ಹಂಪಿ ಉತ್ಸವದಲ್ಲಿಲ್ಲ ಅನ್ನದಾತನ ಉತ್ಸಾಹ!
Team Udayavani, Nov 6, 2017, 10:43 AM IST
ಹಂಪಿ: ಸಾಂಸ್ಕೃತಿಕ ಲೋಕದ ಸಿರಿವಂತಿಕೆ ಸಾರುವ ಹಾಗೂ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕ್ಷಣಗಳ ಸ್ಮರಣೆಗಾಗಿ ದಿ| ಮಾಜಿ ಸಚಿವ ಎಂ.ಪಿ.ಪ್ರಕಾಶ್ ಆರಂಭಿಸಿದ ಹಂಪಿ ಉತ್ಸವ ಎರಡು ದಶಕಗಳನ್ನು ಪೂರೈಸಿದೆ. ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರ ಜೊತೆಗೆ ಪ್ರತಿ ವರ್ಷ ಒಂದಿಲ್ಲೊಂದು ಹೊಸ ವಿಚಾರಗಳನ್ನು ಹೊತ್ತು ತರುತ್ತಿದ್ದ ಹಂಪಿ ಉತ್ಸವ ಈ ಬಾರಿ ಕೃಷಿ ವಿಚಾರ ಸಂಕಿರಣ ಕೈ ಬಿಟ್ಟದ್ದು ಕೃಷಿಪ್ರಿಯರಿಗೆ ನಿರಾಸೆ ತಂದಿದೆ.
ಕಳೆದ ವರ್ಷದಿಂದ ಆರಂಭಗೊಂಡಿದ್ದ ಕೃಷಿ ವಿಚಾರ ಸಂಕಿರಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ನಾಡಿನ ದೂರದ ಜಿಲ್ಲೆಗಳ ಅನೇಕ ರೈತರು ಕೃಷಿಗೋಷ್ಠಿಯಲ್ಲಿ ಪಾಲ್ಗೊಂಡು ಒಕ್ಕಲುತನದ ಅನೇಕ ಬಗೆಗಳನ್ನು ಅರಿತುಕೊಂಡಿದ್ದರು. ಈ ಸಲವೂ ಹೊಲ-ಬೆಳೆಗಳ ಮಾಹಿತಿ ಬಯಸಿ ಅನೇಕ ರೈತರು ಹಂಪಿ ಉತ್ಸವಕ್ಕೆ ಬಂದರಾದರೂ ಅವರಿಗೆ ಸಾಹಿತ್ಯ, ಸಂಗೀತ, ನೃತ್ಯದ ಹೊರತಾಗಿ ಬೇರೆನೂ ಸಿಗಲಿಲ್ಲ.
ಕೃಷಿ ವಿಚಾರ ಸಂಕಿರಣವನ್ನು ಹಂಪಿ ಉತ್ಸವದಲ್ಲಿ ಆರಂಭಿಸಿದ ಕೀರ್ತಿ ಬಳ್ಳಾರಿಯ ಈಗಿನ ಜಿಲ್ಲಾಧಿಕಾರಿ ಡಾ| ವಿ.ರಾಮಪ್ರಸಾತ ಮನೋಹರ್ ಅವರಿಗೆ ಸೇರುತ್ತದೆ. ಕಳೆದ ವರ್ಷ ಆರಂಭಗೊಂಡಿದ್ದ ಈ ವಿಚಾರಗೋಷ್ಠಿಯನ್ನು ಸ್ವತಃ ಅವರೇ ಉದ್ಘಾಟಿಸಿದ್ದರು. ಇನ್ನು ಮುಂದೆ ಪ್ರತಿ ವರ್ಷ ಹಂಪಿ ಉತ್ಸವದಲ್ಲಿ ಕೃಷಿಗೆ ಪೂರಕ ಗೋಷ್ಠಿಗಳನ್ನು ನಡೆಸುವ ಭರವಸೆಯನ್ನೂ ನೀಡಿದ್ದರು.
