ಹುದ್ದಲಿಯಲ್ಲಿ 7 ದಿನ ವಾಸವಿದ್ದ ಮಹಾತ್ಮ ಗಾಂಧೀಜಿ
Team Udayavani, Aug 10, 2018, 3:03 PM IST
ಬಳ್ಳಾರಿ: ರಾಷ್ಟ್ರಪತಿ ಮಹಾತ್ಮಾಗಾಂಧಿಜಿಯವರು ಹುದ್ದಲಿ ಗ್ರಾಮಕ್ಕೆ ಆಗಮಿಸಿ 7 ದಿನಗಳ ಕಾಲ ನಮ್ಮೊಂದಿಗೆ ವಾಸವಿರುವುದು ಅವಿಸ್ಮರಣೀಯವಾದ ಸವಿನೆನಪು ಎಂದು ಹಿರಿಯ ಸ್ವಾತಂತ್ರ್ಯಾ ಹೋರಾಟಗಾರ ಗಂಗಪ್ಪ ಮುದ್ದಪ್ಪ ಮಾಳಗಿ ಸ್ಮರಿಸಿದರು.
ನಗರದ ಗಾಂಧಿ ಭವನದಲ್ಲಿ ಮಲ್ಲಸಜ್ಜನ ವ್ಯಾಯಾಮ ಶಾಲೆ, ಭಾರತ್ ಸೇವಾದಳದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ ಭಾರತ-70 ಸ್ಮಾರಕದ ಲೋಕಾರ್ಪಣೆ ಮತ್ತು ಕ್ವಿಟ್ ಇಂಡಿಯಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯ ಹುದ್ದಲಿ ಗ್ರಾಮದಲ್ಲಿ ದೇಶದ ಸ್ವಾತಂತ್ರ್ಯಾಕ್ಕಾಗಿ ಬ್ರಿಟಿಷರ ವಿರುದ್ಧ ಬ್ರಿಟಿಷರ ಕೆಲಸ ಇಲ್ಲೇನಿದೆ ಎಂಬ ಘೋಷಣೆಗಳನ್ನು ಕೂಗಿ ಮನೆಗೊಬ್ಬರು ಹೋರಾಟಗಾರರು ಜೈಲು ಸೇರಿದ್ದರು ಎಂದು ಸ್ಮರಿಸಿದ ಅವರು, ದೇಶಕ್ಕೆ ಸ್ವತಂತ್ರ ಸಿಕ್ಕ ಬಳಿಕ ಇಂದಿನ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬುದನ್ನು ತಿಳಿಯಬೇಕು. ದೊರೆತಿರುವ ಸ್ವತಂತ್ರ್ಯಾವನ್ನು ಉಳಿಸಿಕೊಳ್ಳುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದೆ.
ಮೊಮ್ಮಗಳ ಮದುವೆ ನಿಮಿತ್ತ ಮನೆಗೆ ಬಂದಿದ್ದ ಗಾಂಧೀಜಿಯವರು, ಏಳು ದಿನಗಳ ಕಾಲ ಗ್ರಾಮದಲ್ಲಿ ನಮ್ಮೊಂದಿಗೆ ವಾಸವಾಗಿರುವುದು ಅವಿಸ್ಮರಣೀಯ ಎಂದು ಸ್ಮರಿಸಿದರು. ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ದೇಶವನ್ನು ಕಟ್ಟುವಲ್ಲಿ ಸಾಕಷ್ಟು ಹೋರಾಟಗಾರರು, ಹಿರಿಯರು ಶ್ರಮಿಸಿದ್ದಾರೆ. ಆದರೂ, ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟು ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯಾ
ಸಿಕ್ಕಿದೆಯಾದರೂ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸ್ವಾತಂತ್ರ್ಯಾ ಸಿಗಬೇಕಾಗಿದೆ. ಗಾಂಧಿಜಿಯವರು ಕಂಡ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಬಡತನ ನಿರ್ಮೂಲನೆಗೆ ಶ್ರಮಿಸಬೇಕು. ಅಹಿಂಸೆ, ಸತ್ಯ
ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಯುವಕರು ಯಾವುದೇ ಕಾರ್ಯ ಮಾಡುವ ಮುನ್ನ ಒಂದಷ್ಟು ಭಯ ಸಹಜ. ಆದರೆ, ಪ್ರಯತ್ನ ಮುಖ್ಯ. ಪ್ರಯತ್ನವಿಲ್ಲದೇ ಯಶಸ್ಸು ಅಸಾಧ್ಯ. ಯಶಸ್ಸು ದೊರೆಯುವುದೋ ಇಲ್ಲವೋ ಎಂಬುದರ ಬಗ್ಗೆ ಚಿಂತಿಸಿ ಪ್ರಯತ್ನವನ್ನೇ ಮಾಡದೆ, ಸೋತಿದ್ದೇನೆ ಎಂಬುದಕ್ಕೆ ಅರ್ಥವೇ ಇಲ್ಲ. ಅದ್ದರಿಂದ ಮೊದಲು ಪ್ರಯತ್ನಿಸಬೇಕು.
ಆ ಪ್ರಯತ್ನ ತಮ್ಮನ್ನು ಗೆಲುವಿನತ್ತ ಕೊಂಡೊಯ್ಯುವಂತಿರಬೇಕು. ಗಾಂಧಿಜಿಯವರು ಸಹ ಪ್ರಯತ್ನದ ಮೂಲಕವೇ ಬ್ರಿಟಿಷರನ್ನು ದೇಶಬಿಟ್ಟು ಓಡಿಸಿ ಸ್ವತಂತ್ರ್ಯಾ ತಂದುಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜ್ಯೋತಿಗೆ ಅದ್ಧೂರಿ ಸ್ವಾಗತ; ಸ್ವತಂತ್ರ ಭಾರತ-70 ಸ್ಮಾರತಕದ ಉದ್ಘಾಟನೆ ನಿಮಿತ್ತ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ತಂದ ಸ್ವತಂತ್ರ ಜ್ಯೋತಿಯನ್ನು ಹಿರಿಯ ಹೋರಾಟಗಾರ ಜಿ.ಎಂ.ಮಾಳಗಿ ಸ್ವಾಗತಿಸಿದರು. ಬಳಿಕ ಮಹರ್ಷಿ ಬುಲುಸು ಸಾಂಬಮೂರ್ತಿ ಮೈದಾನಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸ್ವಾತಂತ್ರ ಸ್ಮಾರಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಇದಕ್ಕೂ ಮುನ್ನ ವಿವಿಧ ಶಾಲಾ ವಿದ್ಯಾರ್ಥಿಗಳು, ಸೇವಾದಳ ವಿದ್ಯಾರ್ಥಿಗಳು ಪ್ರಭಾತ್ ಪೇರಿ ನಡೆಸಿದರು. ವ್ಯಾಯಾಮ ಶಾಲೆಯ ಅಧ್ಯಕ್ಷ ಡಾ| ಟೇಕೂರು ರಮಾನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು. ವ್ಯಾಯಾಮ ಶಾಲೆಯ ಟಿ.ಜಿ.ವಿಠ್ಠಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊನೆಯಲ್ಲಿ ಹೋರಾಟಗಾರ ಗಂಗಪ್ಪ ಮುದ್ದಪ್ಪ ಮಾಳಗಿ ಅವರನ್ನು
ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ರಾಜ್ಯಾಧ್ಯಕ್ಷ ಎಚ್. ಎಂ.ಗುರುಸಿದ್ದಸ್ವಾಮಿ, ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಎಂ.ಎ.ಷಕೀಬ್, ರವೀಂದ್ರ, ಬಾರಿಕೆರ್ ಗಣೇಶ್ ಸೇರಿದಂತೆ ವಿವಿಧ ಶಾಲೆಗಳ
ವಿದ್ಯಾರ್ಥಿಗಳು, ಶಿಕ್ಷಕರು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.