ಮುರಿದ ಮನೆಯಲ್ಲಿ ಹರಿದ ಬದುಕು!
ಆತಂಕದಲ್ಲಿ ಜೀವನ ಸಾಗಿಸುತ್ತಿದೆ ಅಂಗವಿಕಲ ಕುಟುಂಬ
Team Udayavani, Sep 20, 2020, 6:32 PM IST
ಮರಿಯಮ್ಮನಹಳ್ಳಿ: ಹೊಸಪೇಟೆ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಪೋತಕಟ್ಟೆ ಗ್ರಾಮದಲ್ಲಿ ಅರ್ಧ ಗೋಡೆ ಬಿದ್ದಿರುವ ತುಂಬಾ ಶಿಥಿಲಾವಸ್ಥೆಯಲ್ಲಿರುವ ಮನೆಯೊಂದರಲ್ಲಿ ಇಬ್ಬರು ಅಂಗವಿಕಲರನ್ನು ಒಳಗೊಂಡ ಕುಟುಂಬವೊಂದು ತೀವ್ರ ಆತಂಕದಲ್ಲಿ ಜೀವನ ದೂಡುತ್ತಿದೆ.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪೋತಲಕಟ್ಟೆ ಗ್ರಾಮದಲ್ಲಿ 55 ವರ್ಷದ ಸೋಮಪ್ಪ ಅಂಗವಿಕಲ (ಕಿವುಡುತನ) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳು ಒಬ್ಬ ಮಗಳಿಗೆ ಬುದ್ಧಿಮಾಂದ್ಯತೆ ಹಾಗೂ ಪೂರ್ಣ ಅಂಗವಿಕಲತೆ ಇದೆ. ಇವರ ಹದಿನೇಳು ವರ್ಷದ ಮಗ ಕೊಟ್ರೇಶ ದೈಹಿಕವಾಗಿ ಬೌದ್ಧಿಕವಾಗಿ ಚೆನ್ನಾಗಿದ್ದರೂ ಕುಟುಂಬ ನಿರ್ವಹಣೆಗಾಗಿ ನಾಲ್ಕನೇ ತರಗತಿ ಓದುವಾಗಲೇ ಶಾಲೆಬಿಟ್ಟು ತನ್ನ ಭವಿಷ್ಯದ ಬದುಕನ್ನೇ ಕತ್ತಲೆಗೆ ದೂಡಿ ತಾನೂ ಕೂಲಿ ಕೆಲಸಕ್ಕೆ ಹೋಗುತ್ತಾ ಕುಟುಂಬಕ್ಕೆ ಆಸರೆಯಾಗಿರುವ ಕತೆ ಕೇಳಿದರೆ ಎಂಥವರಿಗೂ ಕಣ್ಣೀರು ಬರುತ್ತದೆ.
ಸೋಮಪ್ಪನ ಹೆಂಡತಿ ನಾಗರತ್ನಮ್ಮ ಹುಟ್ಟಿನಿಂದಲೇ ಬುದ್ಧಿಮಾಂದ್ಯತೆ ಹಾಗೂ ಪೂರ್ಣ ಅಂಗವಿಕಲತೆಯಿಂದ ಬಳಲುತ್ತಿರುವ ಸುಮಾರು ಹದಿನಾರು ವರ್ಷದ ಮಗಳು ರೇಖಾಳ ಆರೈಕೆಯಲ್ಲಿಯೇ ಕಾಲದೂಡುವಂತಾಗಿದೆ. ನಮ್ಮಪ್ಪನಿಗೆ ವಯಸ್ಸಾಯಿತು ಸರ್ ಅವರಿಗೆ ಕಿವಿನೂ ಸರಿಯಾಗಿ ಕೇಳಸಲ್ಲ. ಅವರು ಕೆಲಸಮಾಡೋಕೆ ಆಗಲ್ಲ ಅಂತ ಮಗ ಕೊಟ್ರೇಶ ಶಾಲೆ ಓದೋದು ಬಿಟ್ಟು ಕೂಲಿ ಹೋಗುತ್ತಿದ್ದಾನೆ ಎಂಬ ಸಂಗತಿ ನಿಜಕ್ಕೂ ಎಂಥವರಿಗೂ ಮರುಕವುಂಟಾಗುತ್ತದೆ. ಕೆಲಸಮಾಡುವ ಕಡೆ ಹಣ ಪಡೆಯದೇ ಕಾಳು ಕಡಿ ಪಡೆಯುತ್ತಾನೆ ಕೆಲವೊಮ್ಮೆಬರುವ ಅಲ್ಪಾದಾಯದಲ್ಲೇ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಗಳ ಅಂಗವಿಕಲರ ಮಾಸಾಶನ 600 ರೂಪಾಯಿ ಬರುತ್ತಿದೆ ಆದರೂ ಜೀವನ ಸುಧಾರಣೆ ಆಗುತ್ತಿಲ್ಲ. ಕೊಟ್ರೇಶ್ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನಂತೆ ಅಂತಹ ಹುಡುಗ ಶಾಲೆಬಿಟ್ಟಿರುವುದು ಆತನ ಭವಿಷ್ಯವೇ ಹಾಳಾಗಿದೆ ಎನ್ನುತ್ತಾರೆ ಗ್ರಾಮದ ಸಮೂಹ ಶಕ್ತಿ ಸಂಘಟನೆ ದೇವರಾಜ್ ಅವರು.
ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಜೀವ ಭಯದಿಂದಲೇ ದಿನಗಳನ್ನು ದೂಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಮನೆಯ ಅರ್ಧ ಗೋಡೆ ಕುಸಿದಿದೆ. ಇಂತಹ ಕಡುಬಡವರು ಹಾಗೂ ಅಂಗವಿಕಲರ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಒದಗಿಸಲು ಸರ್ಕಾರ ವಿಶೇಷ ಕೋಟಾಗಳಲ್ಲಿ ಅವಕಾಶ ಕಲ್ಪಿಸಿದ್ದರೂ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇವರೆಲ್ಲಾ ಆತಂಕದಲ್ಲಿ ಬದುಕುವಂತಾಗಿದೆ. ಐದಾರು ವರ್ಷಗಳಿಂದ ಊರಾಗ ಗ್ರಾಮಸಭೆಗಳು ನಡೆದಾಗೆಲ್ಲಾ ಆಶ್ರಯ ಮನೆಕೊಡಿಸಿ ಅಂತಬೇಡಿಕೊಂಡ್ರೂ ಯಾರೂ ನಮ್ಮ ಮಾತಿಗೆ ಬೆಲೆಕೊಡ್ತಿಲ್ಲ ಅಂತ ಸೋಮಪ್ಪ ಅಳಲು ತೋಡಿಕೊಳ್ಳುತ್ತಾರೆ.
ನಾನು ಬುದ್ಧಿಮಾಂದ್ಯ ಮಗಳ ಚಾಕರಿ ಮಾಡಿಕೋತ ಮನ್ಯಾಗಾ ಇರ್ತಿನಿ ಸರಾ. ನಮ್ಮ ಮಗ ಸಾಲಿಬಿಟ್ಟು ದುಡಿಯಾಕ ಹೋಗಾದು ತಾಯಿಯಾದ ನನಗೆ ಹೊಟ್ಯಾಗ ಸಂಕಟಾಕೈತಿ. ಬಡತನ ಇದ್ರೂ ಪರವಾಗಿಲ್ಲ ನನ್ನ ಮಗಳಿಗೆ ಇಂಥ ಸ್ಥಿತಿ ಬರಬಾರದಿತ್ತು. ನಾನೂ ದುಡಿದು ನಮ್ಮ ಮಕ್ಕಳನ್ನ ಓದಿಸ್ತಿದ್ವಿ.ದೇವರಿಗೆ ನಮ್ಮ ಮ್ಯಾಗ ಕರುಣೀನಾ ಇಲ್ಲದಂಗಾಗೈತಿ ನನ್ನ ಮಗ ಬಾಳ ಜಾಣ ಅದಾನಂತ ಮೆಷ್ಟರು ಹೇಳ್ತಾ ಇದ್ರು ಆದರ ನಮ್ ಕಷ್ಟಕ್ಕ ಅವನೂ ಓದಾದು ಬಿಟ್ಟು ಕೂಲಿ ಹೋಗಾಕತ್ಯಾನ.-ನಾಗರತ್ನಮ್ಮ, ಸೋಮಪ್ಪನ ಹೆಂಡತಿ
ಇವರ ಮನೆ ಹಿಂಭಾಗದ ಗೋಡೆ ಅರ್ಧ ಕುಸಿದು ಬಿದ್ದಿದೆ. ಈ ಕುಟುಂಬಕ್ಕೆ ಆಶ್ರಯ ಮನಿ ಕೊಡುವಲ್ಲಿ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ಮಾಡಿದ್ದಾರೆ. ಅದಕ್ಕೆ ಈಗ ನಮ್ಮ ಸಮೂಹ ಶಕ್ತಿ ಸಂಘಟನೆಯಿಂದ ವಸತಿ ಸಚಿವರಿಗೆ ಅರ್ಜಿ ಬರೆದು ಕಳಿಸಿದ್ದೇವೆ. ಈ ಕುಟುಂಬಕ್ಕೆ ನ್ಯಾಯ ಒದಗಿಸುವವರೆಗೆ ಸಂಘಟನೆ ಜೊತೆಗಿರುತ್ತದೆ. – ದೇವರಾಜ್, ಸಮೂಹ ಶಕ್ತಿ ಸಂಘಟನೆ ಪ್ರತಿನಿಧಿ
-ಎಂ. ಸೋಮೇಶ್ ಉಪ್ಪಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.