ಸಮೃದ್ಧ ಮಳೆ ಕಾರಣವಾಯಿತೇ?: ಕಳೆದ ಬಾರಿ ಹಂಪಿ ಉತ್ಸವ ನಡೆದಾಗ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಎಂ.ಪಿ.ಪ್ರಕಾಶ್ ಅವರ ಕನಸಿನ ಉತ್ಸವ ನಿಲ್ಲಬಾರದು ಎನ್ನುವ ಕೂಗು ಒಂದೆಡೆಯಾದರೆ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಬರಗಾಲದಿಂದ ತತ್ತರಿಸುವ ಈ ಸಂದರ್ಭದಲ್ಲಿ ಉತ್ಸವದ ಗೊಡವೆ ಬಿಡಿ ಎನ್ನುವ ಧ್ವನಿ ಮತ್ತೂಂದೆಡೆಯಾಗಿತ್ತು.
ಕೊನೆಗೂ ಎಲ್ಲ ಸಾಧಕ-ಬಾಧಕಗಳನ್ನು ಚಿಂತಿಸಿ ಹಂಪಿ ಉತ್ಸವ ಸ್ಥಗಿತಗೊಳಿವುದು ಬೇಡ ಎಂದು ತೀರ್ಮಾನಿಸಿ ನಡೆಸಲಾಯಿತು. ಬರಗಾಲ ಎಂದಾಕ್ಷಣ ಸಹಜವಾಗಿ ರೈತ ಕಣ್ಮುಂದೆ ಬರುತ್ತಾನೆ. ಈ ಉತ್ಸವದಲ್ಲಿ ರೈತನ ಒಳಗೊಳ್ಳುವಿಕೆಯೂ ಇರಲಿ ಎನ್ನುವ ಸದುದ್ದೇಶದಿಂದ ಕೃಷಿ ವಿಚಾರ ಸಂಕಿರಣ ಪರಿಚಯಿಸಲಾಯಿತು.
ಪ್ರಗತಿಪರ ರೈತ ಡಾ| ಮಲ್ಲಣ್ಣ ನಾಗರಾಳ ಸಹಜ ಕೃಷಿ ಮತ್ತು ಯುವಕರು ಕೃಷಿ ಕಡೆ ಹೊರಳಲಿ ಎನ್ನುವ ಸಂದೇಶ ನೀಡಿದ್ದರು. ಬೇಸಾಯ ತಜ್ಞ ಡಾ| ವಿ.ಎಸ್. ಸುರಕೋಡ್ ಬರ ನಿರ್ವಹಣೆ ಮತ್ತು ಮಿತ ನೀರು ಬಳಕೆ ಕುರಿತು ಉಪನ್ಯಾಸ ನೀಡಿದ್ದರು.
ಈ ಸಲ ರಾಜ್ಯದ ಬಹುತೇಕ ಕಡೆ ಸಮೃದ್ಧ ಮಳೆ ಸುರಿದಿದೆ. ಬಳ್ಳಾರಿ ಜಿಲ್ಲೆಯಲ್ಲೂ ಸಹ ವರುಣನ ಆರ್ಭಟ ಜೋರಾಗಿತ್ತು. ಜಿಲ್ಲೆಯ ತುಂಗಭದ್ರಾ ಜಲಾಶಯ ಮತ್ತೇ ಬಾಗಿನ ಸ್ವೀಕರಿಸಿದೆ. ಎಡ-ಬಲದಂಡೆ ಕಾಲುವೆಗಳಿಗೆ ಸಾಕೆನಿಸುವಷ್ಟು ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಮಳೆ-ಬೆಳೆಯ ಸಮೃದ್ಧಿಯ ಈ ದಿನಗಳೇ ಕೃಷಿ ವಿಚಾರ ಸಂಕಿರಣ ಮರೆಯಲು ಕಾರಣವಾಯಿತೇ? ಎನ್ನುವ ಅಭಿಪ್ರಾಯಗಳು ರೈತಾಪಿ ಜನರಿಂದ ವ್ಯಕ್ತವಾಗಿವೆ.
