“ಪೊಲೀಸ್ ಇತಿಹಾಸ’ದ ಮ್ಯೂಸಿಯಂ
ಹಳೆಯ ಕಾಲದ ತಕ್ಕಡಿ, ಬೈನಾಕುಲರ್, ರಿಜಿಸ್ಟರ್ ಪುಸ್ತಕ ಇನ್ನಿತರ ಸಂಗ್ರಹ
Team Udayavani, Oct 26, 2022, 8:10 AM IST
ಬಳ್ಳಾರಿ: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್ ಇಲಾಖೆ ಸುಮಾರು ಎರಡು ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಇಲಾಖೆ ನಡೆದು ಬಂದ ದಾರಿ, ಬಳಸಿದ ವಸ್ತುಗಳು, ಕಾಲಕಾಲಕ್ಕೆ ಬದಲಾವಣೆಯಾದ ಸಮವಸ್ತ್ರ, ವ್ಯವಸ್ಥೆಯ ಕುರಿತ ಮಾಹಿತಿಯನ್ನು ನಗರದ ಪೊಲೀಸ್ ಮ್ಯೂಸಿಯಂನಲ್ಲಿ ವಸ್ತುಗಳ ಸಮೇತ ಕಣ್ತುಂಬಿಕೊಳ್ಳಬಹುದು.
ಮ್ಯೂಸಿಯಂನಲ್ಲಿ ಏನೇನಿದೆ?
ಬಳ್ಳಾರಿ ಎಸ್‌ಪಿ ಕಚೇರಿ ಆವರಣದ ನವೀಕೃತ ಹಳೆಯ ಕಟ್ಟಡದಲ್ಲಿ ಈ ಪೊಲೀಸ್ ಮ್ಯೂಸಿಯಂ ವ್ಯವಸ್ಥೆ ಮಾಡಲಾಗಿದೆ. ಮುಟ್ಟುಗೋಲು ಹಾಕಿದ್ದ ಚಿನ್ನಾಭರಣಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಹಳೆಯ ಕಾಲದ ತಕ್ಕಡಿ, ದೂರದ ವಸ್ತು-ವ್ಯಕ್ತಿಗಳನ್ನು ಹತ್ತಿರವಾಗಿ ಸ್ಪಷ್ಟವಾಗಿ ನೋಡುವ ಬೈನಾಕುಲರ್, ರಿಜಿಸ್ಟರ್ ಪುಸ್ತಕ, ವಾದ್ಯವೃಂದ ಸಲಕರಣೆ (ಬ್ಯಾಂಡ್ ಸೆಟ್), ಹಿಂದಿನ ಕಾಲದಿಂದ ಇದುವರೆಗಿನ ಪೊಲೀಸ್ ಸಮವಸ್ತ್ರ, ರಾಜ್ಯ ಪೊಲೀಸ್ ಇಲಾಖೆಯಲ್ಲಿ 1960ರಿಂದ 1980ರ ನಡುವೆ ಬಳಸಿದ್ದ ಎಫ್‌ಎಂ 713 ವಾಕಿಟಾಕಿ, ಆಪಾದಿತರ ಬಂಧನ ಹಾಗೂ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಬಳಸುತ್ತಿದ್ದ ಕೈಕೋಳ, ಲೀಡಿಂಗ್ ಚೈನ್, ಭದ್ರತೆ ನೀಡುವಾಗ ದೇಹ, ಕೈ, ಕಾಲುಗಳ ರûಾಕವಚಗಳು, ಹೆಲ್ಮೆಟ್, ನಿಷಿದ್ಧ-ನಿಷೇಧಿ ತ ವಸ್ತುಗಳನ್ನು ಪತ್ತೆ ಹಚ್ಚುವ ಹ್ಯಾಂಡ್ ಹೆಲ್ಪ್ ಮೆಟಲ್ ಡಿಟೆಕ್ಟರ್, ವಿವಿಧ ರೀತಿಯ ಬಂದೂಕು, ಪಿಸ್ತೂಲ್, ಬ್ರಿಟಿಷರ ಅವಧಿ ಯಲ್ಲಿನ ಗಂಟೆ ಬಾರಿಸುವ ವಿವಿಧ ರೀತಿಯ ಗೋಡೆ ಗಡಿಯಾರಗಳು ಸೇರಿದಂತೆ ಇನ್ನಿತರ ನೂರಾರು ವರ್ಷಗಳ ಹಿನ್ನೆಲೆಯುಳ್ಳ ವಸ್ತುಗಳು ನೋಡುಗರಲ್ಲಿ ಕುತೂಹಲ ಮೂಡಿಸುತ್ತವೆ.
