ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ವೃತ್ತಿ ಸವಾಲಿನ ಕೆಲಸ
Team Udayavani, Oct 3, 2018, 2:56 PM IST
ಬಳ್ಳಾರಿ: ಹಿಂದೆ ಸೇವೆಯನ್ನಾಗಿ ಪರಿಗಣಿಸುತ್ತಿದ್ದ ವೈದ್ಯ ವೃತ್ತಿ ಇಂದು ಉದ್ಯಮವಾಗಿ ಬದಲಾವಣೆಯಾಗಿದ್ದರೂ, ವೈದ್ಯ ವೃತ್ತಿಯನ್ನು ಸೇವೆಯೆಂದು ಪರಿಗಣಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಿದೆ ಎಂದು ಸಿರುಗುಪ್ಪದ ವೈದ್ಯ ಡಾ| ಮಧುಸೂದನ್ ಕಾರಿಗನೂರು ಹೇಳಿದರು.
ನಗರದ ಪೊಲೀಸ್ ಜಿಮ್‌ಖಾನಾದಲ್ಲಿ ಸನ್ಮಾರ್ಗ ಗೆಳೆಯರ ಬಳಗ, ಜಿಮ್‌ಖಾನಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರವೂ ಉದ್ಯಮವಾಗಿ ಬದಲಾವಣೆಯಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಹಿಂದಿನಂತೆಯೇ ಇಂದು ಸಹ ವೈದ್ಯಕೀಯ ವೃತ್ತಿಯನ್ನು ಸೇವೆಯೆಂದು ಪರಿಗಣಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಿದೆ. ನಾನು ಸಹ ವೈದ್ಯನಾಗಿ ಸಮಾಜದೊಂದಿಗೆ ಗುರುತಿಸಿಕೊಂಡಿದ್ದೇ ಇಂದು
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿಯಿಂದ ಚುನಾಯಿತಗೊಳ್ಳಲು ಪ್ರಮುಖ
ಕಾರಣ ಎಂದು ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ವೈದ್ಯವೃತ್ತಿಯೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅದು ನನ್ನ ಮನಸ್ಸು ತೃಪ್ತಿಗಾಗಿ ಮಾಡುತ್ತಿರುವ ಅಳಿಲು ಸೇವೆಯಷ್ಟೇ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ವೈದ್ಯ ವೃತ್ತಿಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ವೈದ್ಯರ ನಿಯಂತ್ರಣಕ್ಕಾಗಿ ಸರ್ಕಾರಗಳು ಜಾರಿಗೆ ತಂದಿರುವ ಹಲವು ಕಾನೂನು ಚೌಕಟ್ಟುಗಳ ನಡುವೆ ಕೆಲಸ ನಿರ್ವಹಿಸುವುದು ವೃತ್ತಿ ಬದುಕಿನಲ್ಲಿ ಸವಾಲು, ಸಂಕಷ್ಟಗಳಿಗೆ ಈಡು ಮಾಡಿದೆ ಎಂದರು.
ಬಳಿಕ ಸನ್ಮಾರ್ಗ ಗೆಳೆಯರ ಬಳಗ, ಪೊಲೀಸ್ ಜಿಮ್‌ಖಾನಾ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಘಟಕ ಸೇರಿದಂತೆ ವಿವಿಧ ಹತ್ತಾರು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಡಾ| ಮಧುಸೂದನ್ ಕಾರಿಗನೂರು ದಂಪತಿ ಸನ್ಮಾನಿಸಲಾಯಿತು. ಶಿಕ್ಷಕ ಮೆಹತಾಬ್ ಅವರು ಡಾ| ಮಧುಸೂದನ್ ಅವರ ಸೇವಾ ಕಾರ್ಯಗಳ ಕುರಿತು ಪರಿಚಯಿಸಿದರು. ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಜಿಮ್‌ಖಾನಾ ಕಾರ್ಯಾಧ್ಯಕ್ಷ ಕೆ.ಜಿತೇಂದ್ರಗೌಡ, ಕಾರ್ಯದರ್ಶಿ ರವಿರಾಜಶೇಖರ ರೆಡ್ಡಿ, ಬಳಗದ ಪ್ರಸಾದ ಗೋಖಲೆ, ಡಾ| ಪರಸಪ್ಪ ಬಂದ್ರಕಳ್ಳಿ, ಚಂದ್ರಶೇಖರ ಆಚಾರ್ ಕಪ್ಪಗಲ್ ಇದ್ದರು. ಬಳಿಕ ತತ್ವಪದಕಾರ ಶ್ರೀನಾದ ಮಣಿನಾಲ್ಕೂರ್ ಅವರಿಂದ ತತ್ವಪದಗಾಯನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.