ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೈಬಿಡಿ
Team Udayavani, Jun 3, 2020, 4:29 PM IST
ಸಾಂದರ್ಭಿಕ ಚಿತ್ರ
ಕುರುಗೋಡು: ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರ ಸಂಘ ನೇತೃತ್ವದಲ್ಲಿ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ಕಪ್ಪು ಪಟ್ಟಿ ಧರಿಸಿ ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ವಿಎಸ್. ಶಿವಶಂಕರ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ವಿದ್ಯುತ್ಛಕ್ತಿ ತಿದ್ದುಪಡಿ ಮಸೂದೆ-2020ನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು. ಒಂದು ವೇಳೆ ಜಾರಿಯಾದರೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ವಿದ್ಯುತ್ ಉತ್ಪಾದನೆ ಸರಬರಾಜು ಲಕ್ಷಾಂತರ ಕೋಟಿ ಆಸ್ತಿ-ಪಾಸ್ತಿಗಳು ಖಾಸಗಿ ಲೂಟಿಕೋರರ ಕಾರ್ಪೋರೇಟರ್ ಕಂಪನಿಗಳ ಕೈವಶವಾಗಲಿವೆ ಎಂದು ಆರೋಪಿಸಿದರು.
ಪಂಪಸೆಟ್ ರೈತರಿಗೆ, ಜೆಸ್ಕಾಂ ನೌಕರರಿಗೆ ಭಾರಿ ಪೆಟ್ಟು ಬಿದ್ದಂತಾಗುತ್ತದೆ ಎಂದರು. ಕುರುಗೋಡು ಜೆಸ್ಕಾಂ ಕಚೇರಿ ಮೇಲ್ವಿಚಾರಕ ಡಿ. ಪೊಂಪಾಪತಿ, ರಸ್ತೆಬದಿ ವ್ಯಾಪಾರ ಸಂಘದ ಮುಖಂಡ ಎಚ್.ಎಂ. ವಿಶ್ವನಾಥಸ್ವಾಮಿ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದರು. ಜೆಸ್ಕಾಂ ಕಚೇರಿ ಕಾರ್ಮಿಕ ಮುಖಂಡ ಶೆಕ್ಷಾವಲಿ ಸ್ವಾಗತಿಸಿ, ವಂದಿಸಿದರು. ಪ್ರಾಂತ ರೈತ ಸಂಘದ ಮುಖಂಡ ಗಾಳಿ ಬಸವರಾಜ್, ಕೆಂಚಪ್ಪ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕುರುಗೋಡು ನೌಕರಸಂಘ ಎಇ ಹರಿಕೃಷ್ಣ, ಹಿರಿಯ ಮುಖಂಡ ತಿಮ್ಮಪ್ಪ, ವಸಂತ, ಗೊಡ್ಲೆಪ್ಪ, ಶಾಂತವಿರಯ್ಯಸ್ವಾಮಿ, ಎಸ್‌ಕೆ. ಶ್ವೇತಾ, ವೆಂಕಟಲಕ್ಷ್ಮೀ, ಗೀತಾ, ರಾಧಾಕೃಷ್ಣ, ವೀರೇಶ್, ಗಂಗಾಧರ್, ಕೆಂಚಪ್ಪ, ಸಲೀಮ್ ಬಾಷ, ಮಾಭಾಷ, ಬಸವರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.