ಬತ್ತಿದ ತುಂಗಭದ್ರಾ; ರೈತರಲ್ಲಿ ಆತಂಕ
ಕುರುಗೋಡು: ಮಣ್ಣೂರು, ಸೂಗೂರು ಗ್ರಾಮದ ಪಕ್ಕದಲ್ಲಿರುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಬತ್ತಿ ಹೋಗಿದೆ.
Team Udayavani, May 27, 2019, 7:12 AM IST
ಕುರುಗೋಡು: ತುಂಗಭದ್ರಾ ನದಿ ಬತ್ತಿ ಹೋಗಿದ್ದು, ನದಿ ದಂಡೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ನದಿ ದಂಡೆಯ ಮಣ್ಣೂರು, ಸೂಗೂರು, ಮಣ್ಣೂರು ಕ್ಯಾಂಪ್, ದೊಡ್ಡರಾಜ ಕ್ಯಾಂಪ್, ರುದ್ರಪಾದ,ನಡವಿ, ಮುದ್ದಟನೂರು, ಹಾವಿನಾಳ, ಸಿರಿಗೇರಿ, ಗುಂಡಿಗನೂರು ಗ್ರಾಮದ ರೈತರು ಈಗಾಗಲೇ ಅಲ್ಪ ಸ್ವಲ್ಪ ಭತ್ತದ ನಾಟಿ ಮಾಡಿದ್ದರು. ಸದ್ಯ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಕಾಲುವೆಗಳಿಗೆ ಹಾಗೂ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದೆ ಬತ್ತಿ ಹೋಗಿದೆ. ಇದರಿಂದ ಮುಂಗಾರು ಬೆಳೆ ಬೆಳೆಯಲು ರೈತರು ಭೂಮಿ ಹದಗೊಳಿಸಿದ್ದಾರೆ. ಇನ್ನೂ ಕಾಲುವೆಗಳಿಗೆ ಹಾಗೂ ನದಿಗೆ ನೀರು ಬಿಟ್ಟರೆ ಸಸಿ ಮಡಿಗಳನ್ನು ಹಾಕಲು ರೈತರು ಕಾಯುತ್ತಿದ್ದಾರೆ.
ಸದ್ಯ ಭತ್ತದ ಬೆಳೆಗಳನ್ನು ಕಟಾವು ಮಾಡಿರುವ ನದಿ ದಂಡೆಯ ರೈತರು ಮರು ಮುಂಗಾರು ಬೆಳೆ ಬೆಳೆಯಲು ಮೇ ತಿಂಗಳಲ್ಲಿ ಸೋನಾ, ನಲ್ಲೂರು ಸೋನಾ, ಗಂಗಾ ಕಾವೇರಿ ಸೇರಿ ವಿವಿಧ ರೀತಿಯ ಭತ್ತದ ಬೀಜಗಳನ್ನು ಹೊರ ತಾಲೂಕಿನಿಂದ ತಂದು ಸಸಿ ಮಡಿ ಹಾಕಿ ಜೂನ್ ತಿಂಗಳಲ್ಲಿ ಭತ್ತದ ಬೆಳೆಯನ್ನು ನಾಟಿ ಮಾಡುವ ಚಟುವಟಿಕೆಯಲ್ಲಿ ತೊಡಗಬೇಕಿದ್ದ ರೈತರು ನದಿಯಲ್ಲಿ ನೀರು ಇಲ್ಲದ ಪರಿಣಾಮ ಸಸಿ ಮಡಿ ಹಾಕಲು ಮುಂದಾಗದಿರುವುದು ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಂತಾಗಿದೆ.
ಇದರ ಸಮಸ್ಯೆ ಅರಿತಿರುವ ಕೆಲ ರೈತರು ಈಗಾಗಲೇ ನದಿಯಲ್ಲಿರುವ ಬಸಿ ನೀರಿಗೆ ಸಸಿ ಮಡಿಗಳನ್ನು ಹಾಕಿ ಸರಿಯಾದ ಸಮಯಕ್ಕೆ ಭತ್ತದ ಬೆಳೆ ನಾಟಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಆದರೂ ಹಾಕಿರುವ ಸಸಿ ಮಡಿಗಳು ರೈತರ ಕೈ ಸೇರದೆ ಭತ್ತದ ಬೆಳೆ ಬೆಳೆಯಲು ಕಷ್ಟಕರವಾಗಿದೆ. ಇದರಿಂದ ಹಲವು ರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ ಹಾಗೆ ಬಿಟ್ಟು ಕಾಲುವೆಗಳಿಗೆ ಮತ್ತು ನದಿಗೆ ನೀರು ಹರಿಸಿದ ಮೇಲೆ ಬೆಳೆಗಳನ್ನು ನಾಟಿ ಮಾಡಿದ್ರೆ ಆಯ್ತು ಅಂತಹ ಭೂಮಿಗಳನ್ನು ಹಾಗೆ ಬಿಟ್ಟಿದ್ದಾರೆ.
ಜನ ಜಾನುವಾರುಗಳಿಗೆ ತೊಂದರೆ: ತುಂಗಭದ್ರಾ ನದಿಯಿಂದ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕರ್‌ಗಳಿಗೆ ನೀರಿನ ಸಂಪರ್ಕ ಹೊಂದಿದ್ದು, ಟ್ಯಾಂಕರ್‌ನಿಂದ ಗ್ರಾಮದ ಸಾರ್ವಜನಿಕ ನಲ್ಲಿಗಳಿಗೆ ನೀರು ಸರಬರಾಜು ಆಗುತ್ತಿದ್ದು, ನದಿಯಲ್ಲಿ ನೀರು ಬತ್ತಿ ಹೋಗಿದ್ದು, ನೀರಿನ ಬವಣೆ ಜನ, ಜಾನುವಾರುಗಳಿಗೆ ಕಾಡುವ ಸ್ಥಿತಿ ಸಮಿಪಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್ ಹೈಕಮಾಂಡ್ ತಾಕೀತು
Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.