ರೈತರ ಬದುಕು ಬದಲಿಸಿದ ತಾಳೆ!

ತೋಟಗಾರಿಕೆ ಇಲಾಖೆಯಿಂದ ಉತ್ತೇಜನ

Team Udayavani, Apr 28, 2022, 4:21 PM IST

thale

ಸಿರುಗುಪ್ಪ: ತಾಲೂಕಿನಲ್ಲಿ ತಾಳೆ ಬೆಳೆಯನ್ನು ಬೆಳೆದ ರೈತರಿಗೆ ನಿಶ್ಚಿತ ಉತ್ತಮ ಆದಾಯ ದೊರೆತಿದ್ದು ಈ ಬೆಳೆಯನ್ನು ಬೆಳೆಯಲು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಸಕ್ತಿ ತೋರಿಸುತ್ತಿದ್ದು, ತೋಟಗಾರಿಕೆ ಇಲಾಖೆಯು ತಾಳೆ ಬೆಳೆ ಬೆಳೆಯುವ ರೈತರಿಗೆ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಸುಮಾರು 120 ಹೆಕ್ಟೇರ್‌ನಲ್ಲಿ 50 ಜನ ರೈತರು ತಾಳೆ ಬೆಳೆಯನ್ನು ಬೆಳೆದಿದ್ದಾರೆ.

ತಾಲೂಕಿನ ಹಳೇಕೋಟೆ, ದೇಶನೂರು, ಬಲಕುಂದಿ, ಕರೂರು, ಉಪ್ಪಾರಹೊಸಳ್ಳಿ, ಹಚ್ಚೊಳ್ಳಿ ಗ್ರಾಮಗಳಲ್ಲಿ 120 ಹೆಕ್ಟೇರ್‌ಗಳಲ್ಲಿ ತಾಳೆ ಬೆಳೆಯನ್ನು ರೈತರು ಬೆಳೆದಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಕೇವಲ 50 ಹೆಕ್ಟೇರ್‌ನಲ್ಲಿ ಮಾತ್ರ ತಾಳೆ ಬೆಳೆಯನ್ನು ಬೆಳೆಯಲಾಗಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ತಾಳೆ ಬೆಳೆಯಿಂದ ರೈತರಿಗೆ ನಿಶ್ಚಿತ ಆದಾಯ ದೊರೆಯುತ್ತಿದ್ದು, ದೇಶದಲ್ಲಿ ತಾಳೆ ಬೆಳೆಯ ಹಣ್ಣುಗಳಿಂದ ಪಾಮ್‌ ಆಯಿಲ್‌ ತಯಾರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಡುಗೆ ಎಣ್ಣೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಪಾಮ್‌ ಆಯಿಲ್‌ ಎಣ್ಣೆ ಬೆಲೆಯು ಹೆಚ್ಚಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ಒಂದು ಕೆಜಿ ಪಾಮ್‌ ಆಯಿಲ್‌ಗೆ ರೂ. 110 ರಿಂದ 120 ಬೆಲೆ ಇತ್ತು. ಆದರೆ ಈಗ ರೂ. 160ರಿಂದ 170ರ ವರೆಗೆ ಮಾರಾಟವಾಗುತ್ತಿದ್ದು, ಈ ಕಾರಣದಿಂದ ಸರ್ಕಾರವು ತಾಳೆ ಹಣ್ಣಿನ ಖರೀದಿ ದರವನ್ನು ಹೆಚ್ಚಳ ಮಾಡಿದ್ದು, ಕಳೆದ ವರ್ಷ ಒಂದು ಟನ್‌ ತಾಳೆ ಹಣ್ಣಿಗೆ ರೂ. 9000-12000 ಇತ್ತು. ಆದರೆ ಈ ವರ್ಷ ರೂ. 13,000ರಿಂದ 15,000ಗಳಿಗೆ ಹೆಚ್ಚಳವಾಗಿದ್ದು, ಬೇರೆ ಯಾವುದೇ ಬೆಳೆಗಳಿಗೆ ಹೋಲಿಸಿದರೆ ತಾಳೆಬೆಳೆಗೆ ನಿಶ್ಚಿತ ಆದಾಯ ಖಚಿತವಾಗಿರುತ್ತದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ತಾಳೆ ಬೆಳೆಯಿಂದ ಸುಮಾರು 400ಟನ್‌ ತಾಳೆಹಣ್ಣು ಉತ್ಪಾದನೆಯಾಗಿದೆ.

