ಟೆಂಟ್ ನಿವಾಸಿಗಳಿಗೆ ಬೇಕಿದೆ ಸ್ವಂತ ಸೂರು!
Team Udayavani, Jun 11, 2018, 2:31 PM IST
ಹಗರಿಬೊಮ್ಮನಹಳ್ಳಿ: ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿ ಕಳೆದ 20 ವರ್ಷಗಳಿಂದಲೂ ಬೀಡುಬಿಟ್ಟಿರುವ ದುರುಮುರುಗಿ,
ಸಿಂಧೋಳ ಸಮಾಜದ ಅಲೆಮಾರಿ ಕುಟುಂಬಗಳಿಗೆ ಸರ್ಕಾರದ ಕನಿಷ್ಠ ಸೌಲಭ್ಯ ಈವರೆಗೂ ಮರೀಚಿಕೆಯಾಗಿವೆ.
ಸುಮಾರು 35ಕ್ಕೂ ಹೆಚ್ಚಿರುವ ಟೆಂಟ್ ನಿವಾಸಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಈವರೆಗೂ ದೊರೆತಿಲ್ಲ. ಇದುವರೆಗೂ ದಕ್ಕಿರುವುದು ಒಂದೇ ಚುನಾವಣೆ ಗುರುತಿನ ಚೀಟಿ ಮಾತ್ರ. ಅಲೆಮಾರಿಗಳಿಗೆ ಈ ಹಿಂದೆ ಕೆಚ್ಚಿನಬಂಡಿ ಬಳಿ ನಿವೇಶನ ಒದಗಿಸುವ ಭರಸೆ ನೀಡಲಾಗಿತ್ತು. ಆದರೆ, ಸಿದ್ಧವಾದ ನಿವೇಶನಗಳು ವಾಸಕ್ಕೆ ಯೋಗ್ಯವಲ್ಲವೆಂದು ಅಂದಿನ ಜಿಲ್ಲಾಧಿಕಾರಿ ತಡೆಯೊಡ್ಡಿದ್ದ ಪರಿಣಾಮ ಪುನಃ ಅವರಿವರ ನಿವೇಶನವೇ ಇವರಿಗೆ ಗತಿಯಾಗಿವೆ.
ಈ ಹಿಂದಿನ ಗ್ರಾಪಂ ಮತ್ತು ಇಂದಿನ ಪುರಸಭೆಯೂ ವಸತಿ ಸೌಲಭ್ಯ ನೀಡುವಲ್ಲಿ ವಿಫಲವಾಗಿವೆ. ಪುರಸಭೆಯಿಂದ ನಿವೇಶನ ಸೃಷ್ಠಿಗೆ ಸಾಕಷ್ಟು ಅನುದಾನ ಲಭ್ಯವಿದ್ದರೂ ಜನಪ್ರತಿನಿಧಿಗಳ ಕಾಳಜಿ ಕೊರತೆ ಅಲೆಮಾರಿ ಸಮುದಾಯಕ್ಕೆ ಮುಳುವಾಗಿದೆ.
