ಸಂಘಟನೆ ಮಾಡಲು ಯಾರೂ ಸಂಬಳ ಕೊಡಲ್ಲ; ನರಸಪ್ಪ
ನಂತರ 2002ರಿಂದ ಆರಂಭವಾಗಿದ್ದು, ಇದೀಗ ನಿರಂತರವಾಗಿ ಮುಂದುವರೆದಿದೆ.
Team Udayavani, Jul 18, 2022, 6:17 PM IST
ಬಳ್ಳಾರಿ: ಸಮುದಾಯವನ್ನು ಒಗ್ಗೂಡಿಸಿ, ಸಂಘಟನೆ ಮಾಡಲು ಯಾರೂ ಸಂಬಳ ನೀಡಲ್ಲ. ನಾವೇ ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು. ಆಗ ಮಾತ್ರ ಸಮುದಾಯ ಒಗ್ಗೂಡಿ, ಸಂಘಟನೆ ಬಲಿಷ್ಠವಾಗಲು ಸಾಧ್ಯ ಎಂದು ಛಲವಾದಿ ಮಹಸಭಾ ಜಿಲ್ಲಾಧ್ಯಕ್ಷ ನರಸಪ್ಪ ಹೇಳಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಮಹಾಸಭಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮುದಾಯವನ್ನು ಒಗ್ಗೂಡಿಸಿ, ಸಂಘಟನೆ ಮಾಡುವಾಗ ಸಂಘದಿಂದ ನಮಗೇನು ಲಾಭವಾಗಿದೆ ಎಂಬ ಟೀಕೆ, ಟಿಪ್ಪಣಿಗಳು ಕೇಳಿಬರುವುದು ಸಹಜ. ಆದರೆ, ಸಮುದಾಯಕ್ಕೆ, ಸಂಘಟನೆಗೆ ನಮ್ಮ ಕೊಡುಗೆ ಏನು ಎಂಬ ಆತ್ಮವಿಮರ್ಶೆಯನ್ನು ನಾವೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದ ಸಮಾಜದ ತಳಮಟ್ಟದಲ್ಲಿದ್ದ ಛಲವಾದಿ ಸಮುದಾಯ ಇಂದು ಈ ಮಟ್ಟಕ್ಕೆ ಅಭಿವೃದ್ಧಿಯಾಗಿದೆ. ಸಮುದಾಯದಲ್ಲಿ ಇಂದು ವಿದ್ಯಾವಂತರಾಗಿ, ಉನ್ನತಾಧಿಕಾರಿಗಳು, ರಾಜಕೀಯ ವ್ಯಕ್ತಿಗಳಾಗಿ ಬೆಳೆದಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಹಾಗಾಗಿ ಸಮುದಾಯಕ್ಕೆ, ನಾವು ಹುಟ್ಟಿದ ಊರಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಮನೋಭಾವ ಎಲ್ಲರಲ್ಲೂ ಮೂಡಬೇಕು. ಆ ಮೂಲಕ ಸ್ವಯಂ ಪ್ರೇರಣೆಯಿಂದ ಸಂಘಟನೆಯಲ್ಲಿ ಪಾಲ್ಗೊಂಡು ಸಂಘವನ್ನು, ಸಮುದಾಯವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದವರು ಕೋರಿದರು.
ಶಕ್ತಿ ಮೀರಿ ಕೆಲಸ: ಛಲವಾದಿ ಮಹಾಸಭಾ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಮುದಾಯದಕ್ಕೆ, ಸಮುದಾಯದ ಯುವಕರಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದ ನರಸಪ್ಪ, ಸರ್ಕಾರದಿಂದ ಸಾಲಸೌಲಭ್ಯ ಪಡೆದ ಜಿಲ್ಲೆಯ 17 ಯುವಕರಿಗೆ 37 ಲಕ್ಷ ಸಬ್ಸಿಡಿ ಕೊಡಿಸಿರುವೆ. ಸಮುದಾಯಕ್ಕೆ ಕಲ್ಯಾಣ ಮಂಟಪ ನಿರ್ಮಿಸುವ ಸಲುವಾಗಿ ನಗರ ಹೊರವಲಯದಲ್ಲಿ 5 ಎಕರೆ ಜಮೀನನ್ನು ಗುರುತಿಸಲಾಗಿತ್ತು. ಆ ಜಮೀನನಲ್ಲಿ ಕಲ್ಯಾಣ ಮಂಟಪ, ಐಎಎಸ್ ತರಬೇತಿ, ವಸತಿ ಶಾಲೆ, ಹಾಸ್ಟೆಲ್ ನಿರ್ಮಿಸುವ ಕುರಿತು ಚಿಂತನೆಯಿತ್ತು. ಅಂದಿನ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಅವರು ಸಹ ಉತ್ತಮವಾಗಿ ಸಹಕಾರ ನೀಡಿದ್ದರು.
