ಸ್ಮಶಾನ ನಂದನವನವಾಗಿಸಲು ಪಣ!
Team Udayavani, Jan 28, 2019, 9:04 AM IST
ಬಳ್ಳಾರಿ: ಸ್ಮಶಾನದ ಪ್ರದೇಶವೆಂದರೆ ಯಾರಿಗೂ ಬೇಡವಾದ ಪ್ರದೇಶ. ಸ್ವಚ್ಛತೆಯ ಮಾತಂತೂ ಬಲು ದೂರ. ಪಾಲಿಕೆಯವರು ನಿರ್ವಹಣೆ ಮಾಡುವುದು ಆಟಕ್ಕುಂಟು ಲೆಕ್ಕೆಕ್ಕಿಲ್ಲ. ಹಾಗಾದರೆ ಸ್ಮಶಾನದ ಪರಿಸ್ಥಿತಿ ಏನಾ ಅಂತಿರಾ…. ಅದಕ್ಕಾಗಿ ನಗರದಲ್ಲಿ ಸೆಲ್ಫ್ ಸ್ಯಾಟೀಸ್‌ಫ್ಯಾಕ್ಷನ್ ರಾಕ್ ಎಂಬ ಯುವ ಪಡೆ ಹುಟ್ಟಿಕೊಂಡಿದ್ದು, ಸದ್ದಿಲ್ಲದೇ ಹರಿಶ್ಚಂದ್ರನಗರ ಸ್ಮಶಾನ ಸ್ವಚ್ಛಗೊಳಿಸುತ್ತಾ ಸಸಿ ನಾಟಿ ಮಾಡುತ್ತಾ ಹಸಿರೀಕರಣಕ್ಕೆ ಶ್ರಮಿಸುತ್ತಿದೆ.
ಸ್ಮಶಾನ ಎಂದಾಕ್ಷಣ ಮೃತದೇಹಿಗಳ ಹೂಳಿಡುವ ಪ್ರದೇಶವಾಗಿರುತ್ತೆ. ಅಲ್ಲದೆ ಮೃತಪಟ್ಟವರ ಸಮಾಧಿಗಳಿಗೂ ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ಪೂಜೆ, ಪುನನಸ್ಕಾರಗಳು ನಡೆಯುತ್ತವೆ. ಸ್ಮಶಾನಗಳಲ್ಲಿ ಸ್ವಚ್ಛತೆ ಇಲ್ಲದ್ದರಿಂದ ಇತ್ತೀಚಿನ ದಿನಗಳಲ್ಲಿ ಸತ್ತವರ ಸಮಾಧಿಗಳಿಗೆ ಪೂಜೆ ಮಾಡುವವರ ಸಂಖ್ಯೆ ಕ್ಷೀಣಿಸಿದೆ.
ಇಲ್ಲಿನ ಮೇದಾರ ಕೇತಯ್ಯನಗರದಲ್ಲಿನ ದೇವಣ್ಣ ಮತ್ತವರ ಸ್ನೇಹಿತರ ಬಳಗದ ಶೇಕ್ಷಾವಲಿ, ಶ್ರೀನಿವಾಸ, ರಾಮಕೃಷ್ಣ, ರಘು, ಹನುಮಂತ, ಪ್ರಹ್ಲಾದ, ಮಾರೆಪ್ಪ, ನಾಗರಾಜ್, ಚಿನ್ನರೆಡ್ಡಿ, ಉಮೇಶ್, ಮಾರುತಿ ಇತರರು ಸೆಲ್ಫ್ ಸ್ಯಾಟಿಸ್‌ಫ್ಯಾಕ್ಷನ್ ರಾಕ್ ಎಂಬ ಹೆಸರಿನಡಿ ಗುಂಪೊಂದನ್ನು ರಚಿಸಿಕೊಂಡು ವಾರದ ಪ್ರತಿ ಭಾನುವಾರ ಇಲ್ಲಿನ ಹರಿಶ್ಚಂದ್ರ ನಗರದಲ್ಲಿನ ಸ್ಮಶಾನ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಕಳೆದ 9 ವಾರಗಳಲ್ಲಿ ಸ್ಮಶಾನದಲ್ಲಿ ಬೆಳೆದಿದ್ದ ಬಳ್ಳಾರಿ ಜಾಲೆ ಮುಳ್ಳುಕಂಟಿ ಸೇರಿ ಇತರೆ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುತ್ತಿರುವ ಈ ಯುವಕರು, ಇದೀಗ ಈ ಸ್ಮಶಾನನವನ್ನು ನಂದನವನದಂತೆ ನಿರ್ಮಿಸಲು ವಿವಿಧ ರೀತಿಯ ಗಿಡಗಳನ್ನು ನಾಟಿ ಮಾಡುತ್ತಿದ್ದಾರೆ. ಸ್ಮಶಾನದಲ್ಲಿ ಮತ್ತಷ್ಟು ಹಸಿರೀಕರಣಗೊಳಿಸಲು ಮುಂದಾಗಿದ್ದಾರೆ.
