ಭತ್ತ ನಾಟಿಗೆ ಆಳುಗಳ ಕೊರತೆ: ರೈತ ಕಂಗಾಲು
| 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ | ನಾಟಿ ಮಾಡಲು ಎಕರೆಗೆ 3 ಸಾವಿರ ರೂ. ನಿಗದಿ
Team Udayavani, Dec 30, 2020, 6:28 PM IST
ಸಿರುಗುಪ್ಪ: ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 28 ಸಾವಿರಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು, ಈಗಾಗಲೇಸುಮಾರು 2,500 ಹೆಕ್ಟೇರ್ ಪ್ರದೇಶದಲ್ಲಿಭತ್ತ ನಾಟಿ ಕಾರ್ಯ ಮುಗಿದಿದ್ದು, 25ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಕಾರ್ಯ ನಡೆಯಬೇಕಾಗಿದೆ.
ತುಂಗಭದ್ರಾ ನದಿಪಾತ್ರದ ಮಣ್ಣೂರು, ಮಣ್ಣೂರು ಸೂಗೂರು, ರುದ್ರಪಾದ,ಹೆರಕಲ್ಲು, ನಿಟ್ಟೂರು, ನಡಿವಿ, ಕೆಂಚನಗುಡ್ಡ,ದೇಶನೂರು ಮುಂತಾದ ಗ್ರಾಮಗಳ ರೈತರುತುಂಗಭದ್ರ ನದಿಯಿಂದ ಏತನೀರಾವರಿಮೂಲಕ ನೀರು ಹರಿಸಿಕೊಂಡು ಭತ್ತ ನಾಟಿ ಕಾರ್ಯವನ್ನು ಮಾಡಿದ್ದಾರೆ.
ಆದರೆ ಕೆಂಚಿಹಳ್ಳ, ಗರ್ಜಿಹಳ್ಳ, ವೇದಾವತಿ ಹಗರಿನದಿ, ದೊಡ್ಡಹಳ್ಳ ಮತ್ತುಎಲ್‌ಎಲ್‌ಸಿ ಕಾಲುವೆ ನೀರನ್ನು ಬಳಸಿ ಭತ್ತ ನಾಟಿ ಮಾಡುವ ಕಾರ್ಯದಲ್ಲತೊಡಗಿದ್ದು, ನಾಟಿ ಮಾಡಲು ಬೇಕಾದ ಕೂಲಿಯಾಳುಗಳ ಕೊರತೆ ಹೆಚ್ಚಾಗಿದ್ದು, ನಾಟಿ ಕಾರ್ಯ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದೆ.
ತಾಲೂಕಿನಲ್ಲಿರುವ ಬಹುತೇಕ ಕೂಲಿಕಾರ್ಮಿಕರು ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ಸೀಮಾಂಧ್ರ ಪ್ರದೇಶ ಹಾಗೂ ಸಿಂಧನೂರು ಭಾಗದರೈತರ ಹೊಲದಲ್ಲಿ ಹತ್ತಿ, ಒಣ ಮತ್ತುಹಸಿ ಮೆಣಸಿನಕಾಯಿ ಬಿಡಿಸಲುಗುಂಪುಗುಂಪಾಗಿ ತೆರಳುತ್ತಿರುವುದರಿಂದಭತ್ತ ನಾಟಿಗೆ ಕಾರ್ಮಿಕರ ಕೊರತೆಹೆಚ್ಚಾಗಿದೆ. ಇದರಿಂದಾಗಿ ಭತ್ತ ಸಸಿ ಕಿತ್ತುನಾಟಿಮಾಡಲು ಒಂದು ಎಕರೆಗೆ ರೂ. 3 ಸಾವಿರ ಬೆಲೆ ನಿಗದಿಯಾಗಿದ್ದರೂ ಭತ್ತನಾಟಿಗೆ ಕಾರ್ಮಿಕರು ಸಿಗದೆ ರೈತರು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ನಾಟಿಮಾಡಲು ಭತ್ತದ ಸಸಿಗಳನ್ನು ಹಾಕಿ ಒಂದು ತಿಂಗಳು ಕಳೆದಿದೆ,
