ಎನ್‌ಎಂಡಿಸಿ ಖಾಸಗೀಕರಣಕ್ಕೆ ವಿರೋಧ
Team Udayavani, Jul 29, 2017, 12:31 PM IST
ಸಂಡೂರು: ಕೇಂದ್ರ ಸರ್ಕಾರ ಒಂದಲ್ಲಾ ಒಂದು ನೆಪ ಹೇಳುವ ಮೂಲಕ ಸುಸ್ಥಿತಿ ಮತ್ತು ಉತ್ತಮ ಲಾಭಾದಾಯಕವಾದ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುತ್ತಿರುವುದು ಘೋರ ಅನ್ಯಾಯ. ತಕ್ಷಣ ಈ ಕಾರ್ಯ ನಿಲ್ಲಿಸಬೇಕು. ಇಲ್ಲವಾದರೆ ಎಲ್ಲಾ ನೌಕರರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ದೋಣಿಮಲೈ ಐರನ್ ಓರ್ ಕಂಪನಿಯ ಕಾರ್ಮಿಕ ಮುಖಂಡ ಎನ್.ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ತಾಲೂಕಿನ ದೋಣಿಮಲೈನಲ್ಲಿ ರಾಷ್ಟ್ರೀಯ ಖನಿಜ ನಿಗಮದ ಎಲ್ಲ (ಎನ್‌ಎಂಡಿಸಿ ) ಕಂಪನಿಯ ನೌಕರರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನವರತ್ನ ಎಂದು ಹೆಸರು ಪಡೆದ ಎನ್‌ಎಂಡಿಸಿ ಕಂಪನಿಯ ಆಡಳಿತಕ್ಕೆ ಒಳಪಟ್ಟ ಜಗದಲ್‌ಪುರ ಉಕ್ಕಿನ ಕಾರ್ಖಾನೆ ಖಾಸಗೀಕರಣ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಈ ಕಂಪನಿಯೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿದೆ. ಅಲ್ಲದೆ, ಈ ಕಂಪನಿಯಿಂದ ಯಾವುದೇ ನಷ್ಟವಿಲ್ಲ. ಈ ಹಿಂದೆ ನೂತನ ಅಭ್ಯರ್ಥಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು ಅದನ್ನು ಏಕಾಏಕಿ ತಡೆದು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಕೂಡಲೇ ನೇಮಕಾತಿ ಪ್ರಕ್ರಿಯೆ ಮತ್ತೆ ಪ್ರಾರಂಭಿಸಬೇಕು. ಈಗಾಗಲೇ ಎನ್‌ಎಂಡಿಸಿ ಕಂಪನಿಯವರು ನಿರ್ಮಿಸುತ್ತಿರುವ ಮತ್ತು ಉತ್ಪಾದನೆಗೆ ಸಜ್ಜುಗೊಂಡಿರುವ ಪೈಲೆಟ್ ಪ್ಲಾಂಟ್‌ನ್ನು ಕುದುರೆಮುಖ ಕಂಪನಿಗೆ ನೀಡಿರುವುದನ್ನು ಹಿಂಪಡೆದು ಎನ್‌ಎಂಡಿಸಿ ನೌಕರರಿಗೆ ವಹಿಸಬೇಕು. ಕುಮಾರಸ್ವಾಮಿ ಅದಿರು ಕಂಪನಿಯನ್ನು ಖಾಸಗಿಯವರಿಗೆ ನೀಡಿದ್ದು, ಅದರ ಪರವಾನಗಿ ಎನ್‌ಎಂಡಿಸಿ ಪಡೆದುಕೊಂಡಿದೆ. ಆದರೆ ಖಾಸಗಿಯವರಿಗೆ ನೀಡಿ ಖಾಸಗೀಕರಣ ಮಾಡಲು ಹೊರಟಿದೆ. ಇದನ್ನು ತಕ್ಷಣ ಹಿಂಪಡೆಯಬೇಕು. ಎನ್ ಎಂಡಿಸಿ ಕಂಪನಿಯಲ್ಲಿ ನಡೆಸುತ್ತಿರುವ ಎಲ್ಲ ರೀತಿಯ
ಹೊರಗುತ್ತಿಗೆ, ಖಾಸಗೀಕರಣ ತಡೆಯುವ ಮೂಲಕ ಸಾರ್ವಜನಿಕ ಕಂಪನಿಯಾಗಿ ಲಾಭ ತರುತ್ತಿರುವ ಎನ್‌ಎಂಡಿಸಿ ಕಾರ್ಮಿಕರನ್ನು ರಕ್ಷಿಸಬೇಕು. ನೂತನ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಖಾಸಗೀಕರಣ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಕಾರ್ಮಿಕ ಮುಖಂಡರಾದ ಡಿಐಒಪಿಇ ಕೆ.ರವೀಂದ್ರನಾಥ, ಎಂಎಂಡಬ್ಲೂ ಮುಖಂಡ ಪಿ.ಭಾಸ್ಕರ್, ಬಿ.ಹೊನ್ನೂರಸ್ವಾಮಿ, ಎಸ್.ಗೋಪಿ, ಎಚ್.ಬಸವರಾಜ, ರವಿಕುಮಾರ್, ಜನಾರ್ದನ್, ಸತ್ಯಬಾಬು, ಅರಿಮೂರ್ತಿ, ಇಸ್ಮಾಯಿಲ್, ಗಡಾದ್ ವೀರಣ್ಣ, ಮಾರುತಿ ಸೇರಿದಂತೆ
ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.