ಶವಾಗಾರಕ್ಕೆ ಬೇಕಿದೆ ಕಾಯಕಲ್ಪ
ಡಿಫ್ರಿಜರ್ ಇಡಲು ಕೊಠಡಿ ಕೊರತೆ! ಶವ ಸಂರಕ್ಷಿಸಲು ಬಳ್ಳಾರಿಗೆ ಸಾಗಿಸಬೇಕಾದ ಸ್ಥಿತಿ
Team Udayavani, Mar 8, 2021, 7:16 PM IST
ಸಿರುಗುಪ್ಪ: ನಗರದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶವಗಾರ ಕಟ್ಟಡವು ಅತ್ಯಂತ ಹಳೆ ಕಟ್ಟಡವಾಗಿದ್ದು, ಶಿಥಿಲಾವಸ್ಥೆ ತಲುಪಿದ್ದು, ಶವಾಗಾರ ಕಟ್ಟಡಕ್ಕೆ ಕಾಯಕಲ್ಪ ಒದಗಿಸಬೇಕಾಗಿದೆ. ಶವಗಳನ್ನು ರಕ್ಷಿಸಲು ಡಿಫ್ರಿಜರ್ ಯಂತ್ರಗಳು ಬಂದಿದ್ದರೂ ಆ ಯಂತ್ರಗಳನ್ನು ಅಳವಡಿಸಲು ಕೊಠಡಿಗಳ ಕೊರತೆ ಇದೆ.
ತಾಲೂಕಿನ ಏಕೈಕ ದೊಡ್ಡ ಆಸ್ಪತ್ರೆಯಾದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಒಂದು ದಿನಕ್ಕೆ 250ರಿಂದ 300 ಹೊರರೋಗಿಗಳಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅತಿಹೆಚ್ಚು ಹೆರಿಗೆಯನ್ನು ಇಲ್ಲಿ ಮಾಡಲಾಗುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿರುವ ಶವಗಾರ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ವೈದ್ಯರು ಮತ್ತು ಸಿಬ್ಬಂದಿ ಶಿಥಿಲಗೊಂಡ ಶವಗಾರದಲ್ಲೇ ಅಪರಾಧ ಕೃತ್ಯ ಮತ್ತು ಅಪರಿಚಿತ ಶವ ಮೊದಲಾದವುಗಳನ್ನು ಪೋಸ್ಟ್‌ಮಾರ್ಟಮ್ ಮಾಡುತ್ತಾರೆ. ಸಾಧಾರಣವಾಗಿ ಎಲ್ಲ ವ್ಯವಸ್ಥೆಗಳು ಇರುವ ಈ ಆಸ್ಪತ್ರೆಯಲ್ಲಿ ಶವಾಗಾರ ಕಟ್ಟಡದ ಕೊರತೆ ಇದ್ದು ಸದ್ಯ ಇರುವ ಶವಾಗಾರ ಸಣ್ಣ ಕಟ್ಟಡದಲ್ಲಿದ್ದು ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.
ಕೇವಲ ಮೂರರಿಂದ ನಾಲ್ಕು ಶವಗಳನ್ನು ಇಡಲು ಮಾತ್ರ ವ್ಯವಸ್ಥೆ ಇದ್ದು, ಹೆಚ್ಚಿನ ಶವಗಳು ಬಂದಾಗ ಪರದಾಡಬೇಕಾದ ಸ್ಥಿತಿ ಇದೆ. ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ವೈದ್ಯರಿಗೆ ಬೇಕಾಗಿರುವ ಡ್ರೆಸ್ಸಿಂಗ್‌ರೂಂ ವ್ಯವಸ್ಥೆ ಇಲ್ಲ. ಮೃತ ದೇಹವನ್ನು ಸುರಕ್ಷಿತವಾಗಿಡುವ ಡಿಪ್ರೀಜರ್ ಗಳಿದ್ದರೂ ಅವುಗಳನ್ನು ಅಳವಡಿಸಲು ಕೋಣೆ ವ್ಯವಸ್ಥೆ ಇಲ್ಲದೆ ಬಳ್ಳಾರಿಗೆ ಸಾಗಿಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಸಂಬಂಧಪಟ್ಟ ವಾರಸುದಾರರ ಹಲವು ಬಾರಿ ಮೃತದೇಹಕ್ಕಾಗಿ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ನಿಮಾರ್ಣವಾಗಿದೆ. ಆದ್ದರಿಂದ ಇಲ್ಲಿ ಶವಗಳನ್ನು ಸಂರಕ್ಷಿಸುವ ಡಿಫ್ರಿಜರ್‌ಗಳಿಗೆ ಕೋಣೆಯ ವ್ಯವಸ್ಥೆ ಮತ್ತು ಸುಸಜ್ಜಿತ ಶವಗಾರ ನಿರ್ಮಾಣವಾಗಬೇಕಾಗಿದೆ.
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.