ಕ್ರೀಡಾಕೂಟ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ
Team Udayavani, Jul 20, 2017, 1:29 PM IST
ಬಳ್ಳಾರಿ: ಸ್ಥಳೀಯ ಕ್ರೀಡಾಪಟುಗಳು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಂಡು ಕ್ರೀಡಾ ಪ್ರೇಮ ಮೆರೆಯಬೇಕು.
ಈ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ಸಂಕೀರ್ಣದಲ್ಲಿರುವ ಒಳಾಂಗಣ ಬ್ಯಾಡ್ಮಿಂಟನ್ ಅಂಕಣದಲ್ಲಿ ಬುಧವಾರ ಬಳ್ಳಾರಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಜಿಲ್ಲಾಡಳಿತ, ಪೊಲೀಸ್ ಜಿಂಖಾನಾಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯೋನೆಕ್ಸ್ ಸನ್‌ರೈಸ್ ಕರ್ನಾಟಕ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪೀಯನ್‌ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಉನ್ನತ ಮಟ್ಟದ ಪಂದ್ಯಾವಳಿಗಳಿಂದ ಕ್ರೀಡಾಪಟುಗಳಿಗೆ ಸವಾಲುಗಳನ್ನು ಎದುರಿಸುವ ಅವಕಾಶ ದೊರೆತು ಅವರಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ವೇದಿಕೆಯಾಗುತ್ತದೆ. ಸ್ಥಳೀಯ ಕ್ರೀಡಾ ಪ್ರೇಮಿಗಳಿಗೆ ಇಂತಹ ರಾಜ್ಯ ಮಟ್ಟದ
ಕ್ರೀಡಾಪಟುಗಳ ಕ್ರೀಡಾಕೌಶಲ್ಯ ನೋಡಲು ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ರೀಡಾ ಕೌಶಲ್ಯ ನೇರವಾಗಿ ಕಲಿಯಬಹುದಾದ ಹಾಗೂ ಕ್ರೀಡಾಕಾರರೊಂದಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೀಡಾಕೂಟಗಳ ಕುರಿತು ಚರ್ಚಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ಬಳ್ಳಾರಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟ, ಪಂದ್ಯಾವಳಿಗಳನ್ನು ಆಯೋಜಿಸಲು ಹೇರಳ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಬಿಡಿಎಎಗೆ ಸೂಕ್ತ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಎಸ್‌ಪಿ ಆರ್.ಚೇತನ್ ಮಾತನಾಡಿ, ಬಿಡಿಎಎ ಜೊತೆಗೆ
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ವೇದಿಕೆ ಒದಗಿಸಲು ಪೊಲೀಸ್ ಜಿಂಖಾನಾಗೆ ಸಂತಸವೆನಿಸಿದೆ. ಹೈದ್ರಾಬಾದ್ ಕರ್ನಾಟಕ
ಪ್ರದೇಶದಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದು ಅಪರೂಪ. ಸ್ಥಳೀಯ ಕ್ರೀಡಾಪಟುಗಳು ರಾಜ್ಯ ಮಟ್ಟದ
ಕ್ರೀಡಾಪಟುಗಳೊಂದಿಗೆ ಬೆರೆತು ಅವರಿಂದ ಸಲಹೆ, ಕ್ರೀಡಾಕೌಶಲ್ಯ ಕಲಿಯುವ ಉತ್ಸಾಹ ತೋರಬೇಕು ಎಂದು ಸಲಹೆ ನೀಡಿದರು.
ಉದ್ಯಮಿ ಡಾ| ಡಿ.ಎಲ್.ರಮೇಶ್‌ಗೋಪಾಲ್ ಮಾತನಾಡಿ, ಉತ್ತಮ ಜೀವನ ನಡೆಸಲು ಕ್ರೀಡೆಗಳು ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ಆಯೋಜನೆಯಾಗುವ ಇಂತಹ ಕ್ರೀಡಾಕೂಟಗಳಿಗೆ ತಾವು ಸದಾ ಬೆಂಬಲಿಸುವುದಾಗಿ ತಿಳಿಸಿದರು. ಹಿರಿಯ ಲೆಕ್ಕಪರಿಶೋಧಕ ಜಯಪ್ರಕಾಶ್ ಜೆ.ಗುಪ್ತ ಮಾತನಾಡಿ, 1999ರ ನಂತರ ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಯುತ್ತಿದೆ. ನಗರದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಅತ್ಯುತ್ತಮ ಮೂಲ ಸೌಕರ್ಯ ಹೆಚ್ಚಿದ್ದು, ಭವಿಷ್ಯದಲ್ಲಿ ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ಬಿಡಿಎಎ ಆಯೋಜಿಸುವಂತಾಗಬೇಕೆಂದರು. ಉದ್ಯಮಿ ಗೋವಿಂದ ನಾರಾಯಣ ಸರಡಾ ಮಾತನಾಡಿ, ಪೊಲೀಸ್ ಜಿಂಖಾನಾದ ಕ್ರೀಡಾ ಸೌಲಭ್ಯಗಳಿಂದ ತಾವು ಟ್ ಆಗಿದ್ದೇನೆ. ಇದರಿಂದ ಸೂರ್ತಿಗೊಂಡು ಈ ಪಂದ್ಯಾವಳಿಗೆ ಪ್ರಾಯೋಜಕತ್ವ ನೀಡಿದ್ದೇನೆ. ಇಂತಹ ಕ್ರೀಡಾ ಸೌಲಭ್ಯ ಕಲ್ಪಿಸಿರುವ ಪೊಲೀಸ್ ಜಿಂಖಾನಾ ಹಾಗೂ ಬಿಡಿಎಎಗೆ ಋಣಿಯಾಗಿದ್ದೇನೆ ಎಂದರು.
ಬಿಡಿಎಎ ಅಧ್ಯಕ್ಷ ಜೆ.ಎಸ್.ಬಸವರಾಜ್ ಮಾತನಾಡಿ, ಜಿಲ್ಲಾಡಳಿತ, ಪೊಲೀಸ್ ಜಿಂಖಾನಾ, ಕ್ರೀಡಾ ಪ್ರೇಮಿಗಳ ಸಹಕಾರದಿಂದ ಇಂತಹ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜನೆಯಾಗಿದೆ. ಪಾಲ್ಗೊಂಡಿರುವ ಬ್ಯಾಡ್ಮಿಂಟನ್ ಪಟುಗಳು ಕ್ರೀಡಾ ಸ್ಫೂ ರ್ತಿಯಿಂದ ಪಂದ್ಯಗಳಲ್ಲಿ ಪಾಲ್ಗೊಂಡು ಕ್ರೀಡಾ ಪ್ರೇಮಿಗಳಿಗೆ ಬ್ಯಾಡ್ಮಿಂಟನ್ ಆಟದ ರಸದೌತಣ ಬಡಿಸಬೇಕೆಂದರು.
ಡಾ| ಅನೂರಾಧಾ ಪ್ರಾರ್ಥಿಸಿದರು. ಬಿಡಿಎಎ ಕಾರ್ಯದರ್ಶಿ ಡಾ| ರಾ ಕಾ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂದ್ಯಾವಳಿಯ ಸಂಚಾಲಕ ಎಂ.ಅಹಿರಾಜ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.