16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ


Team Udayavani, Oct 25, 2021, 2:53 PM IST

16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ

ಬಳ್ಳಾರಿ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಕಾಂ ವಿದ್ಯಾರ್ಥಿಗಳಪರಿಸ್ಥಿತಿ. ವಿವಿ ಮತ್ತು ಪದವಿ ಕಾಲೇಜುಗಳ ನಡುವಿನ ಗೊಂದಲಕ್ಕೆ 16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶ ಪ್ರಕಟಿಸದೆ ತಡೆಹಿಡಿಯಲಾಗಿದ್ದು ವಿವಿಯು ವಿದ್ಯಾರ್ಥಿಗಳು ಮತ್ತವರ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಇಲ್ಲಿನ ವಿಜಯನಗರಶ್ರೀಕೃಷ್ಣದೇವರಾಯ ವಿವಿಯು ಕಳೆದ ಅ. 22ರಂದು ಪದವಿ ಅಂತಿಮ ವರ್ಷದ ಫಲಿತಾಂಶವನ್ನು ಆನ್‌ ಲೈನ್‌ನಲ್ಲಿ ಪ್ರಕಟಿಸಿದೆ. ಆದರೆ, ಬಳ್ಳಾರಿ ನಗರದ ಶ್ರೀಗುರುತಿಪ್ಪೆರುದ್ರ ಪದವಿ ಕಾಲೇಜು, ನಂದಿ, ಪಿಆರ್‌ಕೆ, ಸಿರುಗುಪ್ಪತಾಲೂಕಿನ ವಾಲ್ಮೀಕಿ ಮಹರ್ಷಿ, ಹನುಮಂತಮ್ಮ,ಜ್ಞಾನಭಾರತಿ ಪದವಿ ಕಾಲೇಜುಗಳು, ಹಡಗಲಿಯಜಿಬಿಆರ್‌ ಪದವಿ ಕಾಲೇಜು, ಕೊಪ್ಪಳದ ಶಾರದಾಂಬಪದವಿ ಕಾಲೇಜು ಸೇರಿ ಒಟ್ಟು 16 ಪದವಿ ಕಾಲೇಜುಗಳ ಬಿ.ಕಾಂ ಅಂತಿಮ ವರ್ಷದ ಫಲಿತಾಂಶವನ್ನು ಪ್ರಕಟಿಸದೆ ತಡೆಹಿಡಿಯಲಾಗಿದೆ.

ಮೌಲ್ಯಮಾಪನ ಕಾರ್ಯಕ್ಕೆ ಕಾಲೇಜುಗಳಿಂದ ನಿಗದಿತ ಉಪನ್ಯಾಸಕರು ಬಂದಿಲ್ಲ ಎಂಬುದು ಮೌಲ್ಯಮಾಪನಾಕುಲಸಚಿವರು ಕಾರಣ ನೀಡಿದರೆ, ವಿವಿಯಿಂದ ಎಲ್ಲಕಾಲೇಜುಗಳಿಗೆ ಆದೇಶವೇ ಬಂದಿಲ್ಲ. ಕೆಲವರುಅನಿವಾರ್ಯ ಕಾರಣಗಳಿಂದ ಗೈರಾಗಿದ್ದಾರೆ. ಈ ಕುರಿತುದಾಖಲೆಗಳನ್ನು ಸಹ ವಿವಿಗೆ ಸಲ್ಲಿಸಲಾಗಿದೆ ಎಂದು ಕಾಲೇಜೊಂದರ ಪ್ರಾಚಾರ್ಯರು ಹೇಳುತ್ತಿದ್ದು, ಈಇಬ್ಬರು ನಡುವಿನ ಗೊಂದಲದಿಂದಾಗಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ.

ಮೌಲ್ಯಮಾಪನಕ್ಕೆ ಬರಲ್ಲ: ಫಲಿತಾಂಶ ತಡೆಹಿಡಿರುವ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನಕ್ಕೆಸಮರ್ಪಕವಾಗಿ ಬಂದಿಲ್ಲ. ಈ ಎಲ್ಲ ಕಾಲೇಜುಗಳಪ್ರಾಚಾರ್ಯರಿಗೆ ಮೌಲ್ಯಮಾಪನಕ್ಕೆ ಇಂತಿಷ್ಟು ಉಪನ್ಯಾಸಕರನ್ನು ನಿಯೋಜಿಸುವಂತೆ ಆದೇಶಹೊರಡಿಸಲಾಗಿದ್ದು, ಒಟ್ಟು 190ಕ್ಕೂ ಹೆಚ್ಚು ಉಪನ್ಯಾಸಕರುಮೌಲ್ಯಮಾಪನಾ ಕಾರ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ಕೇವಲ 35-45 ಉಪನ್ಯಾಸಕರು ಮಾತ್ರ ಬಂದಿದ್ದಾರೆ.

