ಮಂತ್ರಾಲಯ ಶ್ರೀಗಳಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ
Team Udayavani, Jul 20, 2017, 1:32 PM IST
ಬಳ್ಳಾರಿ: ನಗರದ ಸತ್ಯನಾರಾಯಣಪೇಟೆ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬುಧವಾರ ಪೀಠಾಧಿಪತಿ ಸುಬುದೇಂದ್ರತೀರ್ಥ
ಶ್ರೀಪಾದಂಗಳವರು ಚಾತುರ್ಮಾಸದ ಪ್ರಯುಕ್ತ ಲೋಕ ಕಲ್ಯಾಣಾರ್ಥ ಹಮ್ಮಿಕೊಂಡಿದ್ದ ಶ್ರೀಸುದರ್ಶನ ಹೋಮದ ಪೂರ್ಣಾಹುತಿ ನೆರವೇರಿಸಿದರು.
ಆ ನಂತರ ಶ್ರೀಮಠದ ಭಕ್ತರಿಗೆ ಸುಬುಧೇಂದ್ರ ತೀರ್ಥರು ತಪ್ತ ಮುದ್ರಾಧಾರಣೆಯನ್ನು ಮಾಡಿ ಮುದ್ರಾಧಾರಣೆಯ ಮಹತ್ವದ ಅರಿವು
ಮೂಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುರಾಯರ ಹೆಸರಿನಲ್ಲಿ ನಗರದ ಅಲ್ಲೀಪುರ ರಸ್ತೆಯಲ್ಲಿ ಇಂಜಿನಿಯರಿಂಗ್ ಕಾಲೇಜು ನಿರ್ಮಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಂತ್ರಾಲಯ ಮಠದಿಂದ ಭಕ್ತಾದಿಗಳಿಗೆ ಅನೇಕ ರೀತಿಯ ಸದುಪಾಯಗಳನ್ನು ರೂಪಿಸುತ್ತಿದ್ದೇವೆ. ಸಮಾಜಕ್ಕೆ ಶ್ರೀಮಠದ ಮೂಲಕ ಸೇವೆಗಳನ್ನು ಸಲ್ಲಿಸುವ ಪ್ರೇರಣೆ ದೊರೆತದ್ದರಿಂದ ಆನಂದವಾಗಿದೆ ಎಂದರು.
ಶ್ರಾವಣ ಮಾಸದಲ್ಲಿ ಬರುವ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಹರಿಕಥಾಮೃತ ಸಾರದ 32 ಸಂ ಗಳನ್ನು ಕಂಠಪಾಠದ ಮೂಲಕ ಹೇಳುವವರಿಗೆ ಸಂ ಗೆ 1000 ರೂ.ಗಳಂತೆ ನಗದು ಬಹುಮಾನ ನೀಡಲಾಗುವುದು. ಜು.30ರಂದು ಮಂತ್ರಾಲಯ ಮಠದ ದಾಸ ಸಾಹಿತ್ಯ ಪ್ರಾಜೆಕ್ rನ ಮಹಿಳಾ ಭಜನಾ ಮಂಡಳಿಗಳ 1500 ಸದಸ್ಯೆಯರಿಂದ ಸತತ ಒಂಭತ್ತು ತಾಸುಗಳ
ಕಾಲ ವಾಯುದೇವರ ಗಾನಾಮೃತ ಹಾಡುವ ಮೂಲಕ ಗಿನ್ನೆಸ್ ದಾಖಲೆ ಸ್ಥಾಪಿಸಲಾಗುವುದು ಎಂದು ಶ್ರೀಗಳು ತಿಳಿಸಿದರು. ಈ
ಸಂದರ್ಭದಲ್ಲಿ ಮಠದ ಧರ್ಮಾಧಿಕಾರಿ ರಾಜಾ ಎಂ.ವಿ.ಬ್ರಹ್ಮಣ್ಯತೀರ್ಥಾಚಾರ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.