ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಕೈಬಿಡಲು ಮನವಿ
Team Udayavani, Jul 22, 2020, 3:59 PM IST
ಸಂಡೂರು: ರೈತನು ಒಕ್ಕಿದರೆ ಜಗವೆಲ್ಲ ಬಿಕ್ಕುವುದು ಎನ್ನುವ ಮಾತಿನಂತೆ ರೈತರು ತಮ್ಮದೇ ಅದ ರೈತ ದಿನಾಚರಣೆ ಆಚರಿಸುತ್ತಿದ್ದೇವು. ಆದರೆ ಈ ಬಾರಿ ಕೋವಿಡ್ ಮತ್ತು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಾಗಿದೆ. ಬಿತ್ತಲೂ ಬೀಜವೂ ಸಹ ಸಿಗದಂಥ ದುಸ್ಥಿತಿಗೆ ತಲುಪಿದ್ದು ಅದಕ್ಕಾಗಿ ಜುಲೈ 21ನ್ನು ರೈತರ ಸಮಸ್ಯೆಗಳ ಹೋರಾಟದ ದಿನವನ್ನಾಗಿ ಆಚರಿಸುತ್ತೇವೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಎಂ.ಉಜ್ಜಿನಯ್ಯ ಉಪತಹಶೀಲ್ದಾರ್ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸು ಹಕ್ಕೋತ್ತಾಯದ ದಿನ ಆಚರಿಸಲು ಮನವಿ ಮಾಡಿದರು.
ಅವರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮನವಿ ಪತ್ರ ಸಲ್ಲಿಸಿ ಮಾತನಾಡಿ, ರೈತರಿಗೆ ಮಾರಕವಾದ 1971ರ ಭೂ ಸುಧಾರಣಾ ಕಾಯಿದೆ ತಿದ್ದುಪಡಿಯನ್ನು ತಕ್ಷಣ ವಾಪಾಸ್ ಪಡೆಯಬೇಕು. ಎಪಿಎಂಸಿ ಮಾರುಕಟ್ಟೆ ತಿದ್ದುಪಡಿ ಕಾಯಿದೆಯನ್ನು ವಾಪಾಸ್ ಪಡೆಯುವ ಮೂಲಕ ಬಂಡವಾಳ ಶಾಹಿಗಳ ರಕ್ಷಣೆ ನಿಲ್ಲಬೇಕು. ರೈತರ ರಕ್ಷಣೆಗೆ ಮುಂದಾಗಬೇಕು. ಕೇಂದ್ರದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು. ಈಗಾಗಲೇ ರೈತ ಬೆಳೆಯಲು ಪರದಾಡುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಹೊರೆಯನ್ನು ಹಾಕಲು ಹೊರಟಿರುವ ಸರ್ಕಾರ ಈ ದುಷ್ಟ ನೀತಿ ಕೈಬಿಡಬೇಕು. ರೈತರು ಸಾಲಮಾಡಿ ಬಿತ್ತಿ ಬೆಳೆದರೂ ಮಾರುಕಟ್ಟೆ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ರಕ್ಷಣೆಗೆ ಸೂಕ್ತ ಪರಿಹಾರ ಮತ್ತು ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಮುಖಂಡ ಎಂ.ಎಲ್.ಕೆ.ನಾಯಡು ಅವರು ಮಾತನಾಡಿ, ಬಗರ್ ಹುಕುಂ ಜಮೀನುಗಳನ್ನು ರೈತರಿಗೆ ಪಟ್ಟಾ ನೀಡಬೇಕು. ಗಣಿತ್ಯಾಜ್ಯದಿಂದ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಗಣಿ ಕಂಪನಿಗಳು ಸೂಕ್ತ ಪರಿಹಾರ ನೀಡಬೇಕು, ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ ಮಾಹಿತಿಯೂ ರವಾನೆಯಾಗುತ್ತಿಲ್ಲ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ರೈತ ಮುಖಂಡರಾದ ಗಡಂಬ್ಲಿ ಕುಮಾರಪ್ಪ, ದೊಡ್ಡಮಲ್ಲಯ್ಯ, ನಾಗಪ್ಪ, ಎಂ.ಎಲ್. ಕೆ. ನಾಯಡು, ಬಿ.ಎಂ. ಉಜ್ಜಿನಯ್ಯ ಇತರ ಹಲವಾರು ರೈತರು ಮನವಿ ಪತ್ರ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.