ತಾಂಡಾ ಕಂದಾಯ ಗ್ರಾಮವಾಗಿಸಲು ಕ್ರಮ


Team Udayavani, Nov 6, 2021, 1:54 PM IST

ತಾಂಡಾ ಕಂದಾಯ ಗ್ರಾಮವಾಗಿಸಲು ಕ್ರಮ

ಸಂಡೂರು: ಬಂಜಾರ ಸಮಾಜ ಸೌಲಭ್ಯಗಳ ವಂಚಿತ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವಂಥ ಸಮಾಜವಾಗಿದ್ದು, ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಸಂಡೂರು ತಾಲೂಕು ಕರ್ನಾಟಕ ಬಂಜಾರ ರಕ್ಷಣಾವೇದಿಕೆ ಕಾರ್ಯನಿರ್ವಹಿಸಲಿ ಎಂದು ಶಾಸಕ ಈ. ತುಕರಾಂ ತಿಳಿಸಿದರು.

ಅವರು ಪಟ್ಟಣದ ವಾಲ್ಮೀಕಿ ಸಮುದಾಯಭವನದಲ್ಲಿ ಕರ್ನಾಟಕ ಬಂಜಾರ ರಕ್ಷಣಾವೇದಿಕೆ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ, ಒಂದು ಕಡೆ ಸೇವಾಲಾಲ್‌, ಮತ್ತೂಂದು ಕಡೆ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದು ಅರ್ಥಪೂರ್ಣವಾದುದು. ಒಬ್ಬರು ವರ ಕೊಟ್ಟರೆ ಮತ್ತೂಬ್ಬರು ಸಂವಿಧಾನದ ಮೂಲಕ ಹಕ್ಕುಗಳನ್ನು ಕೊಟ್ಟಿದ್ದಾರೆ. ಇಂದು ಭೀಮನಾಯ್ಕ, ಪರಮೇಶ್ವರನಾಯ್ಕ, ನಾನು ಶಾಸಕರಾಗಿದ್ದೇವೆ ಅಂದರೆ ಸಂವಿಧಾನ ನೀಡಿದ ಮೀಸಲಾತಿಯಿಂದ, ಆದ್ದರಿಂದ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಕಡ್ಡಾಯವಾಗಿ ಶಿಕ್ಷಣ ಪಡೆಯಿರಿ. ಅದಕ್ಕೆ ಬೇಕಾದ ಎಲ್ಲ ರೀತಿ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧನಿದ್ದೇನೆ, ಈಗಾಗಲೇ ನಿಮ್ಮ ಕಚೇರಿಗೆ ಬೇಕಾದ ಕಂಪ್ಯೂಟರ್‌ ವ್ಯವಸ್ಥೆಯನ್ನು ನೀಡಿ ಈ ಗ್ರಂಥಾಲಯದ ಮೂಲಕ ಉತ್ತಮ ತರಬೇತಿಗಳನ್ನು ಪಡೆದು ಉನ್ನತ ಹುದ್ದೆಗಳಿಗೆ ಹೋಗಲು ಸಾಧ್ಯವಾಗುತ್ತದೆ ಎಂದರು.

ರಾಜ್ಯಾಧ್ಯಕ್ಷ ಕೆ.ಡಿ.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ತಾಲೂಕು ಘಟಕವನ್ನು ಪ್ರಾರಂಭಿಸುವ ಮೂಲಕ ಪ್ರತಿಯೊಂದು ತಾಂಡಾದಿಂದಲೂ ಸಹ ಪ್ರಗತಿಯನ್ನು ಸಾಧಿಸಬೇಕು. ಉತ್ತಮ ಪ್ರಜೆಗಳಾಗಬೇಕು, ಇನ್ನೂ ಸಹ ನಮ್ಮ ಜನತೆ ಕಟ್ಟಿಗೆ ಮಾರಿ ಬದುಕನ್ನು ಸಾಗಿಸುತ್ತಿದ್ದಾರೆ. ಅದೂ ಕಷ್ಟವಾಗಿದೆ. ಆದ್ದರಿಂದ ಶಿಕ್ಷಣ ಪಡೆದು ಮುಂದೆ ಬರಬೇಕೆಂದರು.

