ವಿಧಾನಸೌಧದ ಬಾಗಿಲು ತಟ್ಟಿದ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಪ್ರತಿಭಟನೆ

ಕುರುಗೋಡು: ಭೂಮಿ ಕಳೆದುಕೊಂಡ ಸಂತ್ರಸ್ತರ ನಿತ್ಯ ಪ್ರತಿಭಟನೆ

Team Udayavani, Feb 18, 2023, 5:42 PM IST

1-sadasdsad

ಕುರುಗೋಡು: ಸಮೀಪದ ಕುಡತಿನಿ ಪಟ್ಟಣದ ಅರ್ಸೆಲ್ಲಾರ್ ಮಿತ್ತಲ್, ಎನ್ ಎಂ ಡಿ ಸಿ, ಬ್ರಹ್ಮಿಣಿ ಸ್ಟೀಲ್ಸ್ , ಉತ್ತಮ ಗಾಲ್ವಾ ಕಂಪನಿಗಳಿಗೆ ಕಾರ್ಖಾನೆ ಗಳನ್ನು ಸ್ಥಾಪಿಸಲು ಕೆಐಎಡಿಬಿ ವತಿಯಿಂದ ಸುಮಾರು 11,100 ಎಕರೆ ಸುತ್ತಮುತ್ತಲಿನ ಗ್ರಾಮಗಳ ರೈತರ ಮತ್ತು ಸರಕಾರಿ ಜಮೀನುಗಳನ್ನು ನೀಡಿದ್ದು ಕಾರ್ಖಾನೆಗಳ ಮಾಲೀಕರು ಕಾರ್ಖಾನೆ ಸ್ಥಾಪಿಸುವುದಾಗಿ, ಉದ್ಯೋಗ ನೀಡುವುದಾಗಿ ತಿಳಿಸಿ ಕಡಿಮೆ ವೆಚ್ಚದಲ್ಲಿ ವಶಪಡಿಸಿಕೊಂಡು ಸುಮಾರು ವರ್ಷ ಕಳೆದರೂ ಕಾರ್ಖಾನೆ ಸ್ಥಾಪಿಸದೆ ಉದ್ಯೋಗ ಭತ್ಯೆ ನೀಡದೆ ಇರುವುದನ್ನು ಭೂಮಿ ಕಳೆದುಕೊಂಡ ಸಂತ್ರಸ್ತರು ಮತ್ತು ವಿವಿಧ ಸಂಘಟನೆ ಮುಖಂಡರು ಹಾಗೂ ಪಟ್ಟಣದ ಸಾರ್ವಜನಿಕರು ನಿತ್ಯ ಪ್ರತಿಭಟನೆ ಕೈಗೊಂಡಿದ್ದು, ಸದ್ಯ ಕೂಡ ಮುಂದುವರೆದಿದೆ.

ಸ್ಥಳಕ್ಕೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ, ಸಚಿವ ಶ್ರೀರಾಮುಲು, ಶಾಸಕ ತುಕಾರಾಂ ಸೇರಿದಂತೆ ಅನೇಕ ನಾಯಕರುಗಳು ಭೇಟಿ ನೀಡಿ ಭರವಸೆ ನೀಡಿ ಹೋಗಿದ್ದಾರೆ.

ಕುಡತಿನಿ ಪಟ್ಟಣ ಸೇರಿ ಸುತ್ತಮುತ್ತಲಿನ ವಿವಿಧ ಭಾಗದಲ್ಲಿ ಸುಮಾರು ವರ್ಷಗಳಿಂದ ಕಾರ್ಖಾನೆಗಳು ರೈತರ ಜಮೀನುಗಳನ್ನು ವಶಪಡಿಸಿಕೊಂಡಿವೆ. ಆದರೆ ಕಾರ್ಖಾನೆಗಳು ಪ್ರಾರಂಭವಾಗದೆ, ಸ್ಥಳೀಯರಿಗೆ ಉದ್ಯೋಗ ನೀಡದೆ ಮೋಸ ಎಸಗಿವೆ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