ಸೌಲಭ್ಯ ದಕ್ಕಿಲ್ಲ: ಪಟ್ಟಣದ ವಿವಿಧೆಡೆಗಳಲ್ಲಿ ಟೆಂಟ್ ಹಾಕಿಕೊಂಡೇ ಬದುಕು ಕಟ್ಟಿಕೊಂಡ ಸಮುದಾಯಕ್ಕೆ ಜನಪ್ರತಿನಿಧಿಗಳಿಂದ ಕನಿಷ್ಠ ಸೌಲಭ್ಯ ದಕ್ಕಿಲ್ಲ. ಆರಂಭದಲ್ಲಿ ಹಳೇವೂರಿನ ಬಸ್‌ನಿಲ್ದಾಣದ ಬಳಿ ಟೆಂಟ್ ಕಟ್ಟಿಕೊಂಡಿದ್ದರು. ಇಳಿಜಾರು ಪ್ರದೇಶದಲ್ಲಿನ ಟೆಂಟ್‌ಗಳಿದ್ದ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ನೀರು ಹೊರ ಚೆಲ್ಲುವುದಲ್ಲಿ ರಾತ್ರಿ ಜಾಗರಣೆ ಆಚರಿಸುತ್ತಿದ್ದರು. ನಂತರ ಅಂದಿನ ಗ್ರಾಮ ಪಂಚಾಯತ್ ಒತ್ತಡದಿಂದಾಗಿ ಟೆಂಟ್ ತೆರವುಗೊಳಿಸಿ, ಪಟ್ಟಣದ ಚಿತ್ರಮಂದಿರದ ಹಿಂಭಾಗದ ಖಾಲಿ ನಿವೇಶನದಲ್ಲಿ ಕೆಲ ವರ್ಷ ಬಿಡಾರ ಹೂಡಿದರು. ಮಾಲೀಕರು ಜಾಗ ತೆರವುಗೊಳಿಸುವಂತೆ ಸೂಚನೆ ನೀಡಿದಾಗ ಅನಿವಾರ್ಯವಾಗಿ ಕೊಟ್ಟೂರು ರಸ್ತೆಯ ನಿವೇಶನಕ್ಕೆ ಟೆಂಟ್‌ಗಳು ಸ್ಥಳಾಂತರಗೊಂಡವು. ಒಟ್ಟು 35ಕ್ಕೂ ಹೆಚ್ಚು ಕುಟುಂಬಗಳಿಗೆ ಏಕೈಕ ನಲ್ಲಿ ಮತ್ತು ಒಂದು ಬೀದಿದೀಪವೇ ಆಸರೆಯಾಗಿದೆ.
ಸ್ಥಳಾಂತರ ನಿರಂತರ: ಟೆಂಟ್ ವಾಸಿಗಳ ಸ್ಥಳಾಂತರ ನಿರಂತರವಾಗಿದ್ದ ಹಿನ್ನೆಲೆಯಲ್ಲಿ ಆರು ವರ್ಷದಿಂದಲೂ ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯಿಂದಲೂ ವಂಚಿತರಾಗಿದ್ದರು. ಲೋಕಸಭೆ ಚುನಾವಣೆ ವೇಳೆ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. ಟೆಂಟ್ ವಾಸಿಗಳ ಕೆಲ ಕುಟುಂಬಗಳು ಇಂದಿಗೂ ಭಿಕ್ಷಾಟನೆ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವರು ಜಿಪ್ ರಿಪೇರಿ, ಕೂದಲು ಸಂಗ್ರಹಣೆ, ಮಿಕ್ಸಿ ರಿಪೇರಿ, ಕೊಡೆ ಮಾರಾಟ ಮೂಲಕ ಕುಟುಂಬಗಳನ್ನು ನಿರ್ವಹಿಸುತ್ತಿದ್ದಾರೆ. ಸಮುದಾಯಗಳ 20ಕ್ಕೂ ಹೆಚ್ಚು ಮಕ್ಕಳು ಶಾಲೆ ಮುಖ ಕಂಡವರಲ್ಲ. ಒಬ್ಬ ಎಸ್ಸೆಸ್ಸೆಲ್ಸಿ ಫೇಲ್ ಆಗಿರುವುದೆ ಸಮುದಾಯದವರ ಪಾಲಿನ ಉನ್ನತ ಶಿಕ್ಷಣವಾಗಿದೆ.
ಮಕ್ಕಳಿಗಿಲ್ಲ ಶಾಲೆ ದರ್ಶನ: ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಟೆಂಟ್‌ವಾಸಿಗಳ ಮಕ್ಕಳದ್ದೆ ಸಿಂಹಪಾಲು. ಟೆಂಟ್‌ಶಾಲೆ ಆರಂಭಿಸುವ ನಿಯಮ ಶಿಕ್ಷಣ ಇಲಾಖೆಗೆ ಅನ್ವಯಿಸಿದಂತಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಉಪೇಕ್ಷಿತ ಸಮುದಾಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ. ಟೆಂಟ್ ವಾಸಿಗಳು ಕೊಳೆತು ನಾರುವ ನೀರಿನ ಗುಂಡಿಗಳ ಮಧ್ಯ ದಿನನಿತ್ಯನ ಜೀವನ ಸಾಗಿಸುತ್ತಿದ್ದಾರೆ.