ಒತ್ತಡ ಹೇರಿದಲ್ಲಿ ಕೊನೆಗೆ 90ಕ್ಕೂ ಹೆಚ್ಚು ಜನರುಬಂದಿದ್ದಾರೆ. ಈ ಕುರಿತು ಸಂಬಂಧಪಟ್ಟ ಕಾಲೇಜುಗಳ ಪ್ರಾಚಾರ್ಯರನ್ನು ಕೇಳಿದರೆ ನಾವು ನಿಯೋಜಿಸಿದ್ದೇವೆ. ಉಪನ್ಯಾಸಕರು ಬರದಿದ್ದರೆ ನಾವೇನು ಮಾಡೋದು ಎಂಬ ಅಸಡ್ಡೆಯ ಮಾತುಗಳನ್ನಾಡುತ್ತಿದ್ದಾರೆ.

ಉಪನ್ಯಾಸಕ ವೃತ್ತಿಯಲ್ಲಿ ಮೌಲ್ಯಮಾಪನವೂ ಪವಿತ್ರ ಕಾರ್ಯ. ಅಂತಹದ್ರಲ್ಲಿ ಮೌಲ್ಯಮಾಪನ ಮಾಡಲು ಏಕೆ ಇವರು ಅಸಡ್ಡೆ ತೋರುತ್ತಾರೆ. ಹಿಂದಿನ ವರ್ಷವೂ ಹೀಗೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮೌಲ್ಯಮಾಪನಾ ಕಾರ್ಯ 10 ದಿನಗಳ ಕಾಲ ತಡವಾಗಿ ಆರಂಭಿಸಬೇಕಾಯಿತು. ಪ್ರತಿವರ್ಷ ಹೀಗೆ ಆದರೆ ಈಸಮಸ್ಯೆ ಬಗೆಹರಿಯುವುದು ಹೇಗೆ? ಆದ್ದರಿಂದ ಕೆಲಕಾಲೇಜುಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆಎಂದು ವಿವಿ ಮೌಲ್ಯಮಾಪನಾ ಕುಲಸಚಿವ ಶಶಿಕಾಂತ್‌ ಉಡಿಕೇರಿ ಕಾಲೇಜುಗಳ ಪ್ರಾಚಾರ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಿವಿಯಿಂದ ಆದೇಶ ಬಂದಿಲ್ಲ: ಫಲಿತಾಂಶ ಪ್ರಕಟಗೊಳ್ಳದ ಕಾಲೇಜೊಂದರ ಪ್ರಾಚಾರ್ಯರುಹೇಳ್ಳೋದೆ ಬೇರೆ. ವಿವಿಯಿಂದ ಕೆಲ ಕಾಲೇಜುಗಳಿಗೆಆದೇಶನೇ ಹೊರಡಿಸಿಲ್ಲ. ಇನ್ನು ಕೆಲ ಕಾಲೇಜುಗಳಲ್ಲಿಇರುವ ಉಪನ್ಯಾಸಕರನ್ನು ನಿಯೋಜಿಸಲಾಗಿದ್ದು,ಅತಿಥಿ ಉಪನ್ಯಾಸಕರಂಥವರು ಸರ್ಕಾರಿ ಉದ್ಯೋಗಕ್ಕೆ ನೇಮಕವಾಗಿದ್ದರಿಂದ ಹೋಗಿಲ್ಲ. ಬಳ್ಳಾರಿ ಶ್ರೀಗುರುತಿಪ್ಪೇರುದ್ರ ಕಾಲೇಜಿನಿಂದ 21 ಜನ ಉಪನ್ಯಾಸಕರನ್ನು ನಿಯೋಜಿಸುವಂತೆ ವಿವಿ ಆದೇಶ ಹೊರಡಿಸಿತ್ತು.

ಈ ಪೈಕಿ 17 ಜನ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗಿದ್ದಾರೆ. ಇನ್ನು ನಾಲ್ವರಲ್ಲಿ ಒಬ್ಬರು ಲಾಕ್‌ ಡೌನ್‌ ಪರಿಣಾಮ ಕೆಲಸ ಬಿಟ್ಟು ಸ್ವಯಂ ಉದ್ಯೋಗ

ಮಾಡಿಕೊಳ್ಳುತ್ತಿದ್ದರೆ ಒಬ್ಬರು ಮೆಟರ್ನಿಟಿ ರಜೆಗೆ ತೆರಳಿದ್ದಾರೆ. ಇನ್ನಿಬ್ಬರು ಅನಿವಾರ್ಯ ಕಾರಣಗಳಿಂದ ಹೋಗಿಲ್ಲ. ಈ ಕುರಿತು ದಾಖಲೆ ಸಮೇತ ವಿವಿಕುಲಪತಿಗಳ ಗಮನಕ್ಕೆ ತಂದಿದ್ದೇನೆ. ಅವರು ನಿಮ್ಮದೆಲ್ಲಸರಿಯಿದೆ ಎಂದಿದ್ದಾರೆ. ಮೇಲಾಗಿ ಸಿಂಡಿಕೇಟ್‌ ಸದಸ್ಯರ ಗಮನಕ್ಕೂ ತಂದಿದ್ದರೂ ಕುಲಸಚಿವರು ಕ್ಯಾರೆ ಎನ್ನುತ್ತಿಲ್ಲ.