ಬಸವರಾಜ ಕರುಗಲ್
ಕೃಷಿ, ಕೃಷಿಕನನ್ನು ನಿರ್ಲಕ್ಷಿಸಿದರೆ ಎಲ್ಲರಿಗೂ ತೊಂದರೆ ಎಂಬುದನ್ನು ವಿವರಿಸಬೇಕಿಲ್ಲ. ಕಳೆದ ವರ್ಷ ಆರಂಭಗೊಂಡಿದ್ದ ಕೃಷಿ ವಿಚಾರ ಸಂಕಿರಣ ಈ ವರ್ಷ ಮರೆತು ಹೋಗಿದೆ. ಮಳೆಯಾದರೂ ಸಹ ರೈತನಿಗೆ ಸಮಸ್ಯೆಗಳು ಇದ್ದದ್ದೇ. ಈಗ
ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಈ ಕುರಿತು ಹಂಪಿ ಉತ್ಸವದಲ್ಲಿ ಚಿಂತನ-ಮಂಥನ ನಡೆಯಬೇಕಿತ್ತು. ಉತ್ಸವ ಎಂದರೆ ಹಾಡುವುದು, ಕುಣಿಯುವುದು ಮಾತ್ರವಲ್ಲ, ಜ್ಞಾನದ ಹಂಚಿಕೆಯೂ ಆಗಬೇಕು.
ಹನುಮಂತಪ್ಪ ಹೊಳಿಯಾಚೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಹೈ.ಕ ವಿಭಾಗ.
ಬಳ್ಳಾರಿ ಜಿಲ್ಲಾಡಳಿತ ರೈತನನ್ನು ಕಡೆಗಣಿಸಿಲ್ಲ. ಕೃಷಿಕರಿಗಾಗಿ ಈ ಬಾರಿ ಎತ್ತಿನ ಬಂಡಿ ಉತ್ಸವ ನಡೆಸಲಾಗಿದೆ. 300ಕ್ಕೂ ಅಧಿಕ ಎತ್ತಿನ ಬಂಡಿಗಳು ಪಾಲ್ಗೊಂಡಿದ್ದವು. ಕಳೆದ ಬಾರಿ ಕೃಷಿ ವಿಚಾರ ಸಂಕಿರಣದಲ್ಲಿ ಎಲ್ಲ ರೈತರಿಗೂ ಚರ್ಚಿಸಲು ವೇದಿಕೆ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಬಂದಿದ್ದರಿಂದ ಕೃಷಿ ವಿಚಾರಗೋಷ್ಠಿಯನ್ನು ನವೆಂಬರ್ ಕೊನೆಗೆ ಕೃಷಿ ಕಾಲೇಜಿನಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗುವುದು.
ಡಾ| ವಿ.ರಾಮಪ್ರಸಾತ್ ಮನೋಹರ್, ಜಿಲ್ಲಾಧಿಕಾರಿ, ಬಳ್ಳಾರಿ
ಬಾಯಲ್ಲಿ ಎನ್ನಡ.. ಮನದಲ್ಲಿ ಕನ್ನಡ!
ಹಂಪಿ: ಏಮನ್ನಾ… ಬಾಗುನ್ನಾವನ್ನಾ… ಟಿಫಿನ್ ಅಯನ್ನಾನ… ಎಕ್ಕುಂಡಿಕ್ಕನ್ನಾ…ಮಲ್ಲೇಮೇ ಅಕ್ಕಾ… ಅಂತಾ ಪನಿ ಅಯನಾ… ಎಲಾಗುಂದಿ ಉತ್ಸವವಮ್… ಇವು ಹಂಪಿಯ ಎಲ್ಲೆಡೆ ಸಾಮಾನ್ಯವಾಗಿ ಕೇಳಿ ಬರುವ ತೆಲುಗು ಪದಗಳು. ಗಂಡುಮೆಟ್ಟಿನ ಭೂಮಿ ಎಂದೇ ಕರೆಯಲ್ಪಡುವ ಹಂಪಿ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ತೆಲುಗು ಭಾಷೆಯೇ ಪ್ರಮುಖ ಸಂಹವನ ಭಾಷೆ.
