![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Sep 22, 2020, 7:47 PM IST
ಬಳ್ಳಾರಿ: ಸಂಸತ್‌ನಲ್ಲಿ ರೈತರ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 8 ಜನ ಸಂಸದರನ್ನು ಅಮಾನತುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಂಸತ್ ಭವನದ ಗಾಂ ಧೀಜಿ ಪ್ರತಿಮೆ ಬಳಿ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಸೇರಿ 8 ಜನರು ಸೋಮವಾರ ಧರಣಿ ನಡೆಸಿದರು.
ರೈತರ ಬಿಲ್ ದೇಶದ ಅನ್ನದಾತ ರೈತರ ವಿರುದ್ಧವಾಗಿರುತ್ತದೆ. ಈ ಬಿಲ್ ಜಾರಿಗೆ ಬಂದರೆ ಎಪಿಎಂಸಿ ಯಾರ್ಡ್‌ಗಳು ಹಾಗೂ ಮಾರುಕಟ್ಟೆಗಳನ್ನು ತಗೆದುಹಾಕುವ ಕೆಲಸ ಮಾಡಲಾಗುತ್ತದೆ. ದೇಶದಲ್ಲಿ ಶೇ. 86% ಹೆಚ್ಚು ರೈತರು 5 ಎಕರೆಗಳಿಂತ ಕಡಿಮೆ ಭೂಮಿ ಹೊಂದಿರುತ್ತಾರೆ. ಇದರಿಂದಾಗಿ ಸಣ್ಣಪುಟ್ಟ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಕಡಿಮೆ ಬೆಳಗಳನ್ನು ಎಲ್ಲಿ ಮಾರಾಟ ಮಾಡಬೇಕು ಹಾಗೂ ಎಲ್ಲಿ ದಾಸ್ತಾನು ಮಾಡಬೇಕು ಎಂಬುದರ ಬಗ್ಗೆ ಗೊಂದಲಗಳು ಇವೆ. ಈ ಬಿಲ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಈ ಬಿಲ್ಲನ್ನು ಜಾರಿಗೆ ತಂದರೆ ಎಪಿಎಂಸಿ ಹಾಗೂ ಮಾರ್ಕೆಟ್ ಗಳು ಇಲ್ಲದೇ ರೈತರು ಎಲ್ಲಿ ಬೆಳೆಗಳನ್ನು ಮಾರಾಟ ಮಾಡಬೇಕು? ಹಾಗೂ ಎಲ್ಲಿ ದಾಸ್ತಾನು ಮಾಡಬೇಕು? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾನಿರತ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಎನ್‌ಡಿಎ ಬೆಂಬಲಿತ ಸದಸ್ಯರೇ ಈ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಮತಚಲಾವಣೆ ಕಡಿಮೆಯಾಗಲಿದೆ ಎಂದು ಮನಗಂಡ ಕೇಂದ್ರ ಸರ್ಕಾರ ಧ್ವನಿಮತದ ಮೂಲಕ ಬಿಲ್‌ಗೆ ಸಭೆಯ ಅನುಮೋದನೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕ ಬಿಲ್ ಸೇರಿ ಇನ್ನಿತರೆ ಬಿಲ್‌ಗಳ ಅನುಮೋದನೆಗೂ ಅಡ್ಡಿಯಾಗಬಹುದೆಂದು ರಾಜ್ಯಸಭೆಯಲ್ಲಿತಮ್ಮನ್ನು ಸೇರಿ 7 ಸದಸ್ಯರನ್ನು ಸದನದಿಂದ ವಾರದ ಕಾಲ ಅಮಾನತು ಮಾಡಲಾಗಿದೆ.ನಾವು ದೃತಿಗೆಡದೆ ರೈತರ ಪರವಾಗಿ ನಿಲ್ಲುತ್ತೇವೆ ಎಂದವರು ತಿಳಿಸಿದ್ದಾರೆ.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.