ಬೆಳೆಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಿ: ಮುದಗಲ್
Team Udayavani, Oct 7, 2020, 5:22 PM IST
ಬಳ್ಳಾರಿ: ಜಿಲ್ಲೆಯಲ್ಲಿ ಇತ್ತೀಚಿಗೆ ನಿರಂತರವಾಗಿ ಹಾಗೂ ಅಧಿಕವಾಗಿ ಸುರಿದ ಮಳೆಯಿಂದ ನೇರವಾಗಿ ಬೆಳೆಹಾನಿ ಸಂಭವಿಸಿರುವುದಲ್ಲದೇ ನಂತರದ ದಿನಗಳಲ್ಲಿ ಪರೋಕ್ಷವಾದ ಸಮಸ್ಯೆಗಳು ತಲೆದೋರುತ್ತಿರುವುದನ್ನುಮನಗಾಣಲಾಗಿದ್ದು, ಹೊಲಗಳಲ್ಲಿಮಳೆಯ ನೀರು ಹೋದಮೇಲೆ ಭತ್ತ ಮತ್ತು ಇತರೆ ಬೆಳೆಗಳು ಬಾಡಿದಂತೆ ಹಾಗೂ ಬಣ್ಣಗೆಟ್ಟು ಒಣಗಿರುವಂತಹ ಬೆಳೆಗಳ ನಿರ್ವಹಣೆಗೆ ರೈತರು ಕೆಲ ಪ್ರಮುಖ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಅವಿರತವಾಗಿ ದಿನಗಟ್ಟಲೆ ಮಳೆ ಸುರಿದಿರುವುದರಿಂದ ಹಾಗೂ ಹೊಲದಲ್ಲಿ ನೀರು ನಿರಂತರವಾಗಿ ನಿಂತಿರುವುದರಿಂದ ಮಣ್ಣು ದಮ್ಮಸ್ಸು ಮಾಡಿದಂತಾಗಿಮಣ್ಣಿನ ರಚನೆ ಹಾಳಾಗಿರುತ್ತದೆ. ಮಣ್ಣಿನಲ್ಲಿ ಗಾಳಿ ಸೇರದೆ, ಬೆಳೆಗಳ ಬೇರುಗಳಿಗೆ ದೊರಕಬೇಕಾದ ಆಮ್ಲಜನಕ ದೊರೆಯದೇ ಉಸಿರುಗಟ್ಟಿದಂತಹ ಪರಿಣಾಮ ಉಂಟಾಗುತ್ತದೆ. ಮೇಲ್ಮಣ್ಣಿನಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ಕರಗಿ ಹರಿಯುವ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುವುದರಿಂದ ಪೋಷಕಾಂಶಗಳ ತೀವ್ರ ಕೊರತೆಯಿಂದ ಬೆಳೆಗಳು ಬಳಲಿರುತ್ತವೆ.
ಜೊತೆಗೆ ಮಣ್ಣನ್ನು ಚೇತನಾಶೀಲವಾಗಿರುವಂತೆ ಮಾಡುವ ಹಾಗೂ ಬೆಳೆಗಳಿಗೆ ಪೋಷಕಾಂಶಗಳನ್ನು ದೊರೆಯುವಂತೆ ಮಾಡುವ ಅನೇಕ ಉಪಯೋಗಿ ಸೂಕ್ಷ್ಮಜೀವಿಗಳು ನಷ್ಟವಾಗಿ, ಮಣ್ಣು ಕೆಲ ಮಟ್ಟಿಗೆ ಬರಡಾದಂತಾಗುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ರೈತರು ಸಾಲು ಬೆಳೆಗಳಲ್ಲಿ ಎಡೆಕುಂಟೆ ಹಾಯಿಸಿ ಅಥವಾ ಕೈಯಿಂದ ಕಳೆ ತೆಗೆದು, ಬೆಳೆಯ ಬೇರುಗಳಿರುವ ಮಣ್ಣಿನ ವಲಯದಲ್ಲಿ ಗಾಳಿಯಾಡುವಂತಮಾಡಬೇಕು. ಯೂರಿಯಾದಂತಹ ಸಾರಜನಕಯುಕ್ತ ಗೊಬ್ಬರವನ್ನು ಮಣ್ಣಿನಲ್ಲಿಸೇರಿಸಿ ತೆಳ್ಳಗೆ ನೀರುಹಾಯಿಸಬೇಕು. ದ್ರವರೂಪದಲ್ಲಿರುವ 19:19:19 ಅಥವಾ ಇತರ ದ್ರವರೂಪದ ರಸಗೊಬ್ಬರಗಳನ್ನು ಅಥವಾ ಶೇ. 2ರಷ್ಟು ಯೂರಿಯಾ ಅಥವಾ ಡಿಎಪಿ ರಸಗೊಬ್ಬರವನ್ನು ಬೆಳೆ ಹಂತವನ್ನು ಅನುಸರಿಸಿ ಸಿಂಪಡಣೆ ಮಾಡುವುದರಿಂದ ಶೀಘ್ರ ಸುಧಾರಣೆಕಾಣಬಹುದು. ಲಘು ಪೋಷಕಾಂಶಗಳ ಮಿಶ್ರಣಗಳನ್ನು ಸಿಂಪಡಿಸಬೇಕು. ಮಳೆಸತತವಾಗಿ ಬರುತ್ತಿರುವುದರಿಂದ ಭತ್ತದ ಬೆಳೆಗೆ ಕಾಡಿಗೆ ರೋಗ ಬರುವ ಸಾಧ್ಯತೆ ಇದ್ದು, ಭತ್ತದ ಬೆಳೆ ಪೂರ್ವ ಹೂಬಿಡುವ ಹಂತದಲ್ಲಿದ್ದರೆ ಪ್ರತಿ ಲೀಟರ್ ನೀರಿಗೆ 0.4 ಗ್ರಾಂ ದರದಲ್ಲಿ ಟ್ರಿಫ್ಲಾಕ್ಸಿಸ್ಟ್ರೋಬಿನ್+ ಟೆಬುಕೋನೋಜೋಲ್ ನೊಂದಿಗೆ ಮುನ್ನೆಚ್ಚರಿಕೆ ಶೀಲೀಂದ್ರನಾಶಕ ಸಿಂಪಡಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.