ಕಲಿತ ವಿದ್ಯೆ ಸದ್ವಿನಿಯೋಗವಾಗಲಿ: ಪ್ರಭಂಜನ್‌ಕುಮಾರ್
Team Udayavani, Aug 7, 2017, 2:21 PM IST
ಬಳ್ಳಾರಿ: ವಿದ್ಯಾರ್ಥಿಗಳಿಗೆ ಕಲಿಕೆಯೆ ಗುರಿ ಆಗಬೇಕು. ಆನಂತರ ಸಮಾಜದ ಒಳಿತಿಗೆ ಬೋಧಕರಾಗಬೇಕು. ಜೀವನದಲ್ಲಿ ಕಲಿತ ವಿದ್ಯೆಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ವಿಮ್ಸ್ ವೈದ್ಯಕೀಯ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ| ಪ್ರಭಂಜನ್‌ಕುಮಾರ್
ಹೇಳಿದರು.
ನಗರದ ವೀವಿ ಸಂಘದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ನೂತನ ವಿದ್ಯಾರ್ಥಿಗಳಿಗೆ ಸ್ವಾಗತಕೋರುವ ಫ್ರೆಶರ್ ಡೇ-2017 ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ವ್ಯಕ್ತಿತ್ವವು ವಿಕಸಿತಗೊಂಡಿದ್ದಲ್ಲಿ ಅರಿವಿನ ಮನೆಯಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಬೆಕು. ಜೀವನ ಮಕ್ಕಳು, ಪಾಲಕರು ಹಾಗೂ ಬೋಧಕರ ತ್ರಿವೇಣಿ ಸಂಗಮ. ಪೋಷಕರು ತಮ್ಮ
ಮಕ್ಕಳ ಮೇಲೆ ತಮ್ಮ ಸ್ವಂತದ ಅಭಿಪ್ರಾಯ ಹೇರುವ ಬದಲು ಪರಿಶೀಲಕರಾಗಿ ಅವರನ್ನು ಗಮನಿಸುತ್ತಿರಬೆಕು ಎಂದರು.
ನಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ಶಾಲಾ ಕಾಲೇಜುಗಳೇ ಮೊದಲ ತಾಯಿ. ಅದಕ್ಕಾಗಿ ಏನಾದರೂ ಆಗು ಮೊದಲು ಮಾನವನಾಗಬೇಕೆಂದು ಹಿರಿಯರು ನುಡಿದಿದ್ದಾರೆ. ನಿಮ್ಮ ಮುಂದಿನ ಜೀವನದಲ್ಲಿ ಯಶಸ್ವಿಯಾಗಲು, ಶಿಸ್ತು, ಸಮಯಪಾಲನೆ, ಸರಿಯಾದ ರೀತಿಯ ಕಷ್ಟಪಡುವ ಸ್ವಭಾವಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ವೀವಿ ಸಂಘದ ಮಾಜಿ ಕಾರ್ಯದರ್ಶಿ ಗುರುಸಿದ್ದಯ್ಯ ಸ್ವಾಮಿ ಮಾತನಾಡಿ, ಓದು ಅಂದರೆ ಸಮುದ್ರದ ಮರಳಿನಲ್ಲಿ ಚಿಪ್ಪುಗಳನ್ನು ಆರಿಸುವುದಲ್ಲ. ಸಮುದ್ರದ ಆಳದಲ್ಲಿರುವ ಮುತ್ತು, ರತ್ನ, ಹವಳಗಳನ್ನು ಹುಡುಕುವುದೇ ಓದು. ಓದಿಗೆ
ಕೊನೆ ಇಲ್ಲ. ಓದಿನಿಂದ ಅನ್ವೇಷಣೆಗಳಿಗೆ ಮಿತಿಯಿಲ್ಲ. ಆದರೆ, ಗುರಿ ಬಲವಾಗಿರಬೇಕು ಎಂದರು.
