ಎಸ್ಸೆಸ್ಸೆಲ್ಸಿ: ಜಿಲ್ಲೆಯ ಮೂವರಿಗೆ 625 ಅಂಕ
ಸರ್ಕಾರಿ ವಸತಿ ಶಾಲೆಗಳ ನಾಲ್ವರು ವಿದ್ಯಾರ್ಥಿಗಳ ಸಾಧನೆ
Team Udayavani, May 20, 2022, 3:55 PM IST
ಬಳ್ಳಾರಿ: ಕೋವಿಡ್ ಬಳಿಕ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾಗಿದ್ದು, ಗಣಿನಾಡು ಅವಿಭಜಿತ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಡಗಲಿ ತಾಲೂಕುಗಳ ಮೂವರು ವಿದ್ಯಾರ್ಥಿನಿಯರು 625ಕ್ಕೆ ಶೇ.100 ರಷ್ಟು ಅಂಕಗಳನ್ನು ಪಡೆದು ರಾಜ್ಯಮಟ್ಟದ ಟಾಪರ್ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವಳಿ ಜಿಲ್ಲೆಗಳಿಗೂ ಪ್ರಸಕ್ತ ಸಾಲಿನಲ್ಲಿ ಎ ಗ್ರೇಡ್ ಸ್ಥಾನ ಲಭಿಸಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಕೂಡ್ಲಿಗಿ ತಾಲೂಕು ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಿ.ಎಸ್. ಕವನ, ಎಸ್.ಪಿ. ವಿದ್ಯಾಶ್ರೀ, ಹಡಗಲಿಯ ಮರಿಸ್ವಾಮಿ ಮಠದ ಪಾಟೀಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಬಿ.ಅಮೃತ 625ಕ್ಕೆ ಶೇ.100ರಷ್ಟು ಅಂಕಗಳನ್ನು ಪಡೆದು, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಹೊಸಪೇಟೆ ತಾಲೂಕು ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತರುಣ್ ಕುಮಾರ್, ಹಡಗಲಿ ತಾಲೂಕು ವರಕನಹಳ್ಳಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಕೌಟಿ ಅಮೃತ 625ಕ್ಕೆ ಶೇ.9984, ಸಂಡೂರು ತಾಲೂಕು ವಡ್ಡಿನಕಟ್ಟಿ ಕಿತ್ತೂರು ರಾಣಿ ವಸತಿ ಶಾಲೆಯ ಜಿ.ಪಿ.ದೀಪಿಕಾ, ಹಡಗಲಿ ತಾಲೂಕು ಮಿರಾಕೊರನಹಳ್ಳಿ ಮೊರಾರ್ಜಿ ವಸತಿ ಶಾಲೆಯ ಎಲ್.ಆರ್.ಆಕಾಶ್ 625ಕ್ಕೆ ಶೇ.9.68 ಅಂಕಗಳನ್ನು ಪಡೆಯುವ ಮೂಲಕ ನಾಲ್ವರು ವಿದ್ಯಾರ್ಥಿಗಳು ಕ್ರಮವಾಗಿ ರಾಜ್ಯಮಟ್ಟದಲ್ಲಿ ದ್ವಿತೀಯ, ತೃತೀಯ ಸ್ಥಾನಗಳಲ್ಲಿ ಗುರುತಿಸಿಕೊಂಡು ಅವಳಿ ಜಿಲ್ಲೆಗಳ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.
ಅವಳಿ ಜಿಲ್ಲೆಗೆ ಎ ಗ್ರೇಡ್
ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಾಲಕರು 22251, ಬಾಲಕಿಯರು 21001 ಸೇರಿ ಒಟ್ಟು 43252 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 17958 ಬಾಲಕರು, 18285 ಬಾಲಕಿಯರು ಸೇರಿ ಒಟ್ಟು 36243 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.83.79 ರಷ್ಟು ಫಲಿತಾಂಶ ಲಭಿಸಿದೆ. ಈ ಹಿಂದೆ ಕೇವಲ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ರಾಜ್ಯಮಟ್ಟದಲ್ಲಿ ಜಿಲ್ಲೆಗಳಿಗೆ ರ್‍ಯಾಂಕ್‌ಗಳನ್ನು ನೀಡಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಈ ಪದ್ಧತಿಯನ್ನು ಬದಲಾವಣೆ ಮಾಡಿದ್ದು, ಪರೀಕ್ಷೆಗೆ ಹೆಸರು ನೋಂದಾಯಿಸಿದ ಸಂಖ್ಯೆ, ಉತ್ತೀರ್ಣ, ಅನುತ್ತೀರ್ಣ, ಅದರಲ್ಲೂ ಪ್ರಥಮ ಸ್ಥಾನ, ದ್ವಿತೀಯ, ತೃತೀಯ ಸ್ಥಾನ ಪಡೆದವರ ಸಂಖ್ಯೆಗಳ ಶೇಕಡಾವಾರು ಫಲಿತಾಂಶವನ್ನು ಆಧರಿಸಿ ಬಳ್ಳಾರಿ/ ವಿಜಯನಗರ ಜಿಲ್ಲೆಗೆ ‘ಎ’ಗ್ರೇಡ್ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ
ಅವಳಿ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದ 13536 ಗ್ರಾಮೀಣ ಭಾಗದ ಬಾಲಕರಲ್ಲಿ 11053 ತೇರ್ಗಡೆಯಾಗಿದ್ದು, ಶೇ. 81.66 ರಷ್ಟು ಫಲಿತಾಂಶ ಪಡೆದಿದ್ದಾರೆ. ಅದೇ ರೀತಿ 12049 ರಲ್ಲಿ 10496 ವಿದ್ಯಾರ್ಥಿನಿಯರು ಶೇ.87.11 ರಷ್ಟು ತೇರ್ಗಡೆಯಾಗಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ 8715ರಲ್ಲಿ 6905 ವಿದ್ಯಾರ್ಥಿಗಳು ಶೇ.79.23, 8952ರಲ್ಲಿ 7789 ವಿದ್ಯಾರ್ಥಿನಿಯರು ಶೇ.87.01 ರಷ್ಟು ತೇರ್ಗಡೆಯಾಗಿದ್ದು, ಒಟ್ಟಾರೆ ಶೇ.83.17 ರಷ್ಟು ನಗರ, ಶೇ.84.23 ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಖಾಸಗಿ ಶಾಲೆಗಳು ಮೇಲುಗೈ
ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.91.27 ರಷ್ಟು ಪಡೆದ ಖಾಸಗಿ ಶಾಲೆಗಳೇ ಮೇಲುಗೈ ಸಾಧಿಸಿವೆ. ಈ ಪೈಕಿ ಸರ್ಕಾರಿ ಶಾಲೆಗಳಿಂದ ಪರೀಕ್ಷೆ ಬರೆದ 23563ರಲ್ಲಿ 18825 ವಿದ್ಯಾರ್ಥಿಗಳು ಶೇ.79.89, ಅನುದಾನಿತ ಶಾಲೆಗಳಿಂದ 8092ರಲ್ಲಿ 6833 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.84.44 ರಷ್ಟು, ಖಾಸಗಿ ಶಾಲೆಗಳಿಂದ 11597ರಲ್ಲಿ 10585 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.91.27 ರಷ್ಟು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮೇಲುಗೈ ಸಾಧಿಸಿವೆ. ಒಟ್ಟಾರೆಯಾಗಿ ಅವಳಿ ಜಿಲ್ಲೆಗಳು ಶೇ.83.79 ರಷ್ಟು ಫಲಿತಾಂಶ ಗಳಿಸಿವೆ ಎಂದು ಶಿಕ್ಷಣ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.
ಕೂಡ್ಲಿಗಿ ಪ್ರಥಮ
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.91.38 ರಷ್ಟು ಫಲಿತಾಂಶ ಪಡೆದಿರುವ ಕೂಡ್ಲಿಗಿ ತಾಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನಗಳಿಸಿದ್ದು, ಕೇವಲ ಶೇ.74.75 ರಷ್ಟು ಫಲಿತಾಂಶ ಗಳಿಸಿದ ಸಿರುಗುಪ್ಪ ತಾಲೂಕು ಕೊನೆ ಸ್ಥಾನಗಳಿಸಿದೆ. ಇನ್ನು ಬಳ್ಳಾರಿ ಪಶ್ಚಿಮ ವಲಯ ಶೇ.88.23 ರಷ್ಟು ಫಲಿತಾಂಶ ಪಡೆದು ದ್ವಿತೀಯ ಸ್ಥಾನಗಳಿಸಿದರೆ, ಹರಪನಹಳ್ಳಿ ಶೇ.87.16, ಸಂಡೂರು ಶೇ.85.73, ಹೂವಿನಹಡಗಲಿ ಶೇ.85.44, ಹಗರಿಬೊಮ್ಮನಹಳ್ಳಿ ಶೇ.85.33, ಬಳ್ಳಾರಿ ಪೂರ್ವ ಶೇ.82.76, ಹೊಸಪೇಟೆ ಶೇ.76.88 ರಷ್ಟು ಫಲಿತಾಂಶ ಪಡೆದ ತಾಲೂಕುಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.
-ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.