ಜಾತಿಗಳ ಅಸ್ತಿತ್ವ ದೇಶದ ಪ್ರಗತಿಗೆ ಅಡ್ಡಿ
Team Udayavani, Feb 1, 2018, 2:27 PM IST
ಹೊಸಪೇಟೆ: ಸಮಾಜದ ಕೆಳವರ್ಗದ ಜನರು ಒಗ್ಗೂಡುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳ ಅಕ್ರಮಣ ಹಾಗೂ ಮೂಲಭೂತವಾದದ ಅಪಾಯವನ್ನ ತಡೆಗಟ್ಟಬಹುದಾಗಿದೆ ಎಂದು ಖ್ಯಾತ ಕವಿ, ನಾಡೋಜ ಡಾ| ಸಿದ್ಧಲಿಂಗಯ್ಯ ಹೇಳಿದರು.
ನಗರದ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಕರು ವೈಚಾರಿಕತೆ ಮತ್ತು ಮಾನವೀಯ ಪ್ರೇಮವನ್ನು
ಬೆಳೆಸಿಕೊಳ್ಳುವುದು ವರ್ತಮಾನದ ಅಗತ್ಯವಾಗಿದೆ. ಜಾತಿಗಳ ಅಸ್ತಿತ್ವ ದೇಶದ ಏಳಿಗೆಗೆ ದೊಡ್ಡ ಅಡ್ಡಿಯಾಗಿದೆ. ಈ ಜಾಡ್ಯವನ್ನು ನಿವಾರಿಸುವಲ್ಲಿ ಯುವಜನರ ಪಾತ್ರ ಮಹತ್ವವಾದದ್ದು. ಜ್ಯೋತಿಷ್ಯ, ಜಾತಕದಂತಹ ಅವೈಜ್ಞಾನಿಕ ಸಂಗತಿಗಳು ಸಮಾಜದಲ್ಲಿ ಬೇರು ಬಿಟ್ಟಿವೆ. ಇಂತಹ ಸಂವಿಧಾನ ವಿರೋಧಿ ಸಂಗತಿಗಳನ್ನು ದೂರವಿಟ್ಟು ಮನುಜಮತದ ಕಡೆಗೆ ನಾವು ಹೆಜ್ಜೆ ಹಾಕಬೇಕಾಗಿದೆ ಎಂದರು.
ಸಂವಿಧಾನ ಬದಲಾವಣೆ ಕುರಿತಂತೆ ಜನಪ್ರತಿನಿಧಿಗಳು, ರಾಜಕಾರಣಿಗಳು ಹಗುರವಾಗಿ ಮಾತನಾಡುತ್ತಿರುವುದು ಅಪರಾಧ. ಸಂವಿಧಾನಕ್ಕೆ ಗೌರವ ತೋರಿಸುವುದು ಮಾತ್ರವಲ್ಲ, ಅದನ್ನು ನಮ್ಮ ಬದುಕಿನಲ್ಲಿ ಪಾಲಿಸಿದರೆ ಭಾರತದ ಆತ್ಮಗೌರವ ಹೆಚ್ಚುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಪ್ರಾಂಶುಪಾಲ ಡಾ|.ಜಿ.ಕನಕೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಘಟಕದ ಖಜಾಂಚಿ ಜಿ.ಲಿಂಗಾರೆಡ್ಡಿ, ಕನ್ನಡ ವಿಭಾಗದ
ಮುಖ್ಯಸ್ಥ ಡಾ| ನಾಗಣ್ಣ ಕಿಲಾರಿ, ಕಸಾಪ ಅಧ್ಯಕ್ಷ ಡಾ| ಟಿ.ಎಚ್.ಬಸವರಾಜ್, ಡಾ| ಕೆ.ವೆಂಕಟೇಶ್ ಇದ್ದರು. ಡಾ| ನಾಗವೇಣಿ
ಸೋಸಲೆ ವಂದಿಸಿದರು. ಇದೇ ಸಂದರ್ಭದಲ್ಲಿ ಡಾ| ಸಿದ್ಧಲಿಂಗಯ್ಯನವರ ಕುರಿತ ಸಾಕ್ಷಚಿತ್ರ ಪ್ರದರ್ಶನ ಮಾಡಲಾಯಿತು.
ಯುವಕರು ವೈಚಾರಿಕತೆ ಮತ್ತು ಮಾನವೀಯ ಪ್ರೇಮವನ್ನು ಬೆಳೆಸಿಕೊಳ್ಳುವುದು ವರ್ತಮಾನದ ಅಗತ್ಯವಾಗಿದೆ. ಜಾತಿಗಳ
ಅಸ್ತಿತ್ವ ದೇಶದ ಏಳಿಗೆಗೆ ದೊಡ್ಡ ಅಡ್ಡಿಯಾಗಿದೆ. ಈ ಜಾಡ್ಯವನ್ನು ನಿವಾರಿಸುವಲ್ಲಿ ಯುವಜನರ ಪಾತ್ರ ಮಹತ್ವವಾದದ್ದು. ಜ್ಯೋತಿಷ್ಯ,
ಜಾತಕದಂತಹ ಅವೈಜ್ಞಾನಿಕ ಸಂಗತಿಗಳು ಸಮಾಜದಲ್ಲಿ ಬೇರು ಬಿಟ್ಟಿವೆ. ಇಂತಹ ಸಂವಿಧಾನ ವಿರೋಧಿ ಸಂಗತಿಗಳನ್ನು ದೂರವಿಟ್ಟು ಮನುಜಮತದ ಕಡೆಗೆ ನಾವು ಹೆಜ್ಜೆ ಹಾಕಬೇಕಾಗಿದೆ.
ಡಾ| ಸಿದ್ದಲಿಂಗಯ್ಯ, ಸಾಹಿತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.