ಗಣಿನಗರಿ ಬಳ್ಳಾರಿಯ ಎಂ.ಕೆ. ನಗರ, ರಾಜೇಶ್ವರಿ ನಗರ, ನಾಗಲಕೆರೆ, ಕೌಲ್‌ಬಜಾರ್ ಪ್ರದೇಶದ ಜಾಗೃತಿ ನಗರ, ಮಿಲ್ಲರ್‌ಪೇಟೆ, ಕಪ್ಪಗಲ್ಲು ರಸ್ತೆ, ಬಸವನಕುಂಟೆ, ದೇವಿನಗರ, ಮರಾಠಗೇರಿ, ತಿಲಕನಗರ, ಮಾರುತಿ ನಗರದ ಯುವಕರು ಪ್ರತಿ ಭಾನುವಾರ ಬಂತೆಂದೆರೆ ಸಾಕು ಸ್ಮಶಾನದ ಶುಚಿತ್ವ ಗೊಳಿಸುವ ಕಾಯಕದಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ಐದಾರು ತಿಂಗಳ ಹಿಂದೆ ನಿಧನನಾಗಿದ್ದ ನನ್ನ ಸ್ನೇಹಿತನ ಅಂತ್ಯಕ್ರಿಯೆಯು ಇದೇ ಸ್ಮಶಾನದಲ್ಲಿ ನಡೆದಿತ್ತು. ಆಗ ಸ್ಮಶಾನದಲ್ಲಿ ವಿಪರೀತವಾಗಿ ಬಳ್ಳಾರಿ ಜಾಲಿ ತುಂಬಿಕೊಂಡಿತ್ತು. ಸಮಾಧಿಯ ಕಟ್ಟೆಗಳೇ ಕಾಣುತ್ತಿರಲಿಲ್ಲ. ಜತೆಗೆ ನೆರೆಹೊರೆಯ ನಿವಾಸಿಗಳು ನಿತ್ಯ ಕರ್ಮಗಳನ್ನೂ ಸ್ಮಶಾನದಲ್ಲೇ ಪೂರೈಸುತ್ತಿದ್ದರಿಂದ ಸ್ಮಶಾನ ಗಬ್ಬುನಾರುವಂತಿತ್ತು. ಇಡೀ ಪ್ರದೇಶವೇ ಹೊಲಸು ತುಂಬಿಕೊಂಡಿತ್ತು. ಅಂತ್ಯಕ್ರಿಯೆಗೆ ಬಂದಿದ್ದ ಜನರು ಮೂಗು ಮುಚ್ಚಿಕೊಂಡೇ ತೆರಳಬೇಕಿತ್ತು. ಅಂತಹ ಪರಿಸ್ಥಿತಿಯನ್ನು ಕಂಡು ನಮಗೂ ಬೇಸರವಾಗಿತ್ತು. ಆಗ ನಾವೆಲ್ಲ ಸೇರಿ ಸ್ಮಶಾನ ಸ್ವಚ್ಛಗೊಳಿಸಬೇಕೆಂದು ನಿರ್ಣಯಿಸಿ ಇದೀಗ ಸ್ವಚ್ಛಗೊಳಿಸುತ್ತಿದ್ದೇವೆ ಎನ್ನುತ್ತಾರೆ ತಂಡದ ಮುಖಂಡ ದೇವಣ್ಣ.
ಈ ಸ್ಮಶಾನವನ್ನ ಹೇಗಾದ್ರೂ ಮಾಡಿ ನಂದನವನ ಮಾಡಬೇಕೆಂದು. ಊರಿನಲ್ಲಿ ದೇಗುಲಗಳು ಹೇಗೆ ಶುಚಿಯಾಗಿರುತ್ತವೆ. ಅದೇ ರೀತಿಯಲ್ಲೇ ಸ್ಮಶಾನಗಳು ಶುಚಿಯಾಗಿರಬೇಕು ಅಂತ. ಆಗಾಗಿ, ಅಂದಿನಿಂದ ಆರಂಭವಾದ ಶುಚಿತ್ವ ಕಾರ್ಯ ಮುಂದುವರಿದಿದೆ. ಅಲ್ಲದೇ, ಗಿಡಗಳನ್ನೂ ನಡೆಲಾಗುತ್ತಿದೆ.
ನಮಗೆ ಯಾವ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಈವರೆಗೂ ಸಹಕಾರ ನೀಡಿಲ್ಲ. ಅದರ ಅಗತ್ಯವೂ ನಮಗಿಲ್ಲ. ಮಹಾನಗರ ಪಾಲಿಕೆ ಮಾತ್ರ ಸ್ಮಶಾನದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡುತ್ತಾರೆ ತಂಡದ ಇತರೆ ಸದಸ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.