ಹಳ್ಳದಲ್ಲಿ ಲಾರಿ ಪಲ್ಟಿ: ಮೂವರ ರಕ್ಷಣೆ
•ನೀರಿನ ರಭಸಕ್ಕೆ ನಿಯಂತ್ರಣ ತಪ್ಪಿದ ಲಾರಿ •ಭಾನುವಾರ ರಾತ್ರಿ ವಿವಿಧೆಡೆ ಭಾರೀ ಮಳೆ
Team Udayavani, Jun 11, 2019, 8:44 AM IST
ಸಿರುಗುಪ್ಪ: ರಾರಾವಿ ಗ್ರಾಮದ ಯಲ್ಲಮ್ಮನ ಹಳ್ಳದ ನೀರಿನಲ್ಲಿ ಪಲ್ಟಿಯಾದ ಲಾರಿ ಮೇಲೆ ನಿಂತಿರುವ ಚಾಲಕ ಮತ್ತು ಕ್ಲೀನರ್ಗಳು.
ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಯಲ್ಲಮ್ಮನ ಹಳ್ಳದ ನೀರಿನಲ್ಲಿ ಲಾರಿ ಪಲ್ಟಿಯಾಗಿ ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ನಡೆದಿದೆ.
ಭಾನುವಾರ ರಾತ್ರಿ ನೆರೆಯ ಸೀಮಾಂಧ್ರಪ್ರದೇಶದ ಹೊಳಗುಂದಿ, ಎಳ್ಳಾರ್ತಿ ಮುಂತಾದ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಮತ್ತು ತಾಲೂಕಿನ ಬಗ್ಗೂರು, ಕೆ.ಬೆಳಗಲ್ಲು ಗ್ರಾಮಗಳಲ್ಲಿ ಸಾಧಾರಣ ಮಳೆ ಸುರಿದಿದ್ದರಿಂದ ಸಿರಗುಪ್ಪ-ಆದೋನಿ ರಸ್ತೆಯಲ್ಲಿರುವ ಯಲ್ಲಮ್ಮನ ಹಳ್ಳಕ್ಕೆ ಏಕಾಏಕಿ ಅತಿ ಹೆಚ್ಚು ನೀರು ಬಂದಿದೆ.
ನೀರಿನ ರಭಸಕ್ಕೆ ಸೀಮಾಂಧ್ರದಿಂದ ಸಿರಗುಪ್ಪಕ್ಕೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಶೇಕ್ಇದಾಯತ್, ಜುರೇನ್ ಅಹ್ಮದ್, ಮುಶೀರ್ಅಹ್ಮದ್ರನ್ನು ಸಿರಗುಪ್ಪ ಸಿಪಿಐ ಮೌನೇಶ್ಮಾಲೀಪಾಟಿಲ್ ನೇತೃತ್ವದಲ್ಲಿ ನಗರದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದಿಂದ ತೆಪ್ಪದ ಮೂಲಕ ರಕ್ಷಿಸಲಾಗಿದೆ.
ಭಾನುವಾರ ರಾತ್ರಿ ವಿವಿಧೆಡೆ ಸಾಧಾರಣ ಮಳೆ ಸುರಿದಿದ್ದು, ಸಿರಗುಪ್ಪ-3.5 ಮೀ. ಮೀ., ತೆಕ್ಕಲಕೋಟೆ-4.4, ಸಿರಿಗೇರಿ-2.3, ಎಂ. ಸೂಗೂರು-13.8, ಹಚ್ಚೊಳ್ಳಿ-18.5, ಕರೂರು-6.6, ಕೆ.ಬೆಳಗಲ್ಲು-8.2, ರಾವಿಹಾಳ್-25.02 ಮೀ.ಮೀ. ಮಳೆಯಾಗಿದೆ ಎಂದು ಸಾಂಖೀಕ ಇಲಾಖೆ ಅಧಿಕಾರಿ ಬಾಬು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.