ಕರ್ನಾಟಕ-ಆಂಧ್ರ ಗಡಿ ಪತ್ತೆಗೆ ಮತ್ತೂಮ್ಮೆ ಸರ್ವೇ
Team Udayavani, Jul 27, 2018, 6:00 AM IST
ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಅಂತಾರಾಜ್ಯ ಗಡಿ ಗುರುತು ಪತ್ತೆಗಾಗಿ ಸರ್ವೇ ಆಫ್ ಇಂಡಿಯಾದಿಂದ ಮತ್ತೂಮ್ಮೆ ಸರ್ವೇ ಕಾರ್ಯ ನಡೆಯಲಿದೆ.
ಈಗಾಗಲೇ ಒಮ್ಮೆ ಸರ್ವೇ ನಡೆಸಿರು ಡೆಹರಾಡೂನ್‌ನ ಸರ್ವೇ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಇದೀಗ ಇನ್ನಷ್ಟು ಗಡಿ
ಗುರುತುಗಳನ್ನು ಪತ್ತೆಹಚ್ಚಲು ಮತ್ತೂಮ್ಮೆ ಸರ್ವೇ ನಡೆಸಲು ಬಳ್ಳಾರಿಗೆ ಆಗಮಿಸುವ ಸಾಧ್ಯತೆಯಿದೆ.
ಡೆಹರಾಡೂನ್‌ನಲ್ಲಿ ಈಚೆಗೆ ನಡೆದ ಸಭೆಯಲ್ಲಿ ಆಂಧ್ರ ಪ್ರದೇಶದ ಅಧಿಕಾರಿಗಳು ಕೆಲ ಪ್ರಮುಖ ಗಡಿಗುರುತುಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸರ್ವೇ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಮತ್ತೂಮ್ಮೆ ಸರ್ವೇ ನಡೆಸಲು ಸಮ್ಮತಿ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಗಣಿಗಾರಿಕೆ ನಡೆಸಿದ ಸಂದರ್ಭದಲ್ಲಿ ಗಡಿ ನಾಶ ಆಗಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ನೆರೆಯ ಆಂಧ್ರದ ಓಬುಳಾಪುರಂ ಗಣಿ ಕಂಪನಿ ಪ್ರದೇಶದಲ್ಲಿ ಕರ್ನಾಟಕ-ಆಂಧ್ರಕ್ಕೆ ಸಂಬಂಧಿಸಿದ ಅಂತಾರಾಜ್ಯ ಗಡಿನಾಶ ವಿವಾದ ದಶಕದಿಂದ ಇದೆ. ಈ ವಿವಾದವನ್ನು ಅಂತಾರಾಜ್ಯಗಳ ಟ್ರೈಜಂಕ್ಷನ್, ಬೈಜಂಕ್ಷನ್ ಅಥವಾ ಎರಡೂ ರಾಜ್ಯಗಳ ಗ್ರಾಮ ನಕ್ಷೆಗಳಿಂದ ಸರ್ವೇ ನಡೆಸಿ ಗಡಿಗುರುತುಗಳನ್ನು ಪತ್ತೆ ಹಚ್ಚುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ವೇ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು 2 ತಿಂಗಳ ಹಿಂದೆ, ಅಂತಾರಾಜ್ಯಗಳ ಅರಣ್ಯ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸರ್ವೇ ನಡೆಸಿದ್ದರು.
ಬಳ್ಳಾರಿ ರಕ್ಷಿತಾರಣ್ಯ ಪ್ರದೇಶ (ಮೀಸಲು ಅರಣ್ಯ) ವ್ಯಾಪ್ತಿಯಲ್ಲಿ ಬರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಡಿ.ಹಿರೇಹಾಳ್ ಮಂಡಲದ ಓಬಳಾಪುರಂ,ಮಲಪನಗುಡಿ, ಎಚ್.ಸಿದ್ದಾಪುರಂ ಗ್ರಾಮಗಳು ಮತ್ತು ಕರ್ನಾಟಕದಲ್ಲಿನ ಬಳ್ಳಾರಿ ಜಿಲ್ಲೆಯಲ್ಲಿನ 6
ಕಂದಾಯ ಗ್ರಾಮಗಳ ವ್ಯಾಪ್ತಿ ಪ್ರದೇಶದಲ್ಲಿ ಸರ್ವೇ ನಡೆಸಿದ್ದರು. ಆಯಾ ಗ್ರಾಮಗಳಲ್ಲಿ ಇದ್ದ ಸರ್ವೇ ಗುರುತುಗಳನ್ನು ಆಧರಿಸಿ ಗಡಿಯನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸಿದ್ದರು.
ಆದರೆ, ಗಡಿ ಭಾಗದಲ್ಲಿ ಗಣಿಗಾರಿಕೆ ನಡೆಸಿದ ಗಣಿ ಕಂಪನಿಗಳ ಮಾಲೀಕರು ಗಡಿಗುರುತುಗಳನ್ನು ಧ್ವಂಸ ಮಾಡಿದ್ದು, ಇದರಿಂದ ಅವುಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.
ಗಡಿ ಗುರುತಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಅಧಿಕಾರಿಗಳು ಜಿಪಿಎಸ್ ಮೂಲಕ ಸರ್ವೇ ನಡೆಸಲು ಮುಂದಾಗಿದ್ದರು. ನಂತರ ಕಳೆದ ಜೂನ್ 25, 26 ರಂದು ಡೆಹರಾಡೂನ್‌ನ ಸರ್ವೇ ಜನರಲ್ ಆಫ್ ಇಂಡಿಯಾದ ಮುಖ್ಯ ಕಚೇರಿಯಲ್ಲಿ ಕರ್ನಾಟಕ,
ಆಂಧ್ರ ಪ್ರದೇಶದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಸರ್ವೇ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು, ತಾವು ಪತ್ತೆ ಹಚ್ಚಿದ್ದ ಗಡಿ ಗುರುತುಗಳ ಬಗ್ಗೆ ಉಭಯ ರಾಜ್ಯಗಳ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದ್ದಾರೆ. ಈ ಮಾಹಿತಿಯನ್ನು ಸ್ವೀಕರಿಸಿದ ಸರ್ವೇ ಜನರಲ್ ಇಂಡಿಯಾದ ಅಧಿಕಾರಿಗಳು ಪುನಃ ಮತ್ತೂಮ್ಮೆ ಸಭೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳುವ ಬಗ್ಗೆ
ಚಿಂತಿಸುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.
– ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
CIDಗೆ ಹೆಬ್ಬಾಳ್ಕರ್ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?
Congress; ಪರಿಷತ್ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.