ಕೂಡ್ಲಿಗಿ: ಪ್ರಗತಿ ಪರಿಶೀಲನಾ ಸಭೆ
Team Udayavani, Dec 1, 2020, 4:17 PM IST
ಕೂಡ್ಲಿಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ನಾಗರತ್ನಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ತಾಪಂ ಸದಸ್ಯರು
ಕೆಲವು ಸಮಸ್ಯೆಗಳನ್ನು ಬಗೆಹರಿಸಲು ತಹಶೀಲ್ದಾರ್‌ರು ಹಾಜರಾಗಿದ್ದಾಗಸದಸ್ಯರುಗಳ ಸಮಸ್ಯೆಗಳ ಅಹವಾಲುಪ್ರಸ್ತಾಪ ಮಾಡಿ ವಾಡಿಕೆಯಂತೆ ಮಳೆ ಸಾಕಷ್ಟು ಆಗಿ ಬೆಳೆ ತಕ್ಕಮಟ್ಟಿಗೆ ಬಂತುಶೇಂಗಾ 1 ಪಲ್ಲಕ್ಕೆ ಕೇವಲ 3 ನಾಲ್ಕುಚೀಲ ಸಿಕ್ಕರೆ ಅವನ ಗತಿಯೇನು? ತಾಲೂಕಿನಾದ್ಯಂತ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಪಾಪನಾಯಕ ಅಳಲನ್ನು ತೋಡಿ ವಿಷಯ ಪ್ರಸ್ತಾಪಿಸಿದರು.
ಸ್ವಾಮಿ ನಮ್ಮ ತಾಲೂಕು ಬರಪೀಡಿತ ತಾಲೂಕು ಎಂದು ಸರ್ಕಾರ ಈಗಾಗಲೇಘೋಷಣೆ ಮಾಡಿದರೂ ರೈತರು ಮಾತ್ರ ಅನುದಾನಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಜುಲೈ ತಿಂಗಳಿನಿಂದ ಮಳೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಮಳೆ ಆಶ್ರಯಿಸಿರುವ ರೈತರಲ್ಲಿ ಸಮಸ್ಯೆ ಕಂಡುಬಂದಿರುವುದು 150 ಎಕರೆ ಮಾತ್ರ ಬೆಳೆ ಲಾಸು ಆಗಿದ್ದು, ಅತಿವೃಷ್ಟಿಯಿಂದ 450 ಎಕರೆಯಲ್ಲಿ 350 ಎಕರೆ ಸಂಬಂಧಿ ಸಿದ ಡಾಟ್ ಎಂಟ್ರಿ ಮಾಡಿ ವರದಿ ಕಳುಹಿಸಿದೆ ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ಸಭೆಯಲ್ಲಿ ಸಮರ್ಥನೆ ಮಾಡಿಕೊಂಡರು.
ತಾ.ಪಂ ಇಒ ಎಂ.ಜಿ. ಬಸಣ್ಣ ತಾಪಂ ಸಭಾಂಗಣದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಶಿಕ್ಷಣ ಇಲಾಖೆಯ ಕುರಿತು ಚರ್ಚಿಸುವ ಸಂದರ್ಭದಲ್ಲಿ ಬಿಇಓ ಉಮಾದೇವಿ ಮಾತನಾಡಿ, ತಾಲೂಕಿನಲ್ಲಿ ಬರುವ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಕಟ್ಟೆಚ್ಚರವಹಿಸಿ.ಆನಲೈನ್5,6,7, ತರಗತಿಗಳನ್ನು ಪಾಠಗಳನ್ನು ಮಾಡುತ್ತಿದ್ದಾರೆ, ಜೊತೆಯಲ್ಲಿ ಶಿಕ್ಷಕರು ಸರಿಯಾದ ಮಾರ್ಗದರ್ಶನದಲ್ಲಿ ಮಕ್ಕಳು ಪಾಠವನ್ನು ಆಲಿಸಿಕೊಂಡು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಪಂ ಸದಸ್ಯ ಪಾಪನಾಯಕ ಮಾತನಾಡಿ, ಗ್ರಾಮಂತರ ಭಾಗದ ಮಕ್ಕಳಿಗೆ ಸಾಕಷ್ಟು ಹೊರೆಯಾಗುತ್ತದೆ ಎಂದು ಹೇಳಿದಾಗ ಪ್ರತಿಯುತ್ತರವಾಗಿ ಬಿಇಒ ಮಾತನಾಡಿ, ಅಂತಹ ಮಕ್ಕಳನ್ನು ಗಮನಸಿ ಅವರಿಗೆ ಟ್ಯಾಬ್ ವ್ಯವಸ್ಥೆ ಕಲ್ಪಿಸಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ 79 ಶಾಲೆಗಳಲ್ಲಿ 72 ಶಾಲೆಗಳು ಎ-ಗ್ರೇಡ್‌ಉಳಿದ ಶಾಲೆಗಳು ಬಿಗ್ರೇಡ್ ತೆಗೆದುಕೊಂಡು ಜಿಲ್ಲೆಯಲ್ಲಿ ಅತ್ಯುಮವಾದ ಸಾಧನೆಗೈದಿದೆ. ಇನ್ನೂ ಪ್ರೋತ್ಸಾಹಧನ ವಿಚಾರಕ್ಕೆ ಬಂದಾಗ 7000 ಸಾವಿರ ಬೈಸಿಕಲ್ ಬರಬೇಕಾಗಿತ್ತು ಆದರೆ ಕೋವಿಡ್-19ನಿಂದ ಅನುದಾನ ಯಾವುದೇ ರೀತಿ ಬಿಡುಗಡೆಯಾಗಿಲ್ಲ. ಶಾಲಾ ಶಿಕ್ಷಕರಿಗೆ ತರಬೇತಿಗಳನ್ನು ಹಾಕಿ ಜೀವನಕೌಶಲ್ಯ, ಮುಖಾಮುಖೀ ತರಬೇತಿ ನೀಡಿದೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿಯಾಗಿದೆ. ಗಂಭೀರವಾಗಿ ಪರಿಗಣಿಸಿ ತಾಲೂಕಿನ ಎಲ್ಲ ಪಿಡಿಒಗಳು ಒಗ್ಗಟಿನಿಂದ ಕಾರ್ಯನಿರ್ವಹಿಸಿ ಚುನಾವಣೆಗೆ ಬರುವಂಥ ಎಆರ್‌ಒ ಮತ್ತು ಪಿಆರ್ ಓಗಳಿಗೆ ತೊಂದರೆಯಾಗದಂತೆನಿಗಾವಹಿಸಿ. ತಮ್ಮ ಜವಾಬ್ದಾರಿ ಜೊತೆಯಲ್ಲಿ ಜನರಿಗೆ ಮೌಖೀಕವಾಗಿ ಸಂದೇಶಗಳನ್ನು ನೀಡುತ್ತಾ, ಚುನಾಣೆಗಳಿಗೆ ಸಂಬಂಧಿ ಸಿದ ಬ್ಯಾನರಗಳನ್ನು ಹಾಕಿಸಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಒ ಜಿ.ಎಂ. ಬಸಣ್ಣ, ಉಪಾಧ್ಯಕ್ಷೆ ರತ್ನಮ್ಮ ನಿಂಗನಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ನಾಗರಾಜ್, ತಾಪಂ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.