ಅರ್ಜಿಯಲ್ಲಿ ಹೆಸರು ಬದಲಾವಣೆ ಅಸಾಧ್ಯ
•56 ಅಭ್ಯರ್ಥಿಗಳು ಕಣದಲ್ಲಿ•ಪ್ರಾದೇಶಿಕ ಪಕ್ಷಗಳು ಪಡೆದ ಚಿನ್ಹೆ ನೀಡಲು ಅಸಾಧ್ಯ; ಚುನಾವಣಾಧಿಕಾರಿ ತಾಕೀತು
Team Udayavani, May 21, 2019, 12:31 PM IST
ಸಂಡೂರು: ಪಟ್ಟಣದ ಪುರಸಭೆ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ತೇನ್ ಸಿಂಗ್ ನಾಯ್ಕ ವಿಶೇಷ ಸೂಚನೆ ನೀಡಿದರು
ಹೂವಿನಹಡಗಲಿ: ಪಟ್ಟಣದ ಪುರಸಭೆಗೆ ಮೇ 29ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆ ದಿನವಾಗಿದ್ದು, ಒಟ್ಟು 18 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವ ಮೂಲಕ ಹಡಗಲಿ ಪುರಸಭೆಯಲ್ಲಿ ಒಟ್ಟು 54 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಹಡಗಲಿ ಪುರಸಭೆಯಲ್ಲಿ ಒಟ್ಟು 22 ವಾರ್ಡ್‌ಗಳಿದ್ದು 54 ಅಭ್ಯರ್ಥಿಗಳು ಸ್ಪರ್ಧೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ 1ನೇ ವಾರ್ಡ್‌ಗೆ ಜ್ಯೋತಿ ಮಲ್ಲಣ್ಣ, 2.ಟಿ ಸೌಮ್ಯ, 3. ಜ್ಯೋತಿ ಎಚ್. 4. ಅಟವಾಳಗಿ ಲೀಲಾಪ್ರಕಾಶ, 5. ಸ್ವಾಮಿ ಹೊಳಗುಂದಿ, 6. ಎಸ್.