ಸಿಂಧೋಳ ಸಮಾಜದವರಿಗೆ ಸಿಂಧೋಳ ಸರ್ಟಿಫಿಕೇಟ್ (ಪರಿಶಿಷ್ಟ ಜಾತಿ) ಕೊಡಿಸಲು ಈಗಾಗಲೇ ಸಮಾಜ
ಕಲ್ಯಾಣ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ. ಮೇಲ್ನೋಟಕ್ಕೆ ಸಿಂಧೋಳ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಯಾವುದೇ ತೊಂದರೆಯಿಲ್ಲ. ನಿವೇಶನ, ವಸತಿ ಸೌಲಭ್ಯ ಒದಗಿಸಲು ಪುರಸಭೆ ಮುಖ್ಯಾಧಿಕಾರಿಗೆ
ಲಿಖೀತವಾಗಿ ತಿಳಿಸಲಾಗುವುದು. ಸಿಂಧೋಳ ಸಮಾಜದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಯವರೊಂದಿಗೆ ಚರ್ಚಿಸಲಾಗುವುದು.
ಮಹಾಬಲೇಶ್ವರ, ತಹಶೀಲ್ದಾರ್ ಹಗರಿಬೊಮ್ಮನಹಳ್ಳಿ.
ಸಿಂಧೋಳ ಸಮಾಜದ 40 ಕುಟುಂಬದ 200 ಜನ ಟೆಂಟ್‌ನಲ್ಲಿ ವಾಸವಾಗಿದ್ದೇವೆ. ಸರ್ಕಾರದವರು ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ ಕೊಟ್ಟಿದ್ದಾರೆ. ಆದರೆ, ಈವರೆಗೂ ಸಾಕಷ್ಟು ತಹಶೀಲ್ದಾರರು ಬಂದು ಹೋದರೂ ನಮಗೆ ಸಿಂಧೋಳ ಜಾತಿ ಪ್ರಮಾಣಪತ್ರ ಮಾತ್ರ ದೊರೆತಿಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುತ್ತಿಲ್ಲ. ಈ ವಿಷಯವನ್ನು ಈಗೀನ ತಹಶೀಲ್ದಾರ್ ಗಮನಕ್ಕೆ ತಂದಿದ್ದೇವೆ. ಜಾತಿ ಪ್ರಮಾಣಪತ್ರ ಕೊಡಿಸುವ ಭರವಸೆ ನೀಡಿದ್ದಾರೆ. ಟೆಂಟ್ ವಾಸಿಗಳ ಸಮಸ್ಯೆಗಳು ನೂರಾರೂ ಇದ್ದರೂ ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ. ನಿವೇಶನ, ವಸತಿ ಸೌಲಭ್ಯದಿಂದ ಟೆಂಟ್ ವಾಸಿಗಳು ವಂಚಿತರಾಗಿದ್ದಾರೆ.
ನರಸಿಂಹ, ಸಿಂಧೋಳ ಸಮಾಜದ ಅಧ್ಯಕ್ಷ ಹಗರಿಬೊಮ್ಮನಹಳ್ಳಿ
ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಗುರುತಿಸಿ ಟೆಂಟ್ ವಾಸಿಗಳಿಗೆ ನಿವೇಶನ, ವಸತಿ ಸೌಲಭ್ಯವನ್ನು ನೀಡುವಂತೆ ಪುರಸಭೆಯವರಿಗೆ ಆದೇಶಿಸಲಾಗುವುದು. ಸಿಂದೋಳ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಒತ್ತಾಯಿಸಲಾಗುವುದು. ಟೆಂಟ್ ವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂಪುರೇಷ ಸಿದ್ಧಪಡಿಸಲಾಗುವುದು.
ಎಸ್. ಭೀಮಾನಾಯ್ಕ, ಶಾಸಕ, ಹಗರಿಬೊಮ್ಮನಹಳ್ಳಿ ಕ್ಷೇತ್ರ
ಸುರೇಶ ಯಳಕಪ್ಪನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.