ಅಧಿಕಾರ-ಪ್ರಶಸ್ತಿಗೆ ಆಸೆ ಪಟ್ಟಿಲ್ಲ: ಮಂಜಮ್ಮ ಜೋಗತಿ
ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ಬಳಿಕ ಜನವರಿ ತಿಂಗಳಿನಲ್ಲಿ ಮಾಡಲು ಸರ್ಕಾರ ಮುಂದಾಗಿದೆ.
Team Udayavani, Dec 8, 2022, 6:17 PM IST
ಹೊಸಪೇಟೆ: ನಾನು ಅಧಿಕಾರ, ಪ್ರಶಸ್ತಿಗಳಿಗಾಗಿ ಆಸೆ ಪಟ್ಟವಳಲ್ಲ. ಅವು ತಾನಾಗಿಯೇ ಹುಡುಕಿಕೊಂಡು ಬಂದಿವೆ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ನಗರದ ಥಿಯೋಸಾಪಿಕಲ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದಕ್ಕೂ ಆಸೆಪಟ್ಟಿಲ್ಲ. ನನಗೆ ಬಂದ ಪ್ರಶಸ್ತಿಗಾಗಿಯೂ ನಾನು ಆಸೆ ಪಟ್ಟವಳಲ್ಲ. ಅಧ್ಯಕ್ಷ ಸ್ಥಾನದ ಅಧಿಕಾರವೂ ತಾನಾಗಿಯೇ ಬಂದಿತ್ತು. ತಾನಾಗಿಯೇ ಅಂತಹ ಅವಕಾಶ ಬಂದರೆ ಮುಂದೆ ನೋಡೋಣ ಎಂದರು.
ಕಲಾವಿದರು ಯಾರ ಸ್ವತ್ತಲ್ಲ. ರಾಜಕೀಯಕ್ಕೆ ಬಂದರೆ ಒಂದು ಪಕ್ಷದ ಸ್ವತ್ತಾಗುತ್ತೇವೆ. ಚಲಾವಣೆ ಆಗುತ್ತಿರುವ ನಾಣ್ಯ ಒಂದೇ ಪಕ್ಷದಲ್ಲಿ ಚಲಾವಣೆಗೆ ಆಗುತ್ತೆ. ಅಂಥ ಅವಕಾಶ ಬಂದರೆ ಮುಂದೇ ನೋಡುತ್ತೇನೆ ಎಂದು ರಾಜಕೀಯ ಪ್ರವೇಶ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹಂಪಿ ಉತ್ಸವ ನಡೆಸಲು ಸರ್ಕಾರದಿಂದ ದಿನ ನಿಗದಿ ಹಿನ್ನೆಲೆ ಮಾತನಾಡಿದ ಅವರು, ಜ 7, 8ರಂದು ಹಂಪಿ ಉತ್ಸವ ನಡೆಸಿದರೆ ಕಲಾವಿದರಿಗೆ ಅವಕಾಶ ಸಿಗುವುದಿಲ್ಲ. ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ಬಳಿಕ ಜನವರಿ ತಿಂಗಳಿನಲ್ಲಿ ಮಾಡಲು ಸರ್ಕಾರ ಮುಂದಾಗಿದೆ.
ಆದರೆ ಹಂಪಿ ಉತ್ಸವದ ರೂವಾರಿ ಎಂ.ಪಿ ಪ್ರಕಾಶ ಅವರು ನವೆಂಬರ್ 3, 4, 5ರಂದು ಮಾಡುತ್ತಿದ್ದರು. ಹಾಗಾಗಿ ಹಂಪಿ ಉತ್ಸವವನ್ನು ಅದೇ ದಿನಾಂಕದಂದು ಮಾಡಬೇಕು. ಮೈಸೂರಿನಲ್ಲಿ ನಡೆದ ದಸರಾ ಮಾದರಿಯೇ ಹಂಪಿಯಲ್ಲಿ ಉತ್ಸವ ಮಾಡಬೇಕು. ಮೊದಲು ಮೈಸೂರಿನ ದಸರಾ ಹುಟ್ಟಿದ್ದೇ ಹಂಪಿಯ ಮಹಾನವಮಿ ದಿಬ್ಬದಲ್ಲಿ. ಹಂಪಿ ತುಂಬಾ ಹೆಸರು ಮಾಡಿದ ಸ್ಥಳ, ಅದೇ ಮಾದರಿ ಉತ್ಸವ ನಡೆಸಬೇಕು ಎಂದು ಒತ್ತಾಯಿಸಿದರು.
