ಬಿಟ್ಟು ಬಿಡಿ ಸರ್; ಇನ್ನೊಮ್ಮೆ ಹೊರಗೆ ಬರಲ್ಲ
Team Udayavani, May 22, 2021, 10:44 AM IST
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿರುವಹಿನ್ನೆಲೆಯಲ್ಲಿ ಮನೆಯಿಂದ ಹೊರಬರುವವರನ್ನು ವಶಕ್ಕೆ ಪಡೆದುವಾಹನಗಳನ್ನು ಪೊಲೀಸರು ಶುಕ್ರವಾರ ಸೀಜ್ ಮಾಡಿದರು. ಲಾಕ್‌ಡೌನ್‌ನ ಮೂರನೇ ದಿನ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸಿದರು.
ನಗರದ ಮೂರಂಗಡಿ ವೃತ್ತ, ಗಾಂಧಿ ಚೌಕ್,ಬಸ್ ಡಿಪೋ ಬಳಿ ವಾಹನಗಳನ್ನು ಪೊಲೀಸರುಸೀಜ್ ಮಾಡಿದರು. ಅನಗತ್ಯವಾಗಿ ಮನೆಗಳಿಂದಹೊರಗಡೆ ಬಂದವರಿಗೆ ಪೊಲೀಸರು ಎಚ್ಚರಿಕೆಯೂನೀಡಿದರು. ವಾಹನ ಸೀಜ್ ಮಾಡಿ, ಪೊಲೀಸ್ ಠಾಣೆಗೆ ಒಯ್ದರು.
ಹೊರ ಬಂದವರು ವಶಕ್ಕೆ: ಮನೆಗಳಿಂದ ಅನಗತ್ಯ ಹೊರಬಂದವರನ್ನು ಪೊಲೀಸರು ವಶಕ್ಕೆ ಪಡೆದರು.ಈ ವೇಳೆ “ಸರ್ ಬಿಟ್ಟು ಬಿಡಿ ಸರ್, ಇನ್ನೊಂದು ಸಲಬರೋಲ್ಲಾ, ನಮ್ಮ ಮನೆಯಲ್ಲಿ ತಾಯಿ ಒಬ್ರೆ ಇದ್ದಾರೆ,ಇನ್ನೊಂದು ಸಲ ಬರೋಲ್ಲಾ ಬಿಡಿ ಸರ್’ ಎಂದುಹೊರ ಬಂದಿದ್ದ ಯುವಕರು ಗೊಗರೆದರು.ಪೊಲೀಸ್ ಜೀಪ್ ಏರಲು ಹಿಂದೇಟು ಹಾಕಿದಯುವಕರು ತಮ್ಮ ಮನೆಗಳಲ್ಲಿ ಒಬ್ಬಬ್ಬರೇ ಇದ್ದಾರೆ.ದಯವಿಟ್ಟು ಬಿಟ್ಟುಬಿಡಿ ಎಂದು ಪೊಲೀಸರ ಬಳಿಕೋರಿದರು. ನಿಮ್ಮನ್ನ ಹೊಡೆಯೋಲ್ಲಾ, ಮೊದಲು ಜೀಪ್ ಹತ್ತಿ ಎಂದು ವಾಹನ ಹತ್ತಿಸಿದ ಪೊಲೀಸರು. ನಗರದ ಹಂಪಿ ರಸ್ತೆಯಲ್ಲಿ ಅನಗತ್ಯ ಹೊರ ಬಂದು ನಾಟಕವಾಡಿದ ಯುವಕರಿಗೆ ಪೊಲೀಸರು ಲಾಠಿರುಚಿ ಕೂಡ ತೋರಿಸಿದರು. ಹೊರಬಂದಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ನಗರ ಸೇರಿದಂತೆ ಕಮಲಾಪುರ, ಮರಿಯಮ್ಮನಹಳ್ಳಿ, ಹಂಪಿ ಭಾಗದಲ್ಲೂಪೊಲೀಸರು ನಾಕಾಬಂದಿ ಹಾಕಿ ಅನಗತ್ಯ ಹೊರಬಂದಿದ್ದ ವಾಹನಗಳನ್ನು ತಪಾಸಣೆ ನಡೆಸಿದರು. ಈವೇಳೆ ಕೆಲವರನ್ನು ವಶಕ್ಕೆ ಪಡೆದು ವಾಹನ ಸೀಜ್ ಮಾಡಿದರು.
ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಪೊಲೀಸರು ಅನಗತ್ಯವಾಗಿ ಹೊರಬಂದವರಿಗೆ ಲಾಠಿ ಏಟಿನ ರುಚಿ ಉಣಬಡಿಸುತ್ತಿದ್ದರು. ಮನೆಗಳಿಂದ ಹೊರ ಬಂದು ಮೈದಾನಗಳಲ್ಲಿ ಕ್ರಿಕೆಟ್ ಆಡುವವರು ಹಾಗೂ ಕಟ್ಟೆಗಳಲ್ಲಿ ಕುಳಿತವರಿಗೂ ಲಾಠಿಏಟು ನೀಡಿ ಮನೆಗಳಿಗೆ ಕಳುಹಿಸಿದ ಪ್ರಸಂಗಗಳು ಕೂಡ ಜರುಗಿದವು. ಕಟ್ಟುನಿಟ್ಟಿನ ಲಾಕ್‌ಡೌನ್ ಅನ್ನು ಜಾರಿಗೊಳಿಸಿ ಕೊರೊನಾ ಕೊಂಡಿ ಕಳಚಲುಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಹೀಗಾಗಿ ಪೊಲೀಸರುಅನಗತ್ಯವಾಗಿ ಹೊರಬರುವವರನ್ನು ವಶಕ್ಕೆ ಪಡೆದು, ವಾಹನ ಸೀಜ್ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು
ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು
PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.