ಇದೆ ವೇಳೆ ವಿವಿಧ ಸಂಘಟನೆಯ ಮುಖಂಡರು ಮಾತನಾಡಿ,ಕುಡತಿನಿ ಪಟ್ಟಣದ ಮಿತ್ತಲ್, ಉತ್ತಮ್ ಗಾಲ್ವಾ ಹಾಗೂ ಎನ್. ಎಂ. ಡಿ. ಸಿ ಕಂಪನಿಗಳು 2010 ರಲ್ಲಿ 11,100 ಸಾವಿರ ಎಕರೆ ಜಮೀನುಗಳನ್ನು ವಶಪಡಿಸಿಕೊಂಡು 13 ವರ್ಷ ಕಳೆದರೂ ಕಾರ್ಖಾನೆಗಳನ್ನು ಪ್ರಾರಂಭವಾಗದೆ ಮತ್ತು ಉದ್ಯೋಗ ನೀಡದೇ ಹಾಗೂ ರೈತರಿಗೆ ಉಳುಮೆ ಮಾಡಲು ಮರು ಜಮೀನು ನೀಡದೆ ಅನ್ಯಾಯ ಎಸಗಿದ್ದಾರೆ.

ಕುಡತಿನಿ, ವೇಣಿ ವೀರಾಪುರ, ಹರಗಿನಡೋಣಿ, ಜಾನೆಕುಂಟೆ, ಕೊಳಗಲ್ಲು,ಯರಂಗಳಿ ಗ್ರಾಮಗಳ ಸಾವಿರಾರು ಕುಟುಂಬಗಳು ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಜಮೀನುಗಳು ಇಲ್ಲದೇ ಬದುಕು ಅಡಕತ್ತರಿಯಲ್ಲಿ ಸಿಲುಕಿ ಜೀವನ ನಿರ್ವಹಣೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಸರ್ಕಾರ ಕೂಡಲೇ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಇಲ್ಲವೇ ನಮ್ಮ ಜಮೀನುಗಳನ್ನು ವಾಪಸ್ಸು ನೀಡಬೇಕು. ಅಲ್ಲಿಯವರೆಗೆ ಮಾಸಿಕ 25 ಸಾವಿರ ಉದ್ಯೋಗ ಭತ್ಯೆ ನೀಡಬೇಕೆಂದು ಸರ್ಕಾರಕ್ಕೆ ಮತ್ತು ಕಂಪನಿಗಳಿಗೆ ಒತ್ತಾಯ ಕೂಡ ಮಾಡುತ್ತಿದ್ದಾರೆ.

ಅಲ್ಲದೆ ಜಮೀನುಗಳ ರೈತರಿಗೆ ಕಾರ್ಖಾನೆ ಗಳಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಕಡಿಮೆ ವೆಚ್ಚದಲ್ಲಿ ಕಂಪನಿ ಮಾಲೀಕರು ರೈತರ ಜಮೀನು ಗಳನ್ನು ವಶಪಡಿಸಿಕೊಂಡು 13 ವರ್ಷಗಳು ಕಳೆದರೂ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕಂಪನಿಗಳು ಬಂದ್ ಆಗಿರುವುದರಿಂದ ರೈತರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ, ಇದನ್ನೇ ನಂಬಿಕೊಂಡ ರೈತರು ಬೀದಿಗೆ ಬಂದಿದ್ದಾರೆ. ಒಂದು ಒತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನೂ ಕೆಲ ರೈತರು ಇದರಿಂದ ಮೋಸ ಹೋಗಿ ಜೀವನ ನಿರ್ವಹಣೆಗೆ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಜೀವನ ಮಾಡುವಂತ ಪರಿಸ್ಥಿತಿ ಬಂದೋಗಿದೆ. ಇದರ ಬಗ್ಗೆ ಅನೇಕ ವರ್ಷ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು ಸರಕಾರ ಸ್ಪಂದಿಸಿದೆ ಮತ್ತು ಮಾಲೀಕರು ಇತ್ತಕಡೆ ತಲೆ ಹಾಕದೆ ಮೌನವಾಗಿದ್ದರೆ ಎಂದು ಆಕ್ರೋಶ ಹೊರಹಾಕಿದ್ದರು.