ಆರು ತಿಂಗಳು ಅವಕಾಶ ನೀಡಬೇಕಿತ್ತು:
ಜಾನಪದ ಅಕಾಡೆಮಿ ಅಧ್ಯಕ್ಷ ಅಧಿಕಾರ ನಿರ್ವಹಿಸಲು ಇನ್ನೂ ಆರು ತಿಂಗಳು ಬಿಡಬೇಕಿತ್ತು. ಯಾಕೆಂದರೆ ನಾನು ದೊಡ್ಡ ಯೋಜನೆಯೊಂದಕ್ಕೆ ಕೈಹಾಕಿದ್ದೆ. ಅಧಿಕಾರ ಮುಗಿದಿರುವುದರಿಂದ ಅದು ಈಗ ಅರ್ಧಕ್ಕೆ ನಿಂತಿದೆ. ಇನ್ನೇನು ಕನ್ನಡ ಸಂಸ್ಕೃತಿ ಇಲಾಖೆ ಸಚಿವರ ಸಹಿ ಆಗಿದ್ದರೆ ಅನುದಾನ ಬರುತ್ತಿತ್ತು ಎಂದರು. ಅಖಿಲ ಭಾರತ ಮಹಿಳಾ ಸಮಾವೇಶ, ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ತೃತೀಯ ಲಿಂಗಿಗಳ ಸಮ್ಮೇಳನ ಮಾಡಬೇಕೆಂಬ ಆಸೆ ಹಾಗೇ ಉಳಿದಿದ್ದು,
ಅಧಿಕಾರವಧಿ ಮುಗಿದಿರುವುದರಿಂದ ಅದ್ಯಾವುದನ್ನೂ ಮಾಡಲು ಆಗಿಲ್ಲ. ಕೊರೊನಾ ಬಂದಿದ್ದರಿಂದ ಅದ್ಯಾವುದು ಈಡೇರಲಿಲ್ಲ. ಅಕಾಡೆಮಿಗೆ ವರ್ಷಕ್ಕೆ ಒಂದು ಕೋಟಿ ರು. ಅನುದಾನ ಬರುತ್ತಿತ್ತು. ಕೊರೊನಾದಿಂದ ಅನುದಾನದಲ್ಲಿ ಸರ್ಕಾರ ಕಡಿತ ಮಾಡಿತು.
ದೊಡ್ಡಮಟ್ಟದ ಯಾವುದೇ ಕಾರ್ಯಕ್ರಮ ಮಾಡಲು ಆಗಲೇ ಇಲ್ಲ. ಕಳೆದ ಎರಡು ತಿಂಗಳಿನಿಂದ ಅಧ್ಯಕ್ಷ ಸ್ಥಾನ ಖಾಲಿ ಬಿಟ್ಟಿದ್ದಾರೆ. ಸರ್ಕಾರ ಆದಷ್ಟು ಬೇಗ ಅಧ್ಯಕ್ಷರನ್ನ ನೇಮಿಸಿ ಕಾರ್ಯಚಟುವಟಿಕೆ ನಡೆಯಲು ಮುಂದಾಗಬೇಕು. ನನ್ನೆಲ್ಲ ಆಸೆಗಳನ್ನ ಮುಂದೆ ಅಧ್ಯಕ್ಷರಾದವರು ಈಡೇರಿಸುತ್ತಾರೆ ಅನ್ನುವ ನಂಬಿಕೆಯಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.