ಮಾಸ್ಕ್ ಧರಿಸದ ಸವಾರರಿಗೆ ದಂಡ
Team Udayavani, Jul 21, 2020, 10:35 AM IST
ಹರಪನಹಳ್ಳಿ: ಕೋವಿಡ್ ಸೋಂಕು ದಿನದಿಂದ ದಿನಕ್ಕೆ ತನ್ನ ಕೆನ್ನಾಲಿಗೆ ಚಾಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪುರಸಭೆ ವತಿಯಿಂದ ಪಟ್ಟಣದಲ್ಲಿ ಮಾಸ್ಕ್ ಧರಿಸಿದ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸಿದರು.
ಪಟ್ಟಣದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ಅವರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ದಂಡ ಕೂಡ ವಸೂಲಿ ಮಾಡಲಾಯಿತು. ಇದಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿವಿಧ ಅಂಗಡಿಗಳ ಮಾಲೀಕರಿಗೂ ಸಹ 100ರೂ ದಂಡ ವಿ ಸಲಾಯಿತು. ಪುರಸಭೆಯಿಂದ ಕೋವಿಡ್ ಸೋಂಕು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದ್ದೇವೆ. ಪಟ್ಟಣದಲ್ಲಿ ಆಟೋದ ಧ್ವನಿವರ್ಧಕ ಮೂಲಕ ಮತ್ತು ಫ್ಲೆಕ್ಸ್‌ಗಳ ಮೂಲಕ ಜಾಗೃತಿ ಕಾರ್ಯ ಮಾಡಿದ್ದೇವೆ. ಪ್ರತಿಯೊಬ್ಬರೂ ಸ್ವತ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿದರೂ ಸಹ ವಾಹನ ಸವಾರರು ಮಾಸ್ಕ್ ಇಲ್ಲದೇ ಬೀದಿಗೆ ಬರುತ್ತಿದ್ದಾರೆ. ಅಂತವರಿಗೆ ದಂಡ ವಿಧಿಸುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಆರ್.ನಾಗರಾಜನಾಯ್ಕ ತಿಳಿಸಿದರು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪಿ. ಮಂಜುನಾಥ, ಸಮುದಾಯ ಸಂಘಟನಾಧಿಕಾರಿ ಸಿ. ಲೋಕ್ಯನಾಯ್ಕ, ಕಚೇರಿ ವ್ಯವಸ್ಥಾಪಕ ಅಶೋಕ್, ಗೌಡಪ್ಪ ಹಾಗೂ ಪೌರ ಕಾರ್ಮಿಕ ಸಿಬ್ಬಂದಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
Bellary: ಕನ್ನಡಿಗರಿಗೆ, ಯಶ್ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.