ಸುಮಾರು 60 ದಿನದಿಂದ ಪ್ರತಿಭಟನೆ ಮಾಡಿದರು ಇದಕ್ಕೆ ಯಾರು ಕೂಡ ಇತ್ತಕಡೆ ತಲೆ ಹಾಕದೆ ಇರುವುದು ದುರಂತವಾಗಿತ್ತು.

ಇದಕ್ಕೆ ಸಂಬಂದಿಸಿದ ಇಲಾಖೆ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಬಂದು ಸೂಕ್ತ ಭರವಸೆ ನೀಡುವವರಿಗೂ ಪ್ರತಿಭಟನೆ ಮಾತ್ರ ಹಿಂಪಡಿಯುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದರು.

ಸದ್ಯ ಈಗ ಪ್ರತಿಭಟನೆಯ ಮುಖಂಡರು ಹಾಗೂ ಸಂತ್ರಸ್ತರು ವಿಧಾನಸೌಧದ ಬಾಗಿಲು ತಟ್ಟಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಸಂಘಟನೆ ಮುಖಂಡರು ಹಾಗೂ ಸಂತ್ರಸ್ತರು ಬೆಂಗಳೂರು ವಿಧಾನಸೌದಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸಚಿವರುಗಳು ಸಂಬಂದಿಸಿದ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ನೋಟಿಸ್ ಜಾರಿ ಮಾಡಿ ರೈತರ ಮತ್ತು ಸರಕಾರಿ ಜಮೀನು ಗಳನ್ನು ನೀಡಿದರು ಯಾಕೆ ಕಾರ್ಖಾನೆ ಗಳು ಸ್ಥಾಪನೆ ಗೊಂಡಿಲ್ಲ ಎಂಬುವುದರ ಬಗ್ಗೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಸರಕಾರದ ನಿಯಮವಳಿ ಪ್ರಕಾರ ಪ್ರತಿ ಎಕರೆಗೆ 30 ಲಕ್ಷದ 20 ಸಾವಿರ ನಿಗದಿ ಮಾಡಲಾಗಿದೆ ಆದರೆ ರೈತರು ಕೇವಲ 8ರಿಂದ 9 ಲಕ್ಷದ ವರೆಗೆ ಮಾರಾಟ ಮಾಡಿರುವುದು ಸರಕಾರದ ನಿಯಮ ಉಲ್ಲಂಘನೆ ಮಾಡಿದಂತಾಗಿದೆ. ಸದ್ಯ ನಿಮಗೆ ಅಲ್ಪ ನ್ಯಾಯ ದೊರಕಬೇಕಾದರೆ ಇದರ ಮದ್ಯೆ ನ್ಯಾಯಲಯ ಪ್ರವೇಶಿಸಿದರೆ ಹೊಸ ದರದ ಬೆಲೆ ನಿಮಗೆ ಸಿಗಬಹುದು ಇದನ್ನು ಬಿಟ್ಟರೆ ಭೂಮಿ ಮರು ಪಡಿಯುವುದಕ್ಕೆ ಮತ್ತು ನೂತನ ಹೊಸ ದರ ವನ್ನು ಮಾಡುವುದಕ್ಕೆ ಅವಕಾಶ ಸಿಗುವುದು ಕಷ್ಟ ಹಾಗೆ ಇದರ ಬಗ್ಗೆ ಸಂಬಂದಿಸಿದ ಅಧಿಕಾರಿಗಳ ಮತ್ತು ಹಿರಿಯ ಅಧಿಕಾರಿಗಳ ಅತ್ತಿರ ಮಾತನಾಡಿ ನಿಮಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Paddy 2

Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.