ಆರೋಗ್ಯ ಮೇಳ ಬಡವರ ಸಂಜೀವಿನಿ
Team Udayavani, Feb 4, 2019, 9:21 AM IST
ಹರಪನಹಳ್ಳಿ: ಉಚಿತ ಆರೋಗ್ಯ ಶಿಬಿರಗಳು ಬಡವರ ಪಾಲಿಗೆ ಸಂಜೀವಿನಿಯಾಗಿದ್ದು, ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ| ಎಸ್.ಎನ್. ಮಹೇಶ್ ಹೇಳಿದರು.
ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಭಾನುವಾರ ಎಂ.ಪಿ. ಪ್ರಕಾಶ್ ಸಮಾಜಮುಖೀ ಟ್ರಸ್ಟ್, ಬೆಂಗಳೂರು ತಥಾಗತ್ ಮೆಡಿಕಲ್ ಟ್ರಸ್ಟ್, ತಾಲೂಕು ಭಾರತೀಯ ವೈದ್ಯಕೀಯ ಸಂಘದ ಆಶ್ರಯದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಂ.ಪಿ.ಪ್ರಕಾಶ್ ಕುಟುಂಬ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ. ಬೆಂಗಳೂರಿನ ವೈದ್ಯ ತಂಡದೊಂದಿಗೆ ಎಲ್ಲ ಸಲಕರಣೆ ಸೌಲಭ್ಯಗಳೊಂದಿಗೆ ಬಡವರ ಆರೋಗ್ಯ ಸೇವೆ ಮಾಡಲು ಆಗಮಿಸಿದೆ ಎಂದರು.
ಯುವನಾಯಕ, ಮಾಜಿ ಶಾಸಕ ದಿ| ಎಂ.ಪಿ. ರವೀಂದ್ರ ಅವರು ಜಾತ್ಯತೀತ ತತ್ವದಡಿಯಲ್ಲಿ ಹರಪನಹಳ್ಳಿ ಮರೆಯಲಾರದಂತಹ 371ಜೆ ಕಲಂ ಸೌಲಭ್ಯ ದೊರಕಿಸಿದ್ದಾರೆ. ಅವರ ಕೊಡುಗೆ ಮುಂದಿನ ಪೀಳಿಗೆ ಗುರಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಡಾ| ಮಹಾಂತೇಶ್ ಚರಂತಿಮs್ ಅವರು ಮಧ್ಯ ಕರ್ನಾಟಕದ ಬಹುತೇಕ ಹಳ್ಳಿಯಲ್ಲಿ ಅರೋಗ್ಯ ಮೇಳ ಮಾಡಿದ್ದಾರೆ. ಹರಪನಹಳ್ಳಿ ಹಿಂದುಳಿದ ತಾಲೂಕು ಆಗಿದ್ದು, ಇಂತಹ ಆರೋಗ್ಯ ಮೇಳಗಳು ಬಡವರ ಪಾಲಿಗೆ ಸಂಜೀವಿನಿಯಾಗಿವೆ. ಉಚಿತ ಆರೋಗ್ಯ ತಪಾಸಣೆ ಜತೆಗೆ ಅರೋಗ್ಯ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಪ್ರಕಾಶ್ ಸಮಾಜಮುಖೀ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್, ಆರೋಗ್ಯ, ಕೃಷಿ ಸೇರಿದಂತೆ ಸಮಾಜಕ್ಕೆ ಬೇಕಾಗುವ ಎಲ್ಲ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದೇವೆ. ಫೆ. 8ರಂದು ಹಡಗಲಿಯಲ್ಲಿ ಎಂ.ಪಿ.ಪ್ರಕಾಶ್ ಅವರ ಪುಣ್ಯಸ್ಮರಣೆ ಅಂಗವಾಗಿ ನುಡಿ ನಮನ ಮತ್ತು ಗೀತಾ ನಮನ ಹಮ್ಮಿಕೊಳ್ಳಲಾಗಿದೆ. ಸಿದ್ಧಗಂಗಾಮಠದ ಪೀಠಾಧಿಪತಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ, ಜಾರ್ಜ್ ಫರ್ನಾಂಡಿಸ್, ಎಂ.ಪಿ. ಪ್ರಕಾಶ್ ಅವರನ್ನು ಸ್ಮರಿಸಲಾಗುವುದು. ಅದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ತಥಾಗತ್ ಮೆಡಿಕಲ್ ಟ್ರಸ್ಟ್ ಅಧ್ಯಕ್ಷ ಡಾ| ಮಹಾಂತೇಶ್ ಚರಂತಿಮs್ ಮಾತನಾಡಿ, ರಾಜ್ಯದ ವಿವಿಧೆಡೆ ಆರೋಗ್ಯ ಮೇಳ ನಡೆಸಲಾಗಿದೆ. ಅಧುನಿಕ ತಂತ್ರಜ್ಞಾನವುಳ್ಳ ಉಪಕರಣ ತರಿಸಲಾಗಿದೆ. ಜನರು ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬಿಪಿಎಲ್, ಅಯುಷ್ಮಾನ್ ಕಾರ್ಡ ಹೊಂದಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಲಾಗುವುದು. ಎಂದು ತಿಳಿಸಿದರು.
ಅಗಲಿದ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಕೇಂದ್ರ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್, ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಎಡಿಬಿ ಕಾಲೇಜ್ ಅಧ್ಯಕ್ಷ ಮೋಹನ ರೆಡ್ಡಿ, ಮುಖಂಡ ಹಲಗೇರಿ ಮಂಜಪ್ಪ ಮಾತನಾಡಿದರು. ಎಂ.ಪಿ. ಸುಮಾ ವಿಜಯ್, ವೈದ್ಯರಾದ ಡಾ| ಅನಂತಶೆಟ್ಟಿ ಪೆಂಡಕೊರ, ಡಾ| ಕೆ.ಎಂ.ಎನ್. ಖಾನ್, ಡಾ| ಮಂಜುನಾಥ, ಡಾ| ಶ್ರೀನಿವಾಸ್ ವೇಲು, ತಾಲೂಕು ವೈದ್ಯಾಧಿಕಾರಿ ರೇಣುಕಾನಂದ ಮೆಣಸಿನಕಾಯಿ, ಪುರಸಭೆ ಸದಸ್ಯೆ ಕವಿತಾ ವಾಗೀಶ್, ನೀಲ್ ಅರಾಂಸ್ಟ್ರಾಂಗ್ ಫಾದರ್, ಡಾ| ಭಾಷಾ ಮುಜಾವರ್, ಸಿದ್ದಲಿಂಗನಗೌಡ, ಎಸ್.ಎಸ್.ಎಂ. ಚೇತನ್, ಎಎಸ್‌ಐ ಸದ್ಯೋಜಾತಪ್ಪ, ಕೋಟ್ರಸ್ವಾಮಿ, ಪಿ. ಶಿವಕುಮಾರನಾಯ್ಕ, ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.