ವ್ಯಂಗ್ಯ ಚಿತ್ರದಲ್ಲಿ ಅಡಗಿದೆ ಕುಶಲತೆ: ಇಂದ್ರಮ್ಮ
Team Udayavani, Dec 1, 2018, 4:58 PM IST
ಹೊಸಪೇಟೆ: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿ ಯಿಂದ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಶುಕ್ರ ವಾರ ಏರ್ಪಡಿಸಿದ್ದ ವ್ಯಂಗ್ಯಚಿತ್ರ ಕಾರ್ಯಾಗಾರಕ್ಕೆ ಇಂದ್ರಮ್ಮ ಎಚ್.ವಿ. ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಲಲಿತಕಲಾ ಅಕಾಡೆಮಿಯಿಂದ ಕಿನ್ನಾಳ ಕಲೆ, ಡಿಜಿಟಲ್ ಕಾರ್ಯಾಗಾರ, ಇದೀಗ ಕನ್ನಡ ವಿವಿಯಲ್ಲಿ ವ್ಯಂಗ್ಯಚಿತ್ರ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇದರ ಲಾಭ ಪಡೆಯಬೇಕು ಎಂದರು.
ವಿಶ್ವವಿದ್ಯಾಲಯದ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕ ಡಾ| ಮಲ್ಲಿಕಾರ್ಜುನ ವಣೇನೂರ ಮಾತನಾಡಿ, ಚಿತ್ರಕಲೆಯು ಭಾಷೆಯನ್ನೂ ಮೀರಿದ ಅಭಿವ್ಯಕ್ತಿಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ವಿ.ಆರ್. ಮಾತನಾಡಿ, ಈ ಮೊದಲು ವ್ಯಂಗ್ಯಚಿತ್ರವನ್ನು ಕಲಿಕೆಗೆ ಯಾವುದೇ ಶಾಲೆಗಳು ಇರಲಿಲ್ಲ. ಆರ್.ಕೆ. ಲಕ್ಷ್ಮಣ್, ಮೂರ್ತಿ, ಎಫ್.ಟಿ. ಆಚಾರ್ ಸೇರಿದಂತೆ ಅನೇಕರು ಸ್ವತಂತ್ರವಾಗಿ ವ್ಯಂಗ್ಯ ಚಿತ್ರ ಕಲಿತಿದ್ದಾರೆ. 1977ರಲ್ಲಿ ವ್ಯಂಗ್ಯಚಿತ್ರ ಕಲಾವಿದರ ಸಕ್ಷಿಂಘ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ದೃಶ್ಯಕಲಾ ವಿಭಾಗದ ಮುಖ್ಯಸ್ಥರು ಹಾಗೂ ಲಲಿತಕಲಾ ನಿಕಾಯದ ಡೀನ್ ಡಾ| ಅಶೋಕಕುಮಾರ ರಂಜೇರೆ ಮಾತ ನಾಡಿ, ಅಭಿವ್ಯಕ್ತಿ ಮಾಧ್ಯಮಗಳಲ್ಲಿ ವ್ಯಂಗ್ಯಚಿತ್ರಕಲೆಯು ಒಂದಾಗಿದೆ. ದೀರ್ಘವಾದ ಲೇಖನ ಅಥವಾ ಇಡೀ ಒಂದು ಪುಸ್ತಕದ ಆಶಯಗಳನ್ನು ಒಂದೇ ಒಂದು ವ್ಯಂಗ್ಯಚಿತ್ರದ ಮೂಲಕ ಕಲಾವಿದರು ಕಟ್ಟಿಕೊಡುತ್ತಾರೆ ಎಂದರು.
ಕುಲಸಚಿವ ಡಾ| ಮಂಜುನಾಥ ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯವು ಆರಂಭದಿಂದಲೂ ಚಿತ್ರಕಲೆ, ಶಿಲ್ಪಕಲೆಗೆ ಪ್ರೋತ್ಸಹ ನೀಡುತ್ತಾ ಬಂದಿದೆ. ಈಗ ವಿದ್ಯಾರ್ಥಿಗಳಿಗಾಗಿ ವ್ಯಂಗ್ಯಚಿತ್ರ ಕಾರ್ಯಾಗಾರ ಹಮ್ಮಿಕೊಂಡಿದೆ. ಸಮಕಾಲೀನ ಜಗತ್ತಿಗೆ ವ್ಯಂಗ್ಯಚಿತ್ರ ಕಲಾವಿದರ ಕೊಡುಗೆ ಅಪಾರವಾಗಿದೆ. ಕಾಲಗತಿಯಲ್ಲಿ ನಡೆದ ಘಟನೆಗಳನ್ನು ವ್ಯಂಗ್ಯಚಿತ್ರದ ಮೂಲಕ ಅಭಿವ್ಯಕ್ತಿಸುವುದುಬಹಳ ದೊಡ್ಡ ಕಲಾಮಾಧ್ಯಮವಾಗಿದೆ. ವ್ಯಂಗ್ಯ ಚಿತ್ರ ಕಲಾವಿದರು ಸಮಾಜ ವಿಜ್ಞಾನಿಗಳು, ಮನಃಶಾಸ್ತ್ರ ವಿಜ್ಞಾನಿಗಳು, ಹೃದಯವಂತ ಮನಸ್ಸಿನ ವ್ಯಕ್ತಿಗಳು ಆಗಿರುತ್ತಾರೆ ಎಂದರು. ಏಕಕಾಲದಲ್ಲಿ ಸಾರ್ವತ್ರಿಕ ಪ್ರಚಲಿತ ಸಂಗತಿಗಳನ್ನು ಹಾಗೂ ಭೂತಕಾಲದ ಸಂಗತಿಗಳನ್ನು ವ್ಯಂಗ್ಯಚಿತ್ರ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಹೇಳಬಹುದು. ಗೆರೆಗಳ ಮೂಲಕ ವ್ಯಂಗ್ಯಚಿತ್ರಗಳು ಅನೇಕ ಅರ್ಥಗಳನ್ನು ಹೇಳುತ್ತವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಗುಜಾರಪ್ಪ ಬಿ.ಜಿ., ಬಾಬು ಜತ್ತಕರ್, ನಾಗನಾಥ್ ಜಿ.ಎಸ್. ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿನಿ ಶರಣಮ್ಮ ಪ್ರಾರ್ಥಿಸಿದರು. ದೃಶ್ಯಕಲಾ ವಿಭಾಗದ ವಿದ್ಯಾರ್ಥಿನಿ ನಯನಾ ನಿರೂಪಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ| ಶಿವಾನಂದ ಬಂಟನೂರ ಸ್ವಾಗತಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ| ಮೋಹನರಾವ್ ಬಿ. ಪಂಚಾಳ ವಂದಿಸಿದರು. ಡಾ| ಡಿ. ಪಾಂಡುರಂಗಬಾಬು, ಡಾ| ಪಿ. ಮಹಾದೇವಯ್ಯ, ಡಾ| ಸಾಂಬಮೂರ್ತಿ, ಡಾ| ಶಿವಾನಂದ ವಿರಕ್ತಮಠ, ಡಾ| ಡಿ. ಮೀನಾಕ್ಷಿ, ಡಾ| ಎ ವೆಂಕಟೇಶ, ಕೆ.ಕೆ. ಮಕಾಳಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.