ಸರ್ಕಾರದಿಂದ ಮಂಜೂರು ಮಾಡಿಸುವಲ್ಲೂ ಸಹ ಬೆಂಗಳೂರಿಗೆ ಹಲವು ಬಾರಿ ತಿರುಗಿದರೂ ಕೆಲ ತಾಂತ್ರಿಕ ಸಮಸ್ಯೆಯಿಂದ ಅದನ್ನು ಪಡೆಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಜಮೀನಿಗಾಗಿ ಪುನಃ ಹೋರಾಟ ನಡೆಸುವೆ ಎಂದು ಭರವಸೆ ನೀಡಿದರು. ಸಮುದಾಯದ ಹಿರಿಯ ಮುಖಂಡ ಸಿದ್ದಬಸಪ್ಪ ಮಾತನಾಡಿ, 1992 ರಿಂದ ಸಂಘಕ್ಕಾಗಿ ಹೋರಾಟ ಮಾಡಿದ್ದೇನೆ. ಮಧ್ಯದಲ್ಲಿ ಕೆಲ ಭಿನ್ನಾಭಿಪ್ರಾಯಗಳಿಂದ ಅಲ್ಲಲ್ಲಿ ಸಂಘಟನೆ ಕುಂಠಿತವಾಗಿದೆ ಹೊರತು, ಸ್ಥಗಿತಗೊಂಡಿಲ್ಲ.
ನಂತರ 2002ರಿಂದ ಆರಂಭವಾಗಿದ್ದು, ಇದೀಗ ನಿರಂತರವಾಗಿ ಮುಂದುವರೆದಿದೆ. ಸಂಘಟನೆಗಾಗಿ ಎಲ್ಲಿಗೆ ಹೋದರೂ ಸ್ವಂತ ಹಣ ಖರ್ಚು ಮಾಡಿಕೊಂಡು ಹೋಗಿದ್ದೇವೆ ಹೊರತು, ಯಾರಿಂದಲೂ ಹಣ ಪಡೆದಿಲ್ಲ. ದೇಣಿಗೆ ಕೇಳುವುದೇ ಗೊತಿಲ್ಲ. ನಮ್ಮ ದುಡ್ಡಿನಲ್ಲಿ ಸಂಘಟನೆ ಮಾಡುವುದೇ ನಮ್ಮ ಛಲ. ಈ ಸಂಘಟನೆಯನ್ನು ಇಂದಿನ ಯುವಪೀಳಿಗೆ ಮುನ್ನಡೆಸಿಕೊಂಡು ಹೋಗಬೇಕು ಎಂದವರು ತಿಳಿಸಿದರು. ಇದಕ್ಕೂ ಮುನ್ನಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.
ಸಂಘಟನೆಯ ಹಿರಿಯ ಮುಖಂಡ ಡಿ.ಎಚ್. ಹನುಮೇಶಪ್ಪ, ಸಿರುಗುಪ್ಪ ತಾಲೂಕು ಅಧ್ಯಕ್ಷ ವೈ. ಶ್ರೀನಿವಾಸ್, ಕಂಪ್ಲಿಯ ಲಕ್ಷ್ಮಣ ಮಾತನಾಡಿದರು. ಸಿ.ಶಿವಕುಮಾರ್, ಶ್ರೀನಿವಾಸಲು, ಜಂಬಯ್ಯ, ಶಾಂತಕುಮಾರ್, ಶಂಕರ್, ಕೇಶಪ್ಪ, ಈಶ್ವರರಾವ್, ಓಂಕಾರಪ್ಪ, ವಡ್ಡು ಗ್ರಾಮದ ಬಸಪ್ಪ, ಕೊಳಗಲ್ಲು ಮಲ್ಲಯ್ಯ, ಶೇಖರ್, ಸುಗ್ಗನಹಳ್ಳಿ ರಮೇಶ್, ಬಾಲಕೃಷ್ಣ, ಅಶೋಕ್‌ಕುಮಾರ್, ಮಲ್ಲಯ್ಯ ದೇವಸಮುದ್ರ, ವೆಂಕಟೇಶ್ ಸೇರಿದಂತೆ ಸಮುದಾಯದ ಹಲವುರು ಇದ್ದರು. ಬಿ.ವೈ. ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.