ಯಲ್ಲಮ್ಮ ದೇವಿ ಜಾತ್ರೆ: ರಾರಾವಿಯಲ್ಲಿ ಎತ್ತು ಗಳ ಪರಿಷೆ
ವಾರಗಳ ಕಾಲ ನಡೆಯುವ ಹಬ್ಬ ಅತ್ಯುತ್ತಮ ಜೋಡೆತ್ತುಗಳಿಗೆ ಬಹುಮಾನ
Team Udayavani, Feb 15, 2020, 12:46 PM IST
ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಅಧಿದೇವತೆ ಮುತ್ತಿನ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಾರಾವಿ ಗ್ರಾಮದಲ್ಲಿ ಎತ್ತುಗಳ ಪರಿಷೆ ನಡೆಯಿತು. ಈ ಪರಿಷೆಗೆ ವರ್ಷದಿಂದ ವರ್ಷಕ್ಕೆ ಎತ್ತುಗಳ ಸಂಖ್ಯೆ ಹೆಚ್ಚಾಗಿದೆ. ಈ ವರ್ಷ ಸುಮಾರು 100 ರಿಂದ 120 ಜೋಡಿ ಎತ್ತುಗಳು ಪರಿಷೆಗೆ ಬಂದಿದ್ದವು.
ಫೆ. 10ರಂದು ಪ್ರಾರಂಭಗೊಂಡಿದ್ದು ಒಂದು ವಾರಗಳ ಕಾಲ ನಡೆಯುವ ಈ ಪರಿಷೆಯಲ್ಲಿ ಸಿಂಧನೂರು, ರಾಯಚೂರು, ಗಂಗಾವತಿ, ಬಳ್ಳಾರಿ, ಸಿರುಗುಪ್ಪ, ಸೀಮಾಂಧ್ರ ಪ್ರದೇಶದ ಕರ್ನೂಲು, ಪತ್ತಿಕೊಂಡ, ಆಲೂರು, ಆದೋನಿ, ಹೊಳಗುಂದ, ಕೋಸ್ಗಿ, ಹರಿವಾಣಂ, ಕೌತಾಳಂ ಮತ್ತು ತಾಲೂಕಿನ ರಾರಾವಿ, ಬಾಗೇವಾಡಿ, ಅಗಸನೂರು ಮತ್ತು ಬಳ್ಳಾರಿ ತಾಲೂಕಿನ ಬಸರಕೋಡು, ಮೋಕಾ ಮುಂತಾದ ಹಳ್ಳಿಗಳ ಎತ್ತುಗಳು ಈ ಜಾತ್ರೆಗೆ ಬರುತ್ತವೆ. ಕಿಲಾರಿ, ಹಳ್ಳಿಕಾರ, ಜವಾರಿ ಹೋರಿಗಳು ಈ ಜಾತ್ರೆಗೆ ಬರುತ್ತವೆ.
ಕಿಲಾರಿ, ಹಳ್ಳಕಾರ, ಜವಾರಿ ಹೋರಿಗಳನ್ನು ಮಾರಾಟ ಮಾಡಲು ರಾಜ್ಯ ಸೇರಿದಂತೆ ಹೊರರಾಜ್ಯಗಳ ನೂರಾರು ರೈತರು ಮತ್ತು ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ. ಈ ಜಾತ್ರೆಯಲ್ಲಿ ರೂ. 40ಸಾವಿರದಿಂದ ಒಂದು ಲಕ್ಷ 80 ಸಾವಿರ ಮೌಲ್ಯದವರೆಗಿನ ಎತ್ತುಗಳು ಮಾರಾಟಕ್ಕೆ ಬಂದಿರುತ್ತವೆ. ಕೆಲವು ರೈತರು ಈ ಪರಿಷೆಯಲ್ಲಿಯೇ ತಮ್ಮ ಒಕ್ಕಲುತನಕ್ಕೆ ಬೇಕಾದ ಎತ್ತುಗಳನ್ನು ಕೊಳ್ಳುವುದು ಮತ್ತು ಮಾರಾಟ ಮಾಡುವುದು ಸಾಮಾನ್ಯವಾಗಿದೆ. ರೂ. 50ಲಕ್ಷದಿಂದ 1 ಕೋಟಿಯವರೆಗೆ ಈ ಪರಿಷೆಯಲ್ಲಿ ಎತ್ತುಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ವ್ಯವಹಾರ ನಡೆಯುತ್ತದೆ.
ಈ ಪರಿಷೆಗೆ ಬರುವ ಎತ್ತುಗಳಿಗೆ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆಯನ್ನು ದೇವಸ್ಥಾನ ಆಡಳಿತ ಮಂಡಳಿಯವರು ಮಾಡಿದ್ದು ಅತ್ಯುತ್ತಮ ಜೋಡೆತ್ತುಗಳಿಗೆ ಸಿರುಗುಪ್ಪ ಎಪಿಎಂಸಿ ಆಡಳಿತ ಮಂಡಳಿ ವತಿಯಿಂದ ಬಹುಮಾನ ನೀಡಲಾಗುತ್ತದೆ. ಆದರೆ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಎತ್ತುಗಳು ಬಿಸಿಲಿನ ತಾಪಕ್ಕೆ ಬಳಲಿದಂತೆ ಕಾಣುತ್ತವೆ. ಆದ್ದರಿಂದ ಬಿಸಿಲಿನಿಂದ ರಕ್ಷಿಸಲು ನೆರಳಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂಬುದು ಪರಿಷೆಗೆ ಬಂದ ರೈತರ ಅಭಿಪ್ರಾಯವಾಗಿದೆ. ರೈತರು ತಮ್ಮ ಎತ್ತುಗಳ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಪರಿಷೆಯಲ್ಲಿಯೇ ಖರೀದಿಸಿ ಎತ್ತುಗಳನ್ನು ಅಲಂಕರಿಸಿದ್ದು ಅಲ್ಲಲ್ಲಿ ಕಂಡುಬಂತು.
ಎತ್ತುಗಳ ಪರಿಷೆಯಲ್ಲಿ ರೈತರು ತಮಗೆ ಬೇಕಾದ ಎತ್ತುಗಳ ಸುಳಿ, ಕೊಂಬು, ಬಾಲ ಮುಂತಾದವುಗಳನ್ನು ಪರೀಕ್ಷಿಸಿ ಖರೀದಿ ಮಾಡುತ್ತಾರೆ. ಆದರೆ ಈ ಪರಿಷೆಯಲ್ಲಿ ದಲ್ಲಾಳಿಗಳ ಕಾಟ ಇರುವುದಿಲ್ಲ. ಕೊಳ್ಳುವವರು, ಮಾರುವವರು ನೇರವಾಗಿಯೇ ವ್ಯವಹರಿಸುತ್ತಿರುವುದರಿಂದ ರೈತರಿಗೆ ಅನುಕೂಲವಾಗಿದೆ. ರಾಮುಡು,
ಸೀಮಾಂಧ್ರ ಪ್ರದೇಶದ ಪತ್ತಿಕೊಂಡ ರೈತ
ದೇವಸ್ಥಾನ ಸಮಿತಿ ವತಿಯಿಂದ ಎತ್ತುಗಳ ಪರಿಷೆಗೆ ಬರುವ ರೈತರಿಗೆ ಉಚಿತ ಊಟ ಮತ್ತು ಎತ್ತುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಲಾಗಿದೆ.
ಸೋಮಪ್ಪನಾಯಕ,
ದೇವಸ್ಥಾನ ಸಮಿತಿ ಸದಸ್ಯ
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.