ಮತ ರಾಜಕೀಯಕ್ಕೆ ರಾಮಾಯಣ ಬಳಕೆ ಸಲ್ಲ
Team Udayavani, Nov 13, 2018, 4:30 PM IST
ಹೊಸಪೇಟೆ: ಸಿಂಹಾಸನ ಬೇಡವೆಂದು ಕಾಡಿಗೆ ಹೋದ ರಾಮನ ಪಾತ್ರವನ್ನು ಇಂದು ಸಿಂಹಾಸನದ ಅವಕಾಶಕ್ಕಾಗಿ ಬಳಸಿಕೊಳ್ಳುತ್ತಿರುವುದು ರಾಜಕೀಯ ಅನೈತಿಕತೆ ಎಂದು ಸಾಹಿತಿ, ಚಿಂತಕ ಡಾ| ಬರಗೂರು ರಾಮಚಂದ್ರಪ್ಪ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ “ವಾಲ್ಮೀಕಿ ರಾಮಾಯಣ ಮರು ನಿರೂಪಣೆ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣವನ್ನು ಕೇವಲ ಸಾಹಿತ್ಯ ಕೃತಿಯಾಗಿ ಉಳಿಸಲಾಗಿಲ್ಲ. ಪಕ್ಷ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ರಾಜಕೀಯ ಕೃತಿಯಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ರಾಮಾಯಣಕ್ಕೆ ಮರುಪ್ರವೇಶ ಅಷ್ಟು ಸುಲಭವಲ್ಲ. ಇಂದು ಶ್ರೇಷ್ಠ ಕೃತಿಯೊಂದು ರಾಜಕೀಯ ವಲಯದಲ್ಲಿ ಅಪಬಳಕೆ, ಬೌದ್ಧಿಕ ವಲಯದಲ್ಲಿ ಅಪವ್ಯಾಖ್ಯಾನಕ್ಕೆ ಒಳಗಾಗುತ್ತಿದೆ. ಮತ ರಾಜಕೀಯದ ಸಾಧನವಾಗಿ ಬಳಸಿದರೆ ಅದು ಕೃತಿಗೆ ಮಾಡುವ ಅವಮಾನ. ಇದೆಲ್ಲದರಿಂದ ರಾಮಾಯಣಕ್ಕೆ ಮುಕ್ತಿ ಸಿಗಬೇಕು. ಶ್ರೀರಾಮ
ಏಕಪಕ್ಷದ ಸಾಧನವಾಗಬೇಕೆ? ಎಂದು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಹನೀಯರ ಜಯಂತಿ ಆಚರಣೆಗಳು ಜಾತಿಗೆ ಸೀಮಿತವಾಗುತ್ತಿವೆ. ಸಾಮಾಜಿಕ ಅಸ್ಮಿತೆಯ ಕಾರಣಕ್ಕೆ ನಾವು ಸಾಧಕರನ್ನು ನೆನೆಯಬೇಕು. ಆದರೆ ಅದರ ನಿರ್ವಹಣೆಯು ಸಮಾಜದಲ್ಲಿ ಜಾತಿಯನ್ನು ಗಟ್ಟಿಗೊಳಿಸುತ್ತಿದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ರಾಮಾಯಣವನ್ನು ಅಂತರ್ ಶಿಸ್ತೀಯ ಅಧ್ಯಯನದ ನೆಲೆಗೆ ಒಳಪಡಿಸಬೇಕು. ರಾಮಾಯಣದಲ್ಲಿ ಸೀತೆಯು ಸಹಿಷ್ಣುತೆಯ ಸಂಕೇತ. ಆದರೆ ಸೀತೆಯನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ? ಈಕೆಯ ಪ್ರತಿಮೆಯನ್ನು ಏಕೆ ಇಡುವುದಿಲ್ಲ ಎಂಬುದೇ ರಾಜಕಾರಣವಾಗಿದೆ. ಇದು ಮಹಿಳೆಗೆ ಮಾಡುವ ಅನಾದರ. ಅಂದರೆ ದೇಶದಲ್ಲಿ ಸಹಿಷ್ಣುತೆ ಇಲ್ಲದ್ದರಿಂದ ಸೀತೆಯನ್ನು ನೆನಪಿಸುವುದಿಲ್ಲ. ತಾರಾ, ಮಂಡೋದರಿ, ಊರ್ಮಿಳೆ, ಶಬರಿ, ಸೀತೆ ಇವರೆಲ್ಲ ರಾಮಾಯಣದಲ್ಲಿ ಭೂಮಿ ತೂಕದ ಪಾತ್ರಗಳು ಎಂದು ವಿವರಿಸಿದರು.
ಕುಲಪತಿ ಡಾ| ಮಲ್ಲಿಕಾ ಎಸ್.ಘಂಟಿ ಮಾತನಾಡಿ, ರಾಮಾಯಣ, ಮಹಾಭಾರತಗಳು ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ ನೆಮ್ಮದಿ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿ ವೆ. ಸಹಿಷ್ಣುತೆಯ ಧಾರಣಶಕ್ತಿ ಗ್ರಾಮೀಣ ಮಹಿಳೆಯರಿಗೆ ಎಲ್ಲಿಂದ ಬಂದಿದೆ? ಎಂದರೆ ರಾಮಾಯಣ, ಮಹಾಭಾರತಗಳಿಂದ. ರಾಜಕಾರಣವು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಈ ಸಂದರ್ಭದಲ್ಲಿ ಈ ಕಾವ್ಯಗಳು ಸಾಂತ್ವನ ಹೇಳುತ್ತಿವೆ ಎಂದರು.
ಚಿಂತಕ ಡಾ| ಕೃಷ್ಣಮೂರ್ತಿ ಹನೂರು ಮಾತನಾಡಿ, ರಾಮಾಯಣವು ದೇಶದ ಜೀವಂತ ವಸ್ತು ಸಂಗ್ರಹಾಲಯವಾಗಿದೆ ಎಂದು ರಾಮಾಯಣವನ್ನು ನಂಬಿ ಉಪಜೀವನ ನಡೆಸುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಬಿಚ್ಚಿಟ್ಟರು. ಡಾ| ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ಸಮಾಜದ ಸಂದರ್ಭ ಹಾಗೂ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದೇ ಮರುನಿರೂಪಣೆಯಾಗಿದೆ. ಸೀತೆಯ ಪಾತಿವ್ರತ್ಯದ ನಿರೂಪಣೆಗಾಗಿ ಅಗ್ನಿಪ್ರವೇಶದ ಸಂದರ್ಭದಲ್ಲಿ ಕುವೆಂಪು ಅವರು ಶ್ರೀರಾಮನ ಶುದ್ಧತೆಯನ್ನು ತಮ್ಮ ರಾಮಾಯಣದಲ್ಲಿ ಮರುನಿರೂಪಣೆಯ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು.
ಕುಲಸಚಿವ ಡಾ| ಮಂಜುನಾಥ್ ಬೇವಿನಕಟ್ಟಿ, ವಿಚಾರ ಸಂಕಿರಣದ ಸಂಚಾಲಕ ಡಾ|ಅಮರೇಶ ಯತಗಲ್, ಶೈಕ್ಷಣಿಕ ಉಪಕುಲಸಚಿವ ಡಾ| ಎಸ್. ವೈ.ಸೋಮಶೇಖರ್, ಆಡಳಿತ ಉಪಕುಲಸಚಿವ ಡಾ|ಎ. ವೆಂಕಟೇಶ ಇನ್ನಿತರರಿದ್ದರು. ಇದೇ
ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಹೊಸಪೇಟೆ: ಸಿಂಹಾಸನ ಬೇಡವೆಂದು ಕಾಡಿಗೆ ಹೋದ ರಾಮನ ಪಾತ್ರವನ್ನು ಇಂದು ಸಿಂಹಾಸನದ ಅವಕಾಶಕ್ಕಾಗಿ ಬಳಸಿಕೊಳ್ಳುತ್ತಿರುವುದು ರಾಜಕೀಯ ಅನೈತಿಕತೆ ಎಂದು ಸಾಹಿತಿ, ಚಿಂತಕ ಡಾ| ಬರಗೂರು ರಾಮಚಂದ್ರಪ್ಪ ಹೇಳಿದರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ “ವಾಲ್ಮೀಕಿ ರಾಮಾಯಣ ಮರು ನಿರೂಪಣೆ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣವನ್ನು ಕೇವಲ ಸಾಹಿತ್ಯ ಕೃತಿಯಾಗಿ ಉಳಿಸಲಾಗಿಲ್ಲ. ಪಕ್ಷ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ರಾಜಕೀಯ ಕೃತಿಯಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ರಾಮಾಯಣಕ್ಕೆ ಮರುಪ್ರವೇಶ ಅಷ್ಟು ಸುಲಭವಲ್ಲ. ಇಂದು ಶ್ರೇಷ್ಠ ಕೃತಿಯೊಂದು
ರಾಜಕೀಯ ವಲಯದಲ್ಲಿ ಅಪಬಳಕೆ, ಬೌದ್ಧಿಕ ವಲಯದಲ್ಲಿ ಅಪವ್ಯಾಖ್ಯಾನಕ್ಕೆ ಒಳಗಾಗುತ್ತಿದೆ. ಮತ ರಾಜಕೀಯದ ಸಾಧನವಾಗಿ ಬಳಸಿದರೆ ಅದು ಕೃತಿಗೆ ಮಾಡುವ ಅವಮಾನ. ಇದೆಲ್ಲದರಿಂದ ರಾಮಾಯಣಕ್ಕೆ ಮುಕ್ತಿ ಸಿಗಬೇಕು. ಶ್ರೀರಾಮ ಏಕಪಕ್ಷದ ಸಾಧನವಾಗಬೇಕೆ? ಎಂದು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಹನೀಯರ ಜಯಂತಿ ಆಚರಣೆಗಳು ಜಾತಿಗೆ ಸೀಮಿತವಾಗುತ್ತಿವೆ. ಸಾಮಾಜಿಕ ಅಸ್ಮಿತೆಯ ಕಾರಣಕ್ಕೆ ನಾವು ಸಾಧಕರನ್ನು ನೆನೆಯಬೇಕು. ಆದರೆ ಅದರ ನಿರ್ವಹಣೆಯು ಸಮಾಜದಲ್ಲಿ ಜಾತಿಯನ್ನು ಗಟ್ಟಿಗೊಳಿಸುತ್ತಿದೆ.
ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ರಾಮಾಯಣವನ್ನು ಅಂತರ್ ಶಿಸ್ತೀಯ ಅಧ್ಯಯನದ ನೆಲೆಗೆ ಒಳಪಡಿಸಬೇಕು. ರಾಮಾಯಣದಲ್ಲಿ ಸೀತೆಯು ಸಹಿಷ್ಣುತೆಯ ಸಂಕೇತ. ಆದರೆ ಸೀತೆಯನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ? ಈಕೆಯ ಪ್ರತಿಮೆಯನ್ನು ಏಕೆ ಇಡುವುದಿಲ್ಲ ಎಂಬುದೇ ರಾಜಕಾರಣವಾಗಿದೆ. ಇದು ಮಹಿಳೆಗೆ ಮಾಡುವ ಅನಾದರ. ಅಂದರೆ ದೇಶದಲ್ಲಿ ಸಹಿಷ್ಣುತೆ ಇಲ್ಲದ್ದರಿಂದ ಸೀತೆಯನ್ನು ನೆನಪಿಸುವುದಿಲ್ಲ. ತಾರಾ, ಮಂಡೋದರಿ, ಊರ್ಮಿಳೆ, ಶಬರಿ, ಸೀತೆ ಇವರೆಲ್ಲ ರಾಮಾಯಣದಲ್ಲಿ ಭೂಮಿ ತೂಕದ ಪಾತ್ರಗಳು ಎಂದು ವಿವರಿಸಿದರು.
ಕುಲಪತಿ ಡಾ| ಮಲ್ಲಿಕಾ ಎಸ್.ಘಂಟಿ ಮಾತನಾಡಿ, ರಾಮಾಯಣ, ಮಹಾಭಾರತಗಳು ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ
ನೆಮ್ಮದಿ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿವೆ. ಸಹಿಷ್ಣುತೆಯ ಧಾರಣಶಕ್ತಿ ಗ್ರಾಮೀಣ ಮಹಿಳೆಯರಿಗೆ ಎಲ್ಲಿಂದ ಬಂದಿದೆ?
ಎಂದರೆ ರಾಮಾಯಣ, ಮಹಾಭಾರತಗಳಿಂದ. ರಾಜಕಾರಣವು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಈ ಸಂದರ್ಭದಲ್ಲಿ ಈ ಕಾವ್ಯಗಳು ಸಾಂತ್ವನ ಹೇಳುತ್ತಿವೆ ಎಂದರು.
ಚಿಂತಕ ಡಾ| ಕೃಷ್ಣಮೂರ್ತಿ ಹನೂರು ಮಾತನಾಡಿ, ರಾಮಾಯಣವು ದೇಶದ ಜೀವಂತ ವಸ್ತು ಸಂಗ್ರಹಾಲಯವಾಗಿದೆ ಎಂದು
ರಾಮಾಯಣವನ್ನು ನಂಬಿ ಉಪಜೀವನ ನಡೆಸುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಬಿಚ್ಚಿಟ್ಟರು. ಡಾ| ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ಸಮಾಜದ ಸಂದರ್ಭ ಹಾಗೂ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದೇ ಮರುನಿರೂಪಣೆಯಾಗಿದೆ. ಸೀತೆಯ ಪಾತಿವ್ರತ್ಯದ ನಿರೂಪಣೆಗಾಗಿ ಅಗ್ನಿಪ್ರವೇಶದ ಸಂದರ್ಭದಲ್ಲಿ ಕುವೆಂಪು ಅವರು ಶ್ರೀರಾಮನ ಶುದ್ಧತೆಯನ್ನು ತಮ್ಮ ರಾಮಾಯಣದಲ್ಲಿ ಮರುನಿರೂಪಣೆಯ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು.
ಕುಲಸಚಿವ ಡಾ| ಮಂಜುನಾಥ್ ಬೇವಿನಕಟ್ಟಿ, ವಿಚಾರ ಸಂಕಿರಣದ ಸಂಚಾಲಕ ಡಾ|ಅಮರೇಶ ಯತಗಲ್, ಶೈಕ್ಷಣಿಕ ಉಪಕುಲಸಚಿವ ಡಾ| ಎಸ್. ವೈ.ಸೋಮಶೇಖರ್, ಆಡಳಿತ ಉಪಕುಲಸಚಿವ ಡಾ|ಎ. ವೆಂಕಟೇಶ ಇನ್ನಿತರರಿದ್ದರು. ಇದೇ
ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.