ಹಂಪಿ: ಹಗಲಲ್ಲೇ ಚಿರತೆಗಳು ಪ್ರತ್ಯಕ್ಷ; ಪ್ರವಾಸಿಗರಲ್ಲಿ ಆತಂಕ
Team Udayavani, Feb 16, 2017, 12:28 PM IST
ಬಳ್ಳಾರಿ: ವಿಶ್ವಪರಂಪರೆಯ ತಾಣ, ಸದಾ ಪ್ರವಾಸಿಗರಿಂದ ತುಂಬಿರುವ ಹಂಪಿಯಲ್ಲಿ ಚಿರತೆಗಳು ಹಗಲಲ್ಲೇ ರಾಜಾರೋಷವಾಗಿ ತಿರುಗುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
ಕಳೆದ ಕೆಲ ದಿನಗಳಿಂದ ಪದೇ ಪದೇ ಚಿರತೆಗಳು ಹಗಲಲ್ಲೇ ಪ್ರತ್ಯಕ್ಷವಾಗಿದ್ದು ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಕೆಲ ಪ್ರವಾಸಿಗರು ಆತಂಕದಿಂದ ಕಾಲ್ಕಿತ್ತ ಘಟನೆಯೂ ನಡೆದಿದೆ.
ಕಡ್ಡಿರಾಂಪುರ ಮಾರ್ಗದ ಬಳಿಯ ಕುಸ್ತಿ ಅಖಾಡದ ಬಳಿ ಕೃಷ್ಣ ಬಜಾರ್, ಅಕ್ಕ ತಂಗಿಯರ ಗುಡ್ಡ, ಮಾತಂಗ ಪರ್ವತ, ಯಂತ್ರೋದ್ಧಾರಕ ಆಂಜನೇಯ ಗುಡ್ಡಗಳಲ್ಲಿ ಪ್ರವಾಸಿಗರಿಗೆ ಚಿರತೆಗಳು ಪ್ರತ್ಯಕ್ಷ ವಾಗುವ ಮೂಲ ಕ ಭೀತಿ ಮೂಡಿಸಿವೆ.
ಈ ಹಿಂದೆ ಅರಣ್ಯ ಇಲಾಖೆ ಕೆಲ ಚಿರತೆಗಳನ್ನು ಹಿಡಿರು ಅರಣ್ಯಕ್ಕೆ ಬಿಟಿದ್ದರಾದರೂ ಈಗ 7 ರಿಂದ 8 ಚಿರತೆಗಳು ಸ್ಥಳದಲ್ಲೇ ನೆಲೆಸಿರುವ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೀಗ ಹಾಡಹಗಲೇ ಚಿರತೆಗಳು ಕಣ್ಣಿಗೆ ಕಾಣ ಸಿಗುವ ಕಾರಣ ಕೆಲ ಆಸಕ್ತ ವನ್ಯ ಜೀವಿ ಛಾಯಾಗ್ರಾಹಕರು ಹಂಪಿಗೆ ಆಗಮಿಸಿ ಫೋಟೋ ತೆಗೆಯಲು ಮುಂದಾಗಿದ್ದಾರೆ.
ಹಂಪಿಯ ಸುತ್ತಲಿನ ಪ್ರದೇಶದಲ್ಲಿ ದಟ್ಟ ಪೊದೆಗಳು ಮತ್ತು ಅರಣ್ಯವಿರುವುದರಿಂದ ಚಿರತೆ ಮತ್ತು ಕರಡಿಗಳು ವಾಸವಾಗಿವೆ. ಈ ಬಗ್ಗೆ ಅರಣ್ಯ ಇಲಾಖೆ ಯೂ ತಲೆ ಕೆಡಿಸಿಕೊಂಡಿದ್ದು ಪ್ರವಾಸಿಗರಿಗೆ ಮುಂದಾಗುವ ಸಂಭಾವ್ಯ ಅಪಾಯವನ್ನು ತಪ್ಪಿಸುವ ಸಲುವಾಗಿ ಚಿರತೆಗಳನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡುವ ಬಗ್ಗೆ ಚಿಂತನೆ ನಡೆಸಿರುವ ಬಗ್ಗೆ ವರದಿಯಾಗಿದೆ.
1985ರಲ್ಲಿ ಹಂಪಿ ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೋ ಘೋಷಿಸಿದ ಬಳಿಕ ವಿದೇಶಿ ಪ್ರವಾಸಿಗರು ಹರಿದು ಬರುತ್ತಿದ್ದು ವಾರ್ಷಿಕ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.