ಖರ್ಚು ಕಡಿಮೆ, ಹೆಚ್ಚಿನ ಆದಾಯ ಬರುವ ತಾಳೆ ಬೆಳೆಯನ್ನು ಬೆಳೆದರೆ ನಿಶ್ಚಿತ ಆದಾಯ ದೊರೆಯುತ್ತದೆ. ನನ್ನ 6 ಎಕರೆ ಜಮೀನಿನಲ್ಲಿ ತಾಳೆ ಬೆಳೆ ಬೆಳೆದಿದ್ದು, ರೂ.8,80,013ಗಳ ಲಾಭವನ್ನು ಪಡೆದಿದ್ದೇನೆ. ರೈತರು ತಾಳೆ ಬೆಳೆ ಬಗ್ಗೆ ಮಾಹಿತಿ ಪಡೆದು ತಾಳೆ ಬೆಳೆ ಬೆಳೆದರೆ ಉತ್ತಮ ಆದಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ದೇಶನೂರು ಗ್ರಾಮದ ತಾಳೆ ಬೆಳೆ ಬೆಳೆದ ರೈತ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಹೊಸಪೇಟೆ ಕಲ್ಪವೃಕ್ಷ ಆಯಿಲ್‌ ಫಾಮ್‌ ಪ್ರೈ.ಲಿ. ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ತಾಳೆ ಬೆಳೆಯುವ ರೈತರಿಗೆ ಕಲ್ಪವೃಕ್ಷ ಆಯಿಲ್‌ ಫಾಮ್‌ ಪ್ರೈ.ಲಿ., ಮೂರು ವರ್ಷ ಗೊಬ್ಬರವನ್ನು ನೀಡುತ್ತಾರೆ. ತೋಟಗಾರಿಕೆ ಇಲಾಖೆ ವತಿಯಿಂದ ತಾಳೆ ಬೆಳೆಗೆ ನೀರು ಹರಿಸಿಕೊಳ್ಳಲು ಹೊಸ ಬೋರ್‌ವೆಲ್‌ಗೆ ರೂ. 50 ಸಾವಿರ, ಕೃಷಿ ಹೊಂಡ ಇದ್ದರೆ ನೀರೆತ್ತಲು ಸಹಾಯಧನವನ್ನು ನೀಡಲಾಗುವುದು.

ತಾಳೆ ಬೆಳೆ ಅಧಿಕಾರಿಯು ರೈತರ ಜಮೀನಿಗೆ ಭೇಟಿ ನೀಡಿ ತಾಳೆ ಹಣ್ಣು ಪರಿಶೀಲನೆ ಮಾಡಿದ ನಂತರ ರೈತರು ಕಟಾವು ಮಾಡುತ್ತಾರೆ. ಕಟಾವು ಮಾಡಿದ ಹಣ್ಣುಗಳನ್ನು ಕಂಪನಿಯವರು ತಮ್ಮ ವಾಹನದಲ್ಲಿಯೇ ತೆಗೆದುಕೊಂಡು ಹೋಗುತ್ತಾರೆ. ತಾಳೆ ಬೆಳೆಯ ಹಣ್ಣಿನ ಖರೀದಿಯ ಹಣವನ್ನು ಸರ್ಕಾರ ನಮ್ಮ ಇಲಾಖೆ ಮೂಲಕ ರೈತರಿಗೆ ನೀಡುತ್ತಿದೆ. -ವಿಶ್ವನಾಥ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ

-ಆರ್‌. ಬಸವರೆಡ್ಡಿ ಕರೂರು

 

ಟಾಪ್ ನ್ಯೂಸ್

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.