ಅಂತಹ ಏಮನ್ನಾ… ಬಾಗುನ್ನಾವನ್ನಾ… ಭಾಷೆಯ ದಟ್ಟ ಪ್ರಭಾವದ ನಡುವೆಯೂ ಹಂಪಿ ಉತ್ಸವ ವರ್ಷ ದಿಂದ ವರ್ಷಕ್ಕೆ ಜನರ ಉತ್ಸವವಾಗುತ್ತಿದೆ. ಇದು ಇಲ್ಲಿನ ಜನರ ಕನ್ನಡದ ಅಭಿಮಾನದ ದ್ಯೋತಕ. ಹಂಪಿಯ ಜನರಲ್ಲಿ ತೆಲುಗು ಭಾಷೆ ಹಾಸುಹೊಕ್ಕಾಗಿದೆ. ಒಂದರ್ಥದಲ್ಲಿ ತೆಲುಗು ಇಲ್ಲಿ ಜೀವಭಾಷೆ. ಆದರೂ, ಇಲ್ಲಿನ ಜನ ಎಂದೆಂದಿಗೂ ಕನ್ನಡತನವ ಬಿಟ್ಟವರೇ ಅಲ್ಲ. ಮನೆ, ಮಾರುಕಟ್ಟೆ, ಹೊರಗಡೆ ಯಾವ ಭಾಷೆಯನ್ನಾಡಲಿ ಕನ್ನಡದ ವಿಷಯಕ್ಕೆ ಬಂದಾಗ ಇಲ್ಲಿನ ಜನರು ನಿಲ್ಲುವುದೇ ಕನ್ನಡಮ್ಮನ ಪರ ಎನ್ನುವುದಕ್ಕೆ 1987ರಲ್ಲಿ ಸಣ್ಣದಾಗಿ ಪ್ರಾರಂಭವಾದ ಹಂಪಿ ಉತ್ಸವ ಈಗೀಗ ಮನೆಯ ಉತ್ಸವವಾಗುವತ್ತ ಸಾಗುತ್ತಿರುವುದೇ ಸಾಕ್ಷಿ.
ತೆಲುಗು ಜೀವನಾಧಾರ ಭಾಷೆ ಆದರೆ, ಕನ್ನಡ ಜೀವದ ಭಾಷೆ ಎಂಬುದನ್ನು ಹಂಪಿ ಹಾಗೂ ಸುತ್ತಮುತ್ತಲ ಪ್ರದೇಶದ ಜನರು ಸಾರಿ ಸಾರಿ ಹೇಳುತ್ತಿದ್ದಾರೆ. ಹಂಪಿ ಉತ್ಸವದಲ್ಲಿ ಅಪ್ಪಿತಪ್ಪಿಯೂ ತೆಲುಗು ಕೇಳಿ ಬರುವುದೇ ಇಲ್ಲ. ಅದರೆ,
ಇಲ್ಲಿ ಐಸ್ ಮಾರುವ ಅಂಗಡಿಯ ಹುಡುಗನಿಂದ ಹಿಡಿದು ಐಷಾರಾಮಿ ಹೋಟೆಲ್, ಸಣ್ಣ ಅಂಗಡಿಯಿಂದ ಹಿಡಿದು ಬಹುದೊಡ್ಡ ಮಳಿಗೆಯಲ್ಲಿ ಥಟ್ಟನೆ ಕೇಳಿ ಬರುವುದು ತೆಲುಗು. ಇಂತಹ ವಾತಾವರಣದ ನಡುವೆಯೂ ಕನ್ನಡಮ್ಮನ ನಿತ್ಯೋತ್ಸವ ನಡೆಯುತ್ತಲೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.