Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ
Team Udayavani, Jul 2, 2024, 12:30 PM IST
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಸಮೀಪವಿರುವ ಐತಿಹಾಸಿಕ ಬೂದಿದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ ಎಚ್ ವಿಶ್ವನಾಥ, ಮಾತನಾಡಿ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಬೂದಿ ದಿಬ್ಬ ಗುಡ್ಡವು ಐತಿಹಾಸಿಕ ಮಹತ್ವವನ್ನು ಹೊಂದಿದ ಗುಡ್ಡವಾಗಿದ್ದು, ಕ್ರಿಸ್ತಶಕ ಪೂರ್ವದಲ್ಲಿ ಈ ಗುಡ್ಡ ನಿರ್ಮಾಣವಾಗಿದ್ದು, ಬಳ್ಳಾರಿ ಜಿಲ್ಲೆಯ ೨ ಕಡೆ ಮಾತ್ರ ಇಂತಹ ಮಹತ್ವದ ಗುಡ್ಡಗಳಿರುತ್ತವೆ, ಬಳ್ಳಾರಿಯ ಕುಡಿತಿನಿ ಮತ್ತು ತೋರಣಗಲ್ಲು ನಡುವೆ ಬರುವ ಗುಡ್ಡದ ಭಾಗದಲ್ಲಿ ದೊಡ್ಡದಾದ ಬೂದಿ ದಿಬ್ಬದ ಗುಡ್ಡವು ಇರುತ್ತದೆ. ಅಲ್ಲಿ ಬಿಟ್ಟರೆ ತೆಕ್ಕಲಕೋಟೆಯಲ್ಲಿ ಮಾತ್ರ ಬೂದಿ ದಿಬ್ಬ ಗುಡ್ಡವನ್ನು ನೋಡಲು ಸಾಧ್ಯವಿದೆ.
ಇಲ್ಲಿನ ಕೆಲವು ಸಂಶೋಧಾನಾರ್ಥಿ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಬೂದಿ ದಿಬ್ಬದ ಗುಡ್ಡಕ್ಕೆ ರಕ್ಷಣಾ ಬೇಲಿಯನ್ನು ಅಳವಡಿಸುವಂತೆ ಅನೇಕಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಕಮಲಾಪುರದ ಪ್ರಾಚ್ಯವಸ್ತು ಇಲಾಖೆಯ ಮುಖ್ಯಾಧಿಕಾರಿ ನಿಹೀಲ್‌ದಾಸ್ ಕೂಡ ಇಲ್ಲಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ಇದಕ್ಕೆ ರಕ್ಷಣಾ ಬೇಲಿಯನ್ನು ಅಳವಡಿಸಿ ನಂತರ ನಮ್ಮ ಇಲಾಖೆಗೆ ಪಟ್ಟಣ ಪಂಚಾಯಿತಿ ಯಿಂದ ಪತ್ರವನ್ನು ಇಲಾಖೆಗೆ ಬರೆದು ಕಳುಹಿಸಿದರೆ ಈ ಸ್ಥಳವನ್ನು ಪ್ರಾಚ್ಯವಸ್ತು ಇಲಾಖೆಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದ್ದಾರೆ. ಇದರಿಂದಾಗಿ ಇಲ್ಲಿಗೆ ಬೇಟಿನೀಡಿ ಪರಿಶೀಲನೆ ಮಾಡಲಾಗಿದೆ.
ಈ ಗುಡ್ಡದ ಸ್ಥಳದ ಸರ್ವೆನಂಬರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಬೇಕೆಂದು ಕಂದಾಯ ಅಧಿಕಾರಿ ಸುರೇಶ್‌ಬಾಬುಗೆ ಸೂಚಿಸಿದ ತಹಶೀಲ್ದಾರರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ ನಂತರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದೆಂದು ಹೇಳಿದರು.
ಮುಖ್ಯಾಧಿಕಾರಿ ಪರಶುರಾಮ, ಕಿರಿಯ ಅಭಿಯಂತರರು ಸುನಂದ, ಸದಸ್ಯರಾದ ಸಿದ್ದೇಶ, ನಸುರಿದ್ದೀನ್, ಖಾದರ್‌ಬಾಷ, ಮುಖಂಡರಾದ ನರೇಂದ್ರಸಿAಹ, ಹೆಚ್.ರಾಮು, ಸಂಶೋಧನ ವಿದ್ಯಾರ್ಥಿ ಕಾಡಸಿದ್ದ ಇದ್ದರು.
ಇದನ್ನೂ ಓದಿ: ಸರಕಾರಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ರಾಜಕೀಯ ಮಾತಾಡಿದರೆ ಹೇಗೆ?: ಕೃಷ್ಣಭೈರೇಗೌಡ ಅಸಮಾಧಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.