್ರಾಪಂಯಲ್ಲಿ 1600 ಜಾಬ್ ಕಾರ್ಡ್ ಹೊಂದಿದ್ದು, ಈಗಾಗಲೇ 15000 ಮಾನವ ದಿನಗಳನ್ನು ಪೂರೈಸಲಾಗಿದೆ. ಇನ್ನೂ ಮಳೆ ಗಾಲ ಪ್ರಾರಂಭವಾಗುವ ತನಕ ಹಂತ ಹಂತವಾಗಿ ಕೂಲಿ ಕಾರ್ಮಿಕರಿಗೆ ನರೇಗಾದಲ್ಲಿ ಕೆಲಸ ನೀಡಲಾಗುವುದು ಎಂದು ಪಿಡಿಒ ಮಂಜುನಾಥ ಹೇಳಿದರು.
ಇನ್ನೂ ಕೆರೆಯಲ್ಲಿ ಕೂಲಿ ಕಾರ್ಮಿಕರು ಎತ್ತಿದ ಹೂಳನ್ನು ವ್ಯರ್ಥ ಮಾಡದೆ ಕ್ಯಾದಿಗೆಹಾಳ್ ಗ್ರಾಮದ ಸುತ್ತಮುತ್ತ ಹಾಗೂ ಕೆರೆ ಪಕ್ಕದ ಖಾಲಿ ಜಾಗದಲ್ಲಿ ಹಾಕಿ ಅದನ್ನು ಸಮತಟ್ಟುಗೊಳಿಸಿ ಅಲ್ಲಿ ಸಸಿಗಳನ್ನು ನೆಟ್ಟು ಹಸಿರು ವಾತಾವರಣ ನಿರ್ಮಾಣ ಮಾಡುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಗುಂಡಿಗನೂರು ಕೆರೆ ಅತಿ ದೊಡ್ಡ ಕೆರೆಯಾದ ಕಾರಣ ಅಲ್ಲಲ್ಲಿ ಮಳೆ ಬಂದಾಗ ಹರಿ ಬಿಂದು ಗ್ರಾಮಕ್ಕೆ ನೀರು ನುಗ್ಗುವ ಸಂಭಾವಗಳು ದಾಸ್ತಿ ಅದ್ದರಿಂದ ನೀರು ಗ್ರಾಮಕ್ಕೆ ಬಾರದಂತೆ ತಡೆಗಟ್ಟುವ ಕೆಲಸಗಳಿಗೆ ಕೂಡ ಹೂಳು ಉಪಯೋಗಿಸಲಾಗುತ್ತಿದೆ.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.