ಅಂತೂ ಇಂತೂ ಬಸ್ ನಿಲ್ದಾಣ ರೆಡಿ
ಶೀಘ್ರದಲ್ಲಿ ನೂತನ ನಿಲ್ದಾಣ ಲೋಕಾರ್ಪಣೆ,2018ರಲ್ಲಿ ಪ್ರಾರಂಭಗೊಂಡಿದ್ದ ಕಾಮಗಾರಿ
Team Udayavani, Jan 6, 2021, 4:58 PM IST
ಸಿರಗುಪ್ಪ: ನಗರದ ಹೃದಯಭಾಗದಲ್ಲಿ ಮೂರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಬಸ್ ನಿಲ್ದಾಣದಕಾಮಗಾರಿ ಅಂತೂ ಇಂತೂ ಮುಗಿಯುತ್ತಾ ಬಂದಿದ್ದು ಇನ್ನೊಂದು ತಿಂಗಳೊಳಗೆ ಬಸ್‌ನಿಲ್ದಾಣ ಸಾರ್ವಜನಿಕರ ಸೇವೆಗೆ ಸಿಗಲಿದೆ.
ರೂ. 2.50 ಕೋಟಿ ವೆಚ್ಚದಲ್ಲಿ ಕೇಂದ್ರ ಬಸ್‌ನಿಲ್ದಾಣದ ಕಾಮಗಾರಿಗೆ ಅಂದಿನ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಮಾ. 13, 2018ರಂದು ಭೂಮಿಪೂಜೆನೆರವೇರಿಸಿದ್ದರು. ಆದರೆ ನಿಲ್ದಾಣದ ಕಾಮಗಾರಿ ಕೆಲಸಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದರಿಂದ ಮೂರುವರ್ಷಕ್ಕೆ ಮುಗಿಯುವ ಹಂತ ತಲುಪಿದೆ.ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಶಾಸಕ ಬಿ.ಎಂ. ನಾಗರಾಜ ಶಥಪ್ರಯತ್ನ ಮಾಡಿ ಸರ್ಕಾರದ ಮಟ್ಟದಲ್ಲಅಧಿಕಾರಿಗಳೊಂದಿಗೆ ಚರ್ಚಿಸಿ ರೂ. 2.50 ಕೋಟಿ ವೆಚ್ಚದಲ್ಲಿ ಬಸ್‌ನಿಲ್ದಾಣ ಯೋಜನೆ ಕಾಮಗಾರಿಗೆ ಅನುಮೋದನೆ ಕೊಡಿಸಿ ನಿರ್ಮಾಣ ಕಾಮಗಾರಿಗೆ ಅಂದಿನ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಹೆಚ್. ಎಂ.ರೇವಣ್ಣರನ್ನು ಕರೆಸಿ ಭೂಮಿಪೂಜೆ ನೆರವೇರಿಸಿ 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದರು.
ಭೂಮಿಪೂಜೆ ನಂತರ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನಿರ್ಮಾಣಕಾಮಗಾರಿ ತಡವಾಗಿ ಪ್ರಾರಂಭವಾಯಿತು. ನೂತನಶಾಸಕರಾಗಿ ಆಯ್ಕೆಯಾದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಬಸ್‌ನಿಲ್ದಾಣದ ಕಾಮಗಾರಿಯನ್ನುತ್ವರಿತವಾಗಿ ಮುಗಿಸಿಕೊಡಬೇಕೆಂದು ಗುತ್ತಿಗೆದಾರರಿಗೆತಾಕೀತು ಮಾಡಿದರು. ಆದರೂ ಮೊದಲ ಹಂತದಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಸರ್ಕಾರದಿಂದ ಸಕಾಲಕ್ಕೆ ಬಿಲ್ ಪಾವತಿಯಾಗದ ಕಾರಣ ಬಸ್‌ನಿಲ್ದಾಣದ ಕಾಮಗಾರಿಯು ಕೆಲವು ತಿಂಗಳು ಸ್ಥಗಿತಗೊಂಡಿತ್ತು.
ಬಸ್‌ನಿಲ್ದಾಣದ ಕಾಮಗಾರಿ ತ್ವರಿತವಾಗಿ ಮುಗಿಯದೇ ಇರುವುದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆಯಲ್ಲಿಯೇ ನಿಂತು ಬಸ್ ಹತ್ತಬೇಕಾಗಿದ್ದರಿಂದ ಬಸ್‌ನಿಲ್ದಾಣದ ಸಮೀಪ ನಿರಂತರವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವುದನ್ನು ಗಮನಿಸಿದ ಶಾಸಕರು ಶೀಘ್ರವಾಗಿ ಕಾಮಗಾರಿಯನ್ನುಮುಗಿಸಬೇಕೆಂದು ತಾಕೀತು ಮಾಡಿದ್ದರೂ ಮೂರುವರ್ಷ ಕಾಲಾವ ಧಿಯಲ್ಲಿ ನಿಲ್ದಾಣದ ಕಾಮಗಾರಿ ಮುಗಿದಿದ್ದು ಉದ್ಘಾಟನೆಗೆ ಸಿದ್ಧವಾಗುತ್ತಿದೆ.
ಬಸ್‌ನಿಲ್ದಾಣದ ಕಾಮಗಾರಿ ಮುಗಿಯುತ್ತಿದ್ದರೂ ಅಧಿಕಾರಿಗಳು ನಿಲ್ದಾಣವನ್ನು ಲೋಕಾರ್ಪಣೆ ಮಾಡಲುಇನ್ನೂ ತಡಮಾಡುತ್ತಿರುವುದು ಸರಿಯಾದಕ್ರಮವಲ್ಲ. ಶೀಘ್ರವಾಗಿ ಬಸ್‌ನಿಲ್ದಾಣ ಲೋಕಾರ್ಪಣೆ ಮಾಡಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. – ಪ್ರಯಾಣಿಕರು
ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇದ್ದು, ವಿಭಾಗೀಯ ಅಧಿಕಾರಿಗಳು ಬಂದುತಪಾಸಣೆ ನಡೆಸಿದ ನಂತರ ಬಸ್‌ನಿಲ್ದಾಣ ಲೋಕಾರ್ಪಣೆ ಮಾಡಲು ನಮ್ಮ ಇಲಾಖೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. – ವಸಂತ್, ಎಇಇ, ಕೆಎಸ್‌ಆರ್‌ಟಿಸಿ ಕಾಮಗಾರಿ ವಿಭಾಗ
-ಆರ್. ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.