ಇಲ್ಲಿಯವರೆಗೆ ನೀವು ಮಾಡಿದ ಹುಡುಗಾಟ ಸಾಕು, ಇನ್ನುಮುಂದೆ ಹೊಸ ಹೊಸ ಜ್ಞಾನದ ವಿಷಯಗಳ ಬಗ್ಗೆ ಹುಡುಕಾಟ ಪ್ರಾರಂಭವಾಗಲಿ ಎಂದರು. ವೀ.ವಿ.ಸಂಘದ ಸಹಕಾರ್ಯದರ್ಶಿ ಐಗೋಳ್ ಚಿದಾನಂದ ಮಾತನಾಡಿ, ಗಡಿನಾಡಿನಲ್ಲಿರುವ ಬಳ್ಳಾರಿಯು ಕರ್ನಾಟಕಕ್ಕೆ ಸೇರಲು ಶ್ರಮಿಸಿ ಈ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಿದ ಮಹಾನ್ ಚೇತನ ವೈ. ಮಹಬಲೇಶ್ವರಪ್ಪನವರು. ಈ ಸಂಸ್ಥೆಯು ಕೇವಲ ಒಂದು ಜಾತಿಗೆ ಸೀಮಿತವಾಗಿರದೇ ಜಾತ್ಯತೀತವಾಗಿದೆ. ಮೂರು ದಶಕಗಳಿಂದ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಾ ಬಂದಿದೆ ಎಂದರು. ವೀ.ವಿ.ಸಂಘದ ಕಾರ್ಯದರ್ಶಿ ಉಡೇದ್ ಬಸವರಾಜ ಮಾತನಾಡಿ, ವೀರಶೈವ ವಿದ್ಯಾವರ್ದಕ ಸಂಘದ ಈ ಅಂಗ ಸಂಸ್ಥೆಗಳಲ್ಲಿ ಯಾವಾಗಲೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮೊದಲ ಆದ್ಯತೆ. ವಿದ್ಯಾರ್ಥಿಗಳ ಏಳಿಗೆಗೆ ಹಗಳಿರುಳು ಶ್ರಮಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಏಚರೆಡ್ಡಿ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಹೊಸಪೇಟೆ ಪಿಡಿಐಟಿ ಕಾಲೇಜಿನ ಅಧ್ಯಕ್ಷ ಗೋನಾಳ್ ವಿರೂಪಾಕ್ಷಗೌಡ, ಕೊರ‌್ಲಗುಂದಿ ಬಸವರಾಜ ಮಾತನಾಡಿದರು. ಪ್ರೊ| ರಾಖೀಪಾಟೀಲ್ ಅವರು
ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಹಲವಾರು ಸೌಲಭ್ಯಗಳನ್ನು ವಿವರಿಸಿದರು.
ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಸಂಯೋಜಕರಾದ ಡಾ| ಜೇವರ್ಗಿ ಪಕ್ಕೀರಪ್ಪ, ಡಾ| ಸುಮಂಗಳಾ ಬಿಇ ಮೊದಲನೆ ವರ್ಷದ ವಿದ್ಯಾರ್ಥಿಗಳಿಗೆ ವಿಟಿಯುನಲ್ಲಿ ಹೊಸದಾಗಿ ಅಳವಡಿಸಲಾಗುತ್ತಿರುವ ಛಾಯ್ಸ ಬೇಸಡ್ ಕ್ರೆಡಿಟ್ ಸಿಸ್ಟಮ್ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಪ್ರೊ| ಗುರುರಾಜ್
ಮಹಾವಿದ್ಯಾಲಯದ ಪ್ಲೇಸ್ಟ್ಮೆಂಟ್-ವಿವರಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗು ಪೋಷಕರು, ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಮಹಾವಿದ್ಯಾಲಯದ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ| ಕುಪ್ಪಗಲ್ ವೀರೇಶ್ ಸ್ವಾಗತಿದರು. ಉಪಪ್ರಾಂಶುಪಾಲ ಡಾ.ಟಿ. ಹನುಮಂತರೆಡ್ಡಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಚ್.ಎಂ.ರೋಹಿಣಿ ನಿರೂಪಿಸಿದರು.
ಪ್ರೊ.ಟಿ.ಎಚ್.ಪಾಟೀಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!