ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ರಸ್ತೆತಡೆ
Team Udayavani, Feb 3, 2019, 7:17 AM IST
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ವಿಷ್ಣುದೇವಾಲಯ ಮಂಟಪ ಹಾಳು ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊಸಪೇಟೆ ತಾಲೂಕು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಕಮಲಾಪುರದಲ್ಲಿ ಶನಿವಾರ ರಸ್ತೆತಡೆ ನಡೆಸಿದರು.
ಕಮಲಾಪುರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಹಂಪಿಯ ಸ್ಮಾರಕಗಳಿಗೆ ಯಾರೇ ಧಕ್ಕೆ ಮಾಡಿರಲಿ ಅವರನ್ನು ಕೂಡಲೇ ಬಂಧಿಸಿ ಕಾನೂನು ಶಿಕ್ಷೆಗೊಳಪಡಿಸಬೇಕು. ಕರ್ತವ್ಯ ಲೋಪವೆಸಗಿರುವ ಭಾರತೀಯ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು. ಸ್ಮಾರಕಗಳ ಸುತ್ತ ವಿಶೇಷ ಭದ್ರತೆ ಹೆಚ್ಚಿಸಬೇಕು. ಹಂಪಿಯ ಎಲ್ಲಾ ಸ್ಮಾರಕಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಪ್ರಕರಣವನ್ನು ಅತೀ ಸೂಕ್ಷ್ಮವಾಗಿ ಪರಿಗಣಿಸಿ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕೆಂದು ಒತ್ತಾಯಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖಾಧಿಕಾರಿ ರವೀದ್ರ ಮಾತನಾಡಿ, ಈ ಪ್ರಕರಣ ನಮ್ಮ ಇಲಾಖೆ ತಲೆತಗ್ಗಿಸುವ ಪ್ರಕರಣವಾಗಿದ್ದು ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗುವುದು. ಹಂಪಿಯ ಎಲ್ಲಾ ಸ್ಮಾರಕಗಳ ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪೂಜಾರ್ ದುರ್ಗಪ್ಪ, ನಿಂಬಗಲ್ ರಾಮಕೃಷ್ಣ, ದೇವಪ್ರಿಯ, ತಿಪ್ಪೇಸ್ವಾಮಿ, ಸೋಮಶೇಖರ್ ನಾಯಕ, ಎ.ಚಿದಾನಂದ, ಗುರು, ಹುಲುಗಪ್ಪ, ಮಧುರಚನ್ನ ಶಾಸ್ತ್ರಿ, ಸಂದೀಪ್‌ಸಿಂಗ್, ಎನ್.ವೆಂಕಟೇಶ್, ಅಮಾಜಿ ಹೇಮಣ್ಣ, ಸಮಿವುಲ್ಲಾ, ಕಮಲಾಪುರ ಪಪಂ ಅಧ್ಯಕ್ಷ ಡಾ| ಬಿ.ಆರ್.ಮಳಲಿ, ಶಿವರಾಮ್, ಮಂಜುನಾಥ್, ವೆನ್ನಿಲಾ, ಗೀತಾ ಶಂಕರ್, ರಂಜನಿ, ರೂಪಾ, ರಾಧಾ, ಪಾಂಡು, ಸಂಜಯ್ ಕಾಂಬ್ಳೆ, ಕೃಷ್ಣ, ಅಶ್ವಿನ್ ರಮೇಶ್, ಜೀವರತ್ನಂ, ತಿಮ್ಮಪ್ಪ ಯಾದವ್, ಪ್ರಕಾಶ್, ತಾರಿಹಳ್ಳಿ ಜಂಬುನಾಥ್, ಬೆಳಗೋಡು ಮಂಜುನಾಥ್, ಸನೋಜ್, ಸೋಮು, ಬಂಡೆ ರಮೇಶ್, ಕಾರ್ತಿಕ್, ಉಮೇಶ್, ಗುಜ್ಜಲ್ ಹನುಮೇಶ್, ದಾದಾಪೀರ್, ಕಲ್ಯಾಣಯ್ಯ, ಲಿಯಾಕತ್, ಅನಿಲ್, ಕೆ.ಮಹಾಲಕ್ಷ್ಮಿ, ಕೇಶವ್, ವಿಜಯ್ ಕುಮಾರ್, ಮುನ್ನಿ ಖಾಸಿಂ,ಅಬುಬಕರ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.