ಒಂದು ತಿಂಗಳೊಳಗೆ ಭತ್ತದ ಸಸಿಗಳನ್ನು ನಾಟಿಮಾಡಿದರೆ ಉತ್ತಮವಾಗಿ ಬೆಳೆದು ಹೆಚ್ಚಿನ ಇಳುವರಿ ಸಿಗುತ್ತದೆ ಎನ್ನುವಕಾರಣಕ್ಕೆಬಹುತೇಕ ರೈತರು ತಮ್ಮ ಗದ್ದೆಗಳಿಗೆ ನೀರು ಹರಿಸಿಕೊಂಡು ನಾಟಿಗೆ ಸಿದ್ಧಮಾಡಿಕೊಂಡು ಕಾಯುತ್ತಿದ್ದಾರೆ. ತಿಂಗಳ ನಂತರ ಭತ್ತದ ಸಸಿಗಳನ್ನು ನಾಟಿಮಾಡಿದರೆ ಇಳುವರಿ ಕಡಿಮೆಯಾಗುತ್ತದೆ ಎನ್ನುವ ಕಾರಣದಿಂದ ತಾಲೂಕಿನ ರೈತರು ಸೀಮಾಂಧ್ರಪ್ರದೇಶ ಮತ್ತು ಸಿಂಧನೂರು ತಾಲೂಕಿನಲ್ಲಿ ಭತ್ತನಾಟಿಮಾಡುವ ಕಾರ್ಮಿಕರನ್ನು ಅವರುಕೇಳಿದಷ್ಟು ಕೂಲಿಹಣವನ್ನು ಕೊಟ್ಟುಆಟೋಗಳಲ್ಲಿ ಕರೆತಂದು ನಾಟಿಕಾರ್ಯ ಮಾಡಿಸುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಒಂದುಎಕರೆ ಭತ್ತ ನಾಟಿಗೆ ರೂ. 2 ಸಾವಿರಗಳನ್ನುಭತ್ತದ ಸಸಿಕಿತ್ತು ನಾಟಿಮಾಡಲುಕೊಡಲಾಗಿತ್ತು. ಆದರೆ ಈಗ ಹತ್ತಿಮತ್ತು ಮೆಣಸಿನಕಾಯಿ ಬಿಡಿಸಲುಕೂಲಿಕಾರ್ಮಿಕರಿಗೆ ದಿನಕ್ಕೆ ರೂ. 200 ಕೂಲಿಕೊಡುತ್ತಿರುವುದರಿಂದ ಹೆಚ್ಚಿನ ಕಾರ್ಮಿಕರುಭತ್ತನಾಟಿಗೆ ಬರುತ್ತಿಲ್ಲ. ಇದರಿಂದಾಗಿ ರೂ.3 ಸಾವಿರ ಕೊಟ್ಟರು ಭತ್ತ ನಾಟಿಕಾರ್ಯವಿಳಂಬವಾಗಿ ನಡೆಯುತ್ತಿದೆ ಎಂದುರೈತರಾದ ಕಾಡಸಿದ್ದಪ್ಪ, ವೈ. ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತಬೆಳೆಯಲಾಗುತ್ತಿದ್ದು, ತುಂಗಭದ್ರಾನದಿಪಾತ್ರದ ಜಮೀನುಗಳಲ್ಲಿ ಭತ್ತನಾಟಿಕಾರ್ಯ ಭರದಿಂದ ನಡೆದಿದ್ದು,ಸುಮಾರು 2.500 ಹೆಕ್ಟೇರ್‌ನಲ್ಲಿ ಭತ್ತನಾಟಿಕಾರ್ಯ ಮುಗಿದಿದೆ ಎಂದು ಸಹಾಯಕಕೃಷಿ ನಿರ್ದೇಶಕ ನಜೀರ್ ಅಹಮ್ಮದ್ ತಿಳಿಸಿದ್ದಾರೆ.
-ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್ ಶೂಟಿಂಗ್
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.