ಟೈಲರ್ ಮಗನ “ನೀಟ್’ ಸಾಧನೆ
ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 687ನೇ ರ್‍ಯಾಂಕ್,ಹುಬ್ಬಳ್ಳಿ ಕಿಮ್ಸ್ ಕಾಲೇಜಿನಲ್ಲಿ ಮೆಡಿಕಲ್ ಸೀಟ್
Team Udayavani, Jan 4, 2021, 6:32 PM IST
ಹೂವಿನಹಡಗಲಿ: ಸಾಧಿಸುವ ಛಲವಿದ್ದವರಿಗೆ ಬಡತನ, ಇತರೆ ಯಾವುದೇ ಆಡೆ ತಡೆ ಕಾಣದು ತನ್ನ ಸಾಧನೆಯ ದಾರಿ ಮಾತ್ರ ಸಾಧಕನಿಗೆ ಕಾಣುತ್ತದೆ ಎನ್ನುವ ಹಾಗೆ ಒಬ್ಬ ಬಡ ಟೈಲರ್ ಮಗನ ಸಾಧನೆ ಶ್ಲಾಘನೀಯವಾಗಿದೆ.
ಪವನ್‌ಕುಮಾರ್ ನವಲೆ ಸೆ. 13ರಂದು ನಡೆದ ನೀಟ್ ಪರೀಕ್ಷೆಯಲ್ಲಿ 598 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ 687ನೇ ರ್‍ಯಾಂಕ್ ಪಡೆದವನಾಗಿ ಹೊರ ಹೊಮ್ಮಿದ್ದಾನೆ. ಜೊತೆಗೆ ರಾಜ್ಯದ ಹುಬ್ಬಳ್ಳಿ ಕಿಮ್ಸ ಕಾಲೇಜಿನಲ್ಲಿ ಮೆಡಿಕಲ್ ಸೀಟ್ ದೊರಕಿರುವುದು ತಂದೆ ತಾಯಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ವೃತ್ತಿಯಲ್ಲಿ ಟೈಲರ್ ಆಗಿರುವ ಸುಭಾಷ್ ನವಲೆ ಹಾಗೂ ರೇಣುಕ ನವಲೇ ಟೈಲರ್ ಕೆಲಸದಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಿ ಆತನನ್ನು ಡಾಕ್ಟರ್ ರನ್ನಾಗಿ ಮಾಡಬೇಕು ಎನ್ನುವ ಕನಸು ಕಂಡವರು.ತಂದೆ ತಾಯಿಯ ಕನಸನ್ನು ನನಸು ಮಾಡುವ ರೀತಿಯಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಉತ್ತಮ ಸಾಧನೆ ಮಾಡಿದನು. 1-4ನೇ ತರಗತಿಯವರೆ ಸ್ಥಳೀಯ ಕನ್ನಡ ಮಾಧ್ಯಮತುಂಗಭದ್ರಾ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ನಂತರದಲ್ಲಿ ಮಗನನ್ನುಮೆಡಿಕಲ್ ಮಾಡಿಸಬೇಕು ಎನ್ನುವ ಹಂಬಲದಿಂದಹಡಗಲಿಯ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್‌ಗೆ ಸೇರಿಸಿದರು. 4ರಿಂದ ಪಬ್ಲಿಕ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಪವನ್ ಎಸ್‌ಎಸ್‌ಎಲ್ ಸಿ ಪರೀಕ್ಷೆ ಯಲ್ಲಿ ಶಾಲೆಗೆ ಟಾಪರ್ ಅಗಿ ಹೊರಹೊಮ್ಮಿದನು. ತಂದೆ ತಾಯಿ ಹಾಗೂ ಸ್ವತಃ ಪವನ್‌ಗೆ ಡಾಕ್ಟರ್ ಆಗಬೇಕು ಎಂದು ಕಟ್ಟಿಕೊಂಡಿದ್ದ ಕನಸು ಹಂತ ಹಂತವಾಗಿ ಮೊಳಕೆ ಒಡೆಯಲು ಪ್ರಾರಂಭಿಸಿತು.
ಮಗನ ವಿದ್ಯಾಬ್ಯಾಸಕ್ಕೆ ಆರ್ಥಿಕವಾಗಿ ಎಷ್ಟೇ ಕಷ್ಟವಾದರೂ ಸರಿ ಆತನಿಗೆ ಡಾಕ್ಟರ್‌ಮಾಡಿಸಿಯೇ ತೀರಬೇಕು ಎನ್ನುವ ಹಠದಿಂದ ಪ್ರತಿಷ್ಠಿತ ಮೂಡಬಿದಿರೆಯ ಅಳ್ವಾಸ್ ಕಾಲೇಜಿಗೆದಾಖಲಿಸಿದರು. ಪ್ರಥಮ ಹಾಗೂ ದ್ವಿತೀಯಪಿಯುಸಿ ಮುಗಿಸಿದ ಪವನ್ ಕಳೆದ ಭಾರನೀಟ್ ಪರೀಕ್ಷಕೆಯಲ್ಲಿ ಕೇವಲ 10 ಅಂಕಗಳ ಕೊರತೆಯಿಂದಾಗಿ ವೈದ್ಯಕೀಯ ಸೀಟ್ ವಂಚಿತನಾದನು. ಆದರೇನಂತೆ ಛಲಬಿಡದೆಅವರ ತಂದೆ ತಾಯಿ ಪವನ್ ನನ್ನು ಒಂದು ವರ್ಷ ಬೆಂಗಳೂರಿನ ವಿಸನ್ ಕಾಲೇಜಿಗೆ ನೀಟ್‌ತರಬೇತಿಗಾಗಿಯೇ ಕಳುಹಿಸಿದರು. ಈಗ ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಮಗ ಮೆಡಿಕಲ್ ಓದಬೇಕು ಎನ್ನುವ ಆಸೆ ಮೊದಲಿನಿಂದಲೂಇತ್ತು. ಆತನು ಜಾಣನಿದ್ದನು ನಮಗೆ ಎಷ್ಟೇ ಕಷ್ಟವಾದರೂ ಮಗನನ್ನುಮೆಡಿಕಲ್ ಮಾಡಿಸಬೇಕು ಎಂದು ಅಂದುಕೊಂಡಿದ್ದೇವು. ಈಗ ಮೆಡಿಕಲ್ ಸೀಟ್ ದೊರಕಿದ್ದಕ್ಕೆ ಸಂತೋಷವಾಗಿದೆ. ಸುಭಾಷ್ ನವಲೆ, ತಂದೆ
ಮೊದಲಿನಿಂದಲೂ ನನಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದು ವೈದ್ಯನಾಗಬೇಕು ಎನ್ನುವಹಂಬಲವಿತ್ತು. ನಮ್ಮ ಗುರುಗಳ ಹಾಗೂತಂದೆ ತಾಯಿಗಳ ಅಶೀರ್ವಾದದಿಂದ ನನಗೆಮೆಡಿಕಲ್ ಸೀಟ್ ದೊರಕಿದೆ. ಚೆನ್ನಾಗಿ ಓದಿಡಾಕ್ಟರ್ ಆಗಿ ಗ್ರಾಮೀಣ ಭಾಗದ ಜನತೆಯಸೇವೆ ಮಾಡಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದೇನೆ. –ಪವನ್ ನವಲೆ
–ವಿಶ್ವನಾಥ ಹಡಗಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.