ಪಿಡಿಒಗಳ ವಿರುದ್ಧ ಹರಿಹಾಯ್ದ ಸದಸ್ಯರು
Team Udayavani, Jun 23, 2018, 10:15 AM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ಎಲ್ಲಾ ಪಿಡಿಒಗಳು 14ನೇ ಹಣಕಾಸು ಮೊತ್ತವನ್ನು ಸಮರ್ಪಕವಾಗಿ ವಿನಿಯೋಗ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಪಿಡಿಒಗಳ ವಿರುದ್ಧ ಹರಿಹಾಯ್ದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ
ಮಾತನಾಡಿದ ಅವರು, ಸದಸ್ಯರು ಪಿಡಿಒಗಳಿಗೆ ಯಾವುದೇ ಸಂಬಂದವಿಲ್ಲ ಎಂದು ವರ್ತಿಸುವುದು ಸರಿಯಲ್ಲ.
ಅಭಿವೃದ್ಧಿ ಕುರಿತು ಪ್ರಶ್ನಿಸುವ ಹಕ್ಕಿದೆ. ಎಲ್ಲಾ ಪಿಡಿಒಗಳಿಗೆ ಸಭೆಗೆ ಬರುವ ಮುನ್ನ 14ನೇ ಹಣಕಾಸು ವಿನಿಯೋಗ ಮಾಡಿರುವ ಮಾಹಿತಿ ಪುಸ್ತಕ ತರುವಂತೆ ಹೇಳಿದರೂ ಯಾರ ಮಾತಿಗೆ ಬೆಲೆ ನೀಡದೆ ಯಾವುದೇ ಸಂಬಂಧಪಟ್ಟ ದಾಖಲೆಗಳನ್ನು ತರದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕೂಡಲೇ ನಿಮ್ಮ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ ಹೇಳಿ ದಾಖಲೆಗಳನ್ನು ತರಿಸಿ ಎಂದು ಪ್ರಭಾರಿ ಇಒ ವಿಶ್ವನಾಥ್
ಪಿಡಿಒಗಳಿಗೆ ಖಡಕ್ ಆಗಿ ಸೂಚಿಸಿದರು. ಬನ್ನಿಗೋಳ ಗ್ರಾಪಂನಲ್ಲಿ 14ನೇ ಹಣಕಾಸು ಯೋಜನೆಯಡಿ ಮೊದಲ
ಕಂತಿನಲ್ಲಿ 13.85 ಲಕ್ಷ ರೂ., 2ನೇ ಕಂತಿನಲ್ಲಿ 11 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ಬೀದಿ ದೀಪ ಮತ್ತು
ಚರಂಡಿ ಅಭಿವೃದ್ಧಿಗೆ ಬಳಸಿದೆ ಎಂದು ಪಿಡಿಒ ಚನ್ನನಾಯ್ಕ ತಿಳಿಸಿದರು.
ಮೀನುಗಾರರ ನಾಡದೋಣಿಗಳಿಗೆ ಪಡೆದ ತೆರಿಗೆಯ 85 ಸಾವಿರ ರೂ. ಮೊತ್ತವನ್ನು ಗ್ರಾಪಂ ಸಿಬ್ಬಂದಿಗಳಿಗೆ ವೇತನ
ನೀಡಲಾಗಿದೆ ಎಂದು ಪಿಡಿಒ ಚನ್ನನಾಯ್ಕ ತಿಳಿಸಿದಾಗ, ಅನುದಾನದ ಶೇ.50ರಷ್ಟು ಮೊತ್ತವನ್ನು ಅಭಿವೃದ್ಧಿಗೆ ಬಳಸದೆ ಸ್ವ ಇಚ್ಛೆಯಂತೆ ಪಿಡಿಒ ಬಳಕೆ ಮಾಡಿದ್ದಾರೆ ಎಂದು ಸದಸ್ಯ ಪಾಂಡುನಾಯ್ಕ ಆರೋಪಿಸಿದರು.
ಎನ್‌ಒಸಿ ಕೊಡಬೇಡಿ: ತಾಲೂಕಿನ ಗದ್ದೀಕೇರಿ, ಅಂಬಳಿ ಗ್ರಾಪಂ ವ್ಯಾಪ್ತಿಯಲ್ಲಿ ಸೋಲಾರ್ ಕಂಪನಿಯವರು ಕೆಲಸ
ಪ್ರಾರಂಭ ಮಾಡಿ ವರ್ಷವಾದರೂ ಯಾವುದೇ ಕ್ರಮವಹಿಸಿಲ್ಲ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ
ಬಸವರಾಜ ಬೇಸರ ವ್ಯಕ್ತಪಡಿಸಿದರು. ಕೂಡಲೇ ಆಯಾ ವ್ಯಾಪ್ತಿಯ ಪಿಡಿಒಗಳು ಸೋಲಾರ್ ಕಂಪನಿಗಳಿಂದ ತೆರಿಗೆ
ವಸೂಲಿ ಮಾಡಬೇಕು ಎಂದು ತಾಕೀತು ಮಾಡಿದರು. ತೆರಿಗೆ ಪಾವತಿಸದಿದ್ದರೆ ಎನ್ ಒಸಿ ಕೊಡಬೇಡಿ ಎಂದು ತಿಳಿಸಿದರು. ಎನ್ ಎಗೆ ಪರವಾನಗಿ ಪಡೆಯದ ಸೋಲಾರ್ ಕಂಪನಿಗೆ ವಕೀಲರ ಮೂಲಕ ನೋಟಿಸ್ ನೀಡಿ ಎಂದು ಪ್ರಭಾರಿ ಇಒ ವಿಶ್ವನಾಥ ಸೂಚನೆ ನೀಡಿದರು.
ಬಿಎಸ್‌ಎನ್‌ಎಲ್ ಮತ್ತು ಏರ್‌ಟೆಲ್ ಟವರ್‌ಗಳಿಂದ ತೆರಿಗೆ ಪಡೆಯಿರಿ ಎಂದು ಸದಸ್ಯ ಮಾಳಿಗಿ ಗಿರೀಶ್ ಸೂಚಿಸಿದರು. ತಾಪಂ ಉಪಾಧ್ಯಕ್ಷೆ ಕೊಚಾಲಿ ಸುಶೀಲ ಮಂಜುನಾಥ್, ಸದಸ್ಯರಾದ ಪಿ.ಕೊಟ್ರೇಶ್, ಪ್ರಭಾಕರ್, ಶ್ಯಾಮಲಾ ಮಾಲತೇಶ, ಗೀತಾ, ರಮೀಜಾ ರಾಜಾಭಕ್ಷಿ, ತೋಟಗಾರಿಕ ನಿರ್ದೇಶಕ ಡಾ| ಪರಮೇಶ್ವರಪ್ಪ, ಪಶುಸಂಗೋಪನೆ
ಸಹಾಯಕ ನಿರ್ದೇಶಕ ಡಾ| ಸೂರಪ್ಪ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೃಷ್ಣನಾಯ್ಕ, ಸಿಡಿಪಿಒ ಚನ್ನಪ್ಪ, ಪಿಡಿಒಗಳಾದ ಶಾಂತನಗೌಡ, ಜ್ಞಾನೇಶ್ವರಯ್ಯ, ನಿಂಗಪ್ಪ, ತಿಪ್ಪೇಸ್ವಾಮಿ, ನಾಗಪ್ಪ ,ಕೇಶವ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.