ಶತಮಾನದ ಇತಿಹಾಸ
ದೇಶದಲ್ಲಿ ಪೊಲೀಸ್ ವ್ಯವಸ್ಥೆ 184 ವರ್ಷಗಳ ಇತಿಹಾಸ ಹೊಂದಿದೆ. 1838ನೇ ಸಾಲಿನ ವರದಿ ಪ್ರಕಾರ ಆರಂಭದಲ್ಲಿ ಪೊಲೀಸರು ನಿರ್ವಹಿಸ ಬೇಕಿದ್ದ ಕೆಲಸವನ್ನು ತಳವಾರರು, ತೋಟಿಗಳು, ನೀರಗಂಟಿಗಳು, ಕಾವಲುಗಾರರು, ಅಮರಗಾರರು, ಅಂಕಮಾಲೆ, ಪಟೇಲ್, ಶಾನುಭಾಗ್ ಸೇರಿ ಹಲವರು ನಿರ್ವಹಿಸುತ್ತಿದ್ದರು. ಅನಂತರ ಸುಧಾರಣೆಯಾದ ಪೊಲೀಸ್ ವ್ಯವಸ್ಥೆಯಲ್ಲಿ 1847ರಲ್ಲಿ ಹೈದರಾಬಾದ್ ಪೊಲೀಸ್ ವ್ಯವಸ್ಥೆ, 1857ರಲ್ಲಿ ಮದ್ರಾಸ್ ಪೊಲೀಸ್, 1883ರಲ್ಲಿ ಮೈಸೂರು ಪೊಲೀಸ್, ಬಾಂಬೆ, ಕೊಡಗು ಪೊಲೀಸ್ ವ್ಯವಸ್ಥೆ ಜಾರಿಗೆ ಬಂದಿವೆ.
ರಿವಾಲ್ವರ್-ಪಿಸ್ತೂಲ್ ಪ್ರದರ್ಶನ
ಪೊಲೀಸ್ ಇಲಾಖೆಯ ಅತ್ಯಂತ
ಪ್ರಮುಖ ಆಯುಧ ಪಿಸ್ತೂಲ್ ಬಂದೂಕುಗಳಾಗಿದ್ದು ಮ್ಯೂಸಿ ಯಂನಲ್ಲಿ ಮಹಾಯುದ್ಧಗಳಲ್ಲಿ ಬಳಕೆ ಯಾಗಿದ್ದ ಮಾದರಿಯ ಬಂದೂಕು, ಪಿಸ್ತೂಲ್, ರಿವಾಲ್ವರ್‌ಗಳಾದ 303 ನಂ.1 ಮಾರ್ಕ್ ರೈಫಲ್, 303 ನಂ.4 ಮಾರ್ಕ್ ರೈಫಲ್, ನಂ.5 ಮಾರ್ಕ್ ರೈಫಲ್, 455 ರಿವಾಲ್ವರ್, 38 ರಗೇರ್ ರಿವಾಲ್ವರ್, 38 ರಿವಾಲ್ವರ್ ಮಿನಿ, 410 ಮಸ್ಕೆಟ್ ಬಂದೂಕು, 45 ಸಿಎಂಟಿ (ಕಾರ್ಬನ್ ಮಷಿನ್ ಥಾಂಪ್ಸನ್ ಗನ್) ಪ್ರದರ್ಶಿಸಲಾಗಿದೆ. ಬಾಡಿ ಪ್ರೊಟೆಕ್ಟರ್ (ದೇಹ ರಕ್ಷಾ ಕವಚ), ಲೆಗ್ ಪ್ರೊಟೆಕ್ಟರ್, ಹ್ಯಾಂಡ್ ಪ್ರೊಟೆಕ್ಟರ್, ಹೆಲ್ಮೆಟ್‌ಗಳನ್ನೂ ಇಲ್ಲಿ ನೋಡಬಹುದಾಗಿದೆ. ಹೀಗೆ ಬ್ರಿಟಿಷರ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಇಲಾಖೆಯ ಕಡತಗಳು, ಗಡಿಯಾರಗಳು, ಬ್ಯಾಡ್ಜ್ಗಳು, ಪೊಲೀಸರಿಗೆ ಬಡ್ತಿಯಾದಾಗ ನೀಡುವ ಸ್ಟಾರ್‌ಗಳ ಮಾಹಿತಿ ಯನ್ನು ಮ್ಯೂಸಿಯಂನಲ್ಲಿ ತಿಳಿಯಬಹು ದಾಗಿದೆ. ಹೊಸದಾಗಿ ಇಲಾಖೆಗೆ ಸೇರುವ ಪೊಲೀಸ್ ಸಿಬಂದಿಗಳಿಗೆ ಒಳ್ಳೆಯ ಮಾಹಿತಿ ನೀಡಲಿದೆ.
– ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.