ದಿ|ಎಂ.ಪಿ. ಪ್ರಕಾಶ್ ಸೃಜನಶೀಲ ಚಿಂತಕ
ಬಳ್ಳಾರಿಗೆ ಮೊಳಕಾಲ್ಮೂರು ಸೇರ್ಪಡೆಗೆ ಮುಂದಾಗಿರುವುದನ್ನು ಈ ಭಾಗದ ಜನ ವಿರೋಧಿಸಿದ್ದಾರೆ.
Team Udayavani, Jul 12, 2022, 6:10 PM IST
ಹರಪನಹಳ್ಳಿ: ವಿಭಿನ್ನ ವಿಚಾರಗಳ ಮೂಲಕ ನಾಡಿನಲ್ಲಿ ಹೆಸರು ಮಾಡಿದ್ದ ದಿ.ಎಂ.ಪಿ. ಪ್ರಕಾಶ್ ಅವರು ಸೃಜನಶೀಲ ಚಿಂತಕ, ಸಾಂಸ್ಕೃತಿಕ ರಾಯಭಾರಿ, ರಂಗಕರ್ಮಿ ಆಗಿದ್ದರು ಎಂದು ತೆಗ್ಗಿನಮಠ ಶ್ರೀ ವರಸದ್ಯೋಜಾತ ಶಿವಾಚಾರ್ಯ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಸೋಮವಾರ ಎಂ.ಪಿ.ರವೀಂದ್ರ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ದಿ. ಎಂ.ಪಿ. ಪ್ರಕಾಶ್ ಅವರ 82 ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಎಂ.ಪಿ. ಪ್ರಕಾಶ್ ಅವರ ವಿಚಾರಗಳನ್ನು ಅವರ ಮಗನಾದ ದಿ.ಎಂ.ಪಿ. ರವೀಂದ್ರರವರು ಮುಂದುವರಿಸಿಕೊಂಡು ಹೋಗಿದ್ದಾರೆ. ತಾಲೂಕಿನ 371ಜೆ ಕಲಂ, 60 ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗೆ ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ 371ಜೆ ಹೋರಾಟ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಜಾಕ್ ಉಸ್ತಾದ ಮಾತನಾಡಿ, ಜೀವನದ ದಿಕ್ಕನ್ನು ಬದಲಾವಣೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಕಠಿಣ ಶ್ರಮದಿಂದ ಮಾತ್ರ ಉನ್ನತ ಶಿಕ್ಷಣದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ.
ಇಂದು ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಹಿಂದೆ ಇರುವ ಕೊರಗು ಇದೆ. ಜಿಲ್ಲಾ, ರಾಜ್ಯಮಟ್ಟದಲ್ಲಿ ಸಮೀಕ್ಷೆಯ ಪ್ರಕಾರ ಉನ್ನತ ವ್ಯಾಸಂಗ ಮಾಡುವವರ ಸಂಖ್ಯೆ ಶೇ. 26% ಇದ್ದಾರೆ. ರಾಜ್ಯದಲ್ಲಿ ಶೇ. 28ರಷ್ಟು ಪದವಿ ಮಾಡುತ್ತಿದ್ದಾರೆ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಸರಾಸರಿ 7 ರಷ್ಟು ಇದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಬಡತನ, ಶೈಕ್ಷಣಿಕ ಮೂಲಭೂತ ಕೊರತೆಗಳು ಅಂಕೆ, ಸಂಖ್ಯೆ ಕಡಿಮೆಯಾಗಿದ್ದು ಕನಿಷ್ಠ ರಾಜ್ಯಮಟ್ಟದ ಸರಾಸರಿ ತುಂಬಲು ತಾವೆಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
371ಜೆ ಕಲಂ ಸೌಲಭ್ಯಕ್ಕಾಗಿ ಗದಗ ಹಾಗೂ ಬಳ್ಳಾರಿಗೆ ಮೊಳಕಾಲ್ಮೂರು ಸೇರ್ಪಡೆಗೆ ಮುಂದಾಗಿರುವುದನ್ನು ಈ ಭಾಗದ ಜನ ವಿರೋಧಿಸಿದ್ದಾರೆ. ಆದರೆ ಹರಪನಹಳ್ಳಿ ಸೇರ್ಪಡೆಗೆ ಸ್ವಾಗತಿಸಿದ್ದು ಎಷ್ಟೇ ವಿರೋಧವಿದ್ದರು ಹರಪನಹಳ್ಳಿ 371ಜೆ ಕಲಂ ಅಡಿಯಲ್ಲಿ ಸೇರ್ಪಡೆಗೆ ಪ್ರಯತ್ನಪಟ್ಟವರು ದಿ.ಎಂ.ಪಿ.ರವೀಂದ್ರರವರು, ಇದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕು ಇದರ ಸಾರ್ಥಕತೆ ಅವರಿಗೆ ಸಲ್ಲುತ್ತದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾರವರು ಮಾತನಾಡಿ, ನಮ್ಮ ತಂದೆ ಹಾಗೂ ಸಹೋದರ ಅವರ ಅನೇಕ ಜನಪರ ಕೆಲಸಗಳನ್ನು ಮಾಡಿದ್ದು, ಅವರನ್ನು ಈ ಕ್ಷೇತ್ರದ ಜನತೆ ಸ್ಮರಿಸುತ್ತಾರೆ. ಅವರ ಹಾದಿಯಲ್ಲಿಯೇ ನಾವು ಕೆಲಸ ಮಾಡಲು ಮುಂದಾಗುತ್ತೇನೆ. ತಾವೆಲ್ಲರೂ ಸಹಕಾರ ನೀಡಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ 220 ವಿದ್ಯಾರ್ಥಿಗಳಿಗೆ ಮತ್ತು ಕಾಂಗ್ರೆಸ್ ಸದಸ್ಯತ್ವ ಹೆಚ್ಚು ನೋಂದಣಿ ಮಾಡಿದ 180 ಕಾರ್ಯಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಇಓ ಕೊಟ್ರಯ್ಯ, ಗೌತಮ, ಕೆ.ಎಂ. ಬಸವರಾಜಯ್ಯ, ಅಲಗಿಲವಾಡ ವಿಶ್ವನಾಥ, ಜಯಲಕ್ಷ್ಮಿ, ಕವಿತಾ, ನೇತ್ರಾವತಿ, ರತ್ನಮ್ಮ, ಮೈದೂರು ರಾಮಣ್ಣ, ಉದಯಕುಮಾರ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಶಿವರಾಜ, ನಿಟ್ಟೂರು ಹನುಮಂತ, ಪ್ರಸಾದ ಕವಾಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.