ಹಣತೆ ಮಾರಾಟ ಜೋರು
Team Udayavani, Nov 11, 2020, 9:14 PM IST
ಸಿರುಗುಪ್ಪ: ದೀಪಾವಳಿ ಹಬ್ಬದ ಅಂಗವಾಗಿ ನಗರದ ವಿವಿಧ ಕಡೆಗಳಲ್ಲಿ ದೀಪ ಹಚ್ಚುವ ವಿವಿಧ ಬಗೆಯ ಆಕಾರದ ಹಣತೆಗಳ ಮಾರಾಟ ಆರಂಭವಾಗಿದೆ. ನಗರದ ಬಳ್ಳಾರಿ ರಸ್ತೆ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ತಳ್ಳುಗಾಡಿಗಳ ಮೇಲೆ ಮಾರಾಟಗಾರರು ವಿವಿಧ ಬಗೆಯ ಹಣತೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
5 ದೀಪ ಹಚ್ಚುವ ಹಣತೆ, ಚಿಕ್ಕ ಚಿಕ್ಕ ಹಣತೆ, ಗಾಜಿನ ಗ್ಲಾಸ್ ಅಳವಡಿಸಿದ ಹಣತೆ, ಶಂಕುವಿನ ಆಕಾರದ ಹಣತೆ ಸೇರಿದಂತೆ ವಿವಿಧ ಆಕಾರದಹಣತೆಗಳನ್ನು ಮಾರಾಟಕ್ಕಿಟ್ಟಿದ್ದು, ರೂ. 35ರಿಂದ ರೂ. 300ರ ಮೌಲ್ಯದಹಣತೆಗಳು ಮಾರಾಟಕ್ಕಿವೆ. ಹೆಚ್ಚಿನಬೆಲೆಯ ಹಣತೆಗಳನ್ನು ಕೆಲವು ಜನರು ಮಾತ್ರ ಖರೀದಿ ಮಾಡುತ್ತಿದ್ದು, ರೂ. 100 ಬೆಲೆ ಒಳಗಿನ ಹಣತೆಗಳನ್ನು ಹೆಚ್ಚಾಗಿ ಮಾರಾಟವಾಗುತ್ತಿರುವುದು ಕಂಡು ಬರುತ್ತಿದೆ.
ಈ ವರ್ಷ ಕೋವಿಡ್ ಕಾಟದಿಂದ ವ್ಯಾಪಾರ ಉತ್ತಮವಾಗಿ ನಡೆಯುತ್ತಿಲ್ಲ. ಕಳೆದ ವರ್ಷ ಹಣತೆಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗಿತ್ತು. ಈ ವರ್ಷ ಹಬ್ಬ 2-3ದಿನ ಮುಂದೆ ಇದ್ದರೂ ವ್ಯಾಪಾರ ಅಷ್ಟಕ್ಕಷ್ಟೆ ಎನ್ನುವಂತೆ ನಡೆಯುತ್ತಿದೆ ಎಂದು ಹಣತೆಗಳ ವ್ಯಾಪಾರಿ ಸುಂಕಮ್ಮ ತಿಳಿಸಿದ್ದಾರೆ.ದೀಪಾವಳಿ ಹಬ್ಬವು ಬೆಳಕಿನ ಹಬ್ಬವಾಗಿದ್ದು, ದೀಪಾವಳಿಯಂದು ಮನೆ ಸುತ್ತಮುತ್ತಲು ಬೆಳಗಲು ಬೇಕಾದ ಮಣ್ಣಿನ ಹಣತೆಗಳನ್ನು ಕೊಂಡುಕೊಳ್ಳುತ್ತಿದ್ದೇವೆ.ಕಳೆದ ವರ್ಷಕ್ಕಿಂತ ಈ ವರ್ಷ ಹಣತೆಗಳ ಬೆಲೆ ಹೆಚ್ಚಾಗಿದೆ ಎಂದು ನಗರದ ಗೃಹಿಣಿ ಪಾರ್ವತಿ ತಿಳಿಸಿದ್ದಾರೆ.
ಮಾಸ್ಕ್ ಧರಿಸಿ ಕೋವಿಡ್ ಓಡಿಸಿ :
ಸಂಡೂರು: ಕೋವಿಡ್ ನಮ್ಮಿಂದ ಇನ್ನೂ ದೂರವಾಗಿಲ್ಲ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಸ್ಯಾನಿಟೈಸರ್ ಬಳಸಿ ರೋಗ ಓಡಿಸಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶಿವಪ್ಪ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಸರ್ಕಾರಿ ಅಸ್ಪತ್ರೆ ಮುಂಭಾಗದಲ್ಲಿ ಕೋವಿಡ್ ಜಾಗೃತಿ ಮತ್ತು ಎಚ್ಚರಿಕೆಯ ಕಾರ್ಯಕ್ರಮದಲ್ಲಿ ಪ್ರತಿಜ್ಞೆಯನ್ನು ಮಾಡಿಸಿ ಮಾತನಾಡಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಪ್ರತಿಜ್ಞೆ ಮಾಡಿ ರೋಗ ಹರಡದಂತೆ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸುತ್ತೇನೆ. ಸಾಮಾಜಿಕ ಅಂತರ ಕಾಪಾಡುತ್ತೇನೆ, ಸ್ಯಾನಿಟೈಸರ್ ಬಳಸುತ್ತೇನೆ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಿ ಎಚ್ಚರಿಸುತ್ತೇನೆ, ಪ್ರತಿಯೊಬ್ಬರಿಗೂ ಸಹ ಈ ಬಗ್ಗೆ ಮಾಹಿತಿ ನೀಡುವಲ್ಲಿ ಸಹಕರಿಸುತ್ತೇನೆ, ಸಮೀಕ್ಷೆ ಮತ್ತು ಮಾಹಿತಿ ಪಡೆಯಲು ಬಂದವರಿಗೆ ಸಹಕರಿಸುತ್ತೇನೆ ಎನ್ನುವ ಪ್ರತಿಜ್ಞೆಯನ್ನು ಬೋಧಿಸಿ ಎಚ್ಚರಿಕೆ ಕ್ರಮಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಅಸ್ಪತ್ರೆ ಮುಂಭಾಗದಲ್ಲಿ ಅಸ್ಪತ್ರೆ ಸಿಬ್ಬಂದಿ, ರೋಗಿಗಳು ಪ್ರತಿಜ್ಞೆ ಮಾಡಿದರು. ಡಾ| ಅರ್ಚನಾ, ಡಾ| ದೀಪಾ ಪಾಟೀಲ್, ಡಾ| ಬಸವೇಶ್, ಮಂಜುನಾಥ ವೆಂಕಟೇಶ್, ಕಿರಣ್, ಇಸ್ಮಾಯಿಲ್, ನರ್ಸ ಲಕ್ಷ್ಮೀ ಗೀತಾ, ಸಿಪಿಐ ಸ್ವಾಮಿ, ಶ್ರೀನಿವಾಸ, ನಿಜಾಮುದ್ದಿನ್ ಪ್ರತಿಜ್ಞೆ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
Loophole: ನಿಮ್ಮ ಪಡಿತರ ಅಪಾಯದಲ್ಲಿ? ಸೇವಿಸುವ ಆಹಾರ ಎಷ್ಟು ಸುರಕ್ಷಿತ?
Big Claim: ನನ್ನ ರಾಜಕೀಯ ಜೀವನ ರೂಪಿಸಿದ್ದು, ಕೆಡವಿದ್ದು ಗಾಂಧಿಗಳು: ಮಣಿಶಂಕರ್ ಅಯ್ಯರ್
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.