ಕಾಲ ಬಂದಾಗ ಎಲ್ಲವುದಕ್ಕೂ ಉತ್ತರ ಕೊಡುತ್ತೇನೆ; ರೆಡ್ಡಿ ಹೊಸಪಕ್ಷಕ್ಕೆ ರಾಮುಲು ಪ್ರತಿಕ್ರಿಯೆ
Team Udayavani, Dec 25, 2022, 4:00 PM IST
ಬಳ್ಳಾರಿ: “ನಾನು ಪಕ್ಷದ ಶಿಸ್ತಿನ ಸಿಪಾಯಿ. ಕಾಲ ಬಂದಾಗ ಎಲ್ಲವುದಕ್ಕೂ ಉತ್ತರ ಕೊಡುತ್ತೇನೆ”. ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟುವುದಾಗಿ ಘೋಷಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಸಚಿವ ಶ್ರೀರಾಮುಲು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಜನಾರ್ದನ ರೆಡ್ಡಿ ಬುದ್ಧಿವಂತರು. ಎಲ್ಲವನ್ನೂ ತಿಳಿದವರು. ಅನುಭವವಿದ್ದ ವ್ಯಕ್ತಿ. ನನ್ನ ಪ್ರಾಣ ಸ್ನೇಹಿತನಾಗಿ ಜನಾರ್ದನ ರೆಡ್ಡಿ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದರು. ಜನಾರ್ದನ ರೆಡ್ಡಿಗೂ ಕೂಡ ಪಕ್ಷವು ಶಕ್ತಿಯಾಗಿ ನಿಂತಿತ್ತು. ಅವರು ವೈಯಕ್ತಿಕವಾಗಿ ಪಕ್ಷ ಮಾಡಿದ್ದಾರೆ. ಬಿಜೆಪಿ ಪಕ್ಷ ಅವರನ್ನು ಯಾವತ್ತು ಬಿಟ್ಟು ಕೊಟ್ಟಿಲ್ಲ. ಅವರು ಪಕ್ಷವನ್ನು ಯಾವತ್ತು ಬಿಟ್ಟು ಕೊಟ್ಟಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ನಾನು. ಕಾಲ ಬಂದಾಗ ಎಲ್ಲವುದಕ್ಕೂ ಉತ್ತರ ಕೊಡುತ್ತೇನೆ ಎಂದರು.
ಅವರೊಬ್ಬ ಅನುಭವ ಕಾಜಕಾರಣಿ, ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈವರೆಗೆ ರೆಡ್ಡಿಯವರ ಜೊತೆಗೆ ಬಂಡೆಯಾಗಿ ನಿಂತಿದ್ದೆ ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದೇನೆ. ಈ ಸಂದರ್ಭದಲ್ಲಿ ಸಿದ್ಧಾಂತ ಬೇರೆ ಇದ್ದಾಗ ಹೇಗೆ ಮನವೊಲಿಸುವುದಕ್ಕೆ ಆಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಮನವೊಲಿಸುವ ಕೆಲಸ ಮುಗಿದಿದೆ ಎಂದರು.
ಇದನ್ನೂ ಓದಿ:ಬಿಜೆಪಿ ಜತೆಗಿನ ಸಂಬಂಧ ಮುಗಿಯಿತು, ಮುಂದಿನ ಚುನಾವಣೆಯಲ್ಲೇ ಸ್ಪರ್ಧೆ ಮಾಡ್ತೇನೆ: ಗುಡುಗಿದ ರೆಡ್ಡಿ
ಹೊಸ ಪಕ್ಷ ಒಳೆಯದು, ಕೆಟ್ಟದು ಎಂಬ ವಿಶ್ಲೇಷಣೆ ಮಾಡುವುದಿಲ್ಲ. ಈ ಬಗ್ಗೆ ಚರ್ಚೆ ಮಾಡಲು ನನಗೆ ಇಷ್ಟವಿಲ್ಲ. ಜನಾರ್ದನ ರೆಡ್ಡಿ ಒಳ್ಳೆಯದನ್ನೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿರುತ್ತಾರೆ ಎಂದರು.
ಕಾರ್ಯಕರ್ತರು ಇಬ್ಭಾಗವಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮುಲು, ಕಾರ್ಯಕರ್ತರು ನಮ್ಮ ಜೊತೆಯಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಆಗುವುದಿಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಪಕ್ಷ, ಪಕ್ಷಕ್ಕೆ ಹಿನ್ನಲೆ ಮತ್ತು ಸಿದ್ಧಾಂತ ಇದೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ. ರಾಜಕಾರಣ ಮತ್ತು ಸ್ನೇಹ ಬೇರೆ ಬೇರೆ. ಸ್ನೇಹಿತರಾಗಿ ನಾವು ಮುಂದುವರೆಯತ್ತೇವೆ. ರೆಡ್ಡಿಯವರೊಂದಿಗೆ ನಮ್ಮ ಎಲ್ಲಾ ನಾಯಕರು, ಎಲ್ಲಾ ಸಂದರ್ಭದಲ್ಲಿ ನಿಂತಿದ್ದರು. ಆದರೆ ಅವರೀಗ ಬೇರೆ ಪಕ್ಷ ಮಾಡಿದ್ದಾರೆ ಈ ಬಗ್ಗೆ ಹೆಚ್ಚೇನು ಹೇಳಲಾಗದು ಎಂದು ಶ್ರೀರಾಮುಲು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Government: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ನಿಗದಿ: ವಿಜಯೇಂದ್ರ
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್ಸಿಪಿ ವರಿಷ್ಠ ಶರದ್
Somy Ali: ಸುಶಾಂತ್ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.