ಫಲಿತಾಂಶ ಪ್ರಕಟವಾಗದಿದ್ದರೆ ವಿದ್ಯಾರ್ಥಿಗಳೂ ಆತಂಕಕ್ಕೊಳಗಾಗಲಿದ್ದು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೋ ಇಲ್ಲವೋ ಎಂಬ ಅನುಮಾನ ಪೋಷಕರನ್ನು ಕಾಡಲಿದೆ. ಹಾಗಾಗಿ ಫಲಿತಾಂಶತಡೆಹಿಡಿಯುವುದು ಸರಿಯಲ್ಲ. ವಿದ್ಯಾರ್ಥಿಗಳ ಮೇಲೆಪರಿಣಾಮ ಬೀರಬಾರದು ಎಂದು ಎಸ್‌ಜಿಟಿ ಕಾಲೇಜು ಪ್ರಾಚಾರ್ಯ ಎಸ್‌.ಎನ್‌.ರುದ್ರಪ್ಪ ವಿವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಫಲಿತಾಂಶ ತಡೆಹಿಡಿದಿರುವ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ಬರದೇ ಅಸಡ್ಡೆ ತೋರುತ್ತಿದ್ದಾರೆ. ಎಲ್ಲ ಕಾಲೇಜುಗಳಿಂದ 190ಕ್ಕೂ ಹೆಚ್ಚುಉಪನ್ಯಾಸಕರನ್ನು ನಿಯೋಜಿಸಿದರೆ ಕೇವಲ35-45 ಜನರು ಬಂದಿದ್ದಾರೆ. ಉಪನ್ಯಾಸಕರೇಬರದಿದ್ದರೆ ಮೌಲ್ಯಮಾಪನ ಕಾರ್ಯಕ್ಕೆ ತೊಂದರೆಯಾಗಲಿದೆ. ಕಳೆದ ವರ್ಷವೂ ಹೀಗೆಅಸಡ್ಡೆ ತೋರಿದ್ದರು. ಆಗಲೂ 10 ದಿನ ತಡವಾಗಿ ಮೌಲ್ಯಮಾಪನ ಕಾರ್ಯ ಆರಂಭವಾಯಿತು. ಈ ಬಾರಿಯೂ ಅದೇ ಮುಂದುವರೆದಿದ್ದಕ್ಕೆ ಕೆಲಕಾಲೇಜುಗಳ ಫಲಿತಾಂಶ ತಡೆಹಿಡಿಯಲಾಗಿದೆ.ಶಶಿಕಾಂತ್‌ ಉಡಿಕೇರಿ, ಮೌಲ್ಯಮಾಪನಾ ಕುಲಸಚಿವರು, ವಿಎಸ್‌ಕೆ ವಿವಿ, ಬಳ್ಳಾರಿ.

ವಿಎಸ್‌ಕೆ ವಿವಿ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ 16 ಕಾಲೇಜುಗಳಫಲಿತಾಂಶಗಳನ್ನು ತಡೆಹಿಡಿಯಲಾಗಿದೆ. ಕೆಲ ಕಾಲೇಜುಗಳಲ್ಲಿ ಕೆಲವರು ಅನಿವಾರ್ಯಕಾರಣಗಳಿಂದ ಮೌಲ್ಯಮಾಪನ ಕಾರ್ಯಕ್ಕೆಹಾಜರಾಗಿಲ್ಲ. ಇನ್ನು ಕೆಲ ಕಾಲೇಜುಗಳಿಗೆಆದೇಶವನ್ನೇ ಹೊರಡಿಸಿಲ್ಲ. ಈ ಕುರಿತು ಸೂಕ್ತದಾಖಲೆಗಳನ್ನು ಸಲ್ಲಿಸಿದ್ದರೂ ಫಲಿತಾಂಶವನ್ನು ಪ್ರಕಟಿಸಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದ್ದು, ಮಕ್ಕಳು ಪರೀಕ್ಷೆಬರೆದಿದ್ದಾರೋ ಇಲ್ಲವೋ ಎಂಬ ಅನುಮಾನಪೋಷಕರನ್ನು ಕಾಡಲಿದೆ. –ಎಸ್‌.ಎನ್‌. ರುದ್ರಪ್ಪ, ಪ್ರಾಚಾರ್ಯರು, ಶ್ರೀಗುರು ತಿಪ್ಪೇರುದ್ರ ಕಾಲೇಜು, ಬಳ್ಳಾರಿ.

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

Ballary-Suside

Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.