ಶಿವಪ್ರಕಾಶ್‌ ಮಹಾರಾಜ್‌ ಸ್ವಾಮಿ ಕೊಟ್ಟೂರು ಹಾಗೂ ಚಿತ್ರದುರ್ಗದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಗೌರವಾಧ್ಯಕ್ಷರಾಗಿ ಲೋಕೇಶನಾಯ್ಕ, ಅಧ್ಯಕ್ಷರಾಗಿ ರಾಮುನಾಯ್ಕ, ಎಫ್‌. ಎಚ್‌., ಉಪಾಧ್ಯಕ್ಷರಾಗಿ ನಾಗುನಾಯ್ಕ, ರವಿನಾಯ್ಕ, ಕಾರ್ಯಾಧ್ಯಕ್ಷರಾಗಿ ಎಫ್‌.ಕೆ. ವಸಂತನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್‌ ಕುಮಾರ್‌ ಅರ್‌.ಟಿ., ಖಜಾಂಚಿಯಾಗಿ ಅಶೋಕ್‌ಕುಮಾರ್‌ ನಾಯ್ಕ. ಡಿ., ಕಾನೂನು ಸಲಹೆಗಾರರಾಗಿ ರಾಮಾ ನಾಯ್ಕ ಸಿ., ಪದಾಧಿ ಕಾರಿಗಳಾಗಿ ಬಿ. ರಾಮಾನಾಯ್ಕ, ಭೀಮನಾಯ್ಕ, ಸಿ. ಸುನೀಲ್‌ ನಾಯ್ಕ, ಪಾರುಬಾಯಿ, ಸಂತೋಷ್‌ ನಾಯ್ಕ, ಎಚ್‌.ಎಸ್‌ .ಬಾಲರಾಜ್‌ ನಾಯ್ಕ, ಯುವಘಟಕದ ಅಧ್ಯಕ್ಷರಾಗಿ ಡಿ. ಅಶೋಕ ನಾಯ್ಕ, ಕುಬೇರ್‌ನಾಯ್ಕ ಅವರುಗಳನ್ನು ಆಯ್ಕೆಮಾಡಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ರುದ್ರಾಕ್ಷಿ ಬಾಯಿ ಪುಟ್ಟನಾಯ್ಕ ನೃತ್ಯ ಪ್ರದರ್ಶಿಸಿದರು. ರಾಜ್ಯ ಉಪಾಧ್ಯಕ್ಷ ರಾಮುನಾಯ್ಕ ಮಾತನಾಡಿದರು. ಆರ್‌.ವೆಂಕಟೇಶ್‌ ನಾಯ್ಕ ರಾಜ್ಯ ಗೌರವಾಧ್ಯಕ್ಷರು, ಎನ್‌. ಆರ್‌. ರಮೇಶ್‌ ಜಿಲ್ಲಾ ಗೌರವಾಧ್ಯಕ್ಷರು, ರವಿನಾಯ್ಕ ಜಿಲ್ಲಾಧ್ಯಕ್ಷರು, ಉಮೇಶ್‌ ನಾಯ್ಕ ವಕೀಲರು, ಕಾರ್ತಿಕನಾಯ್ಕ ಮಾತನಾಡಿದರು. ಅನಿಲ್‌ನಾಯ್ಕ, ನಾಲ್ಕು ತಾಂಡಾಗಳ ಎಲ್ಲ ಕಾರಬಾರಿ, ಡಾವ್‌ ಪೂಜಾರಿಗಳು ಇದ್ದರು.

ಟಾಪ್ ನ್ಯೂಸ್

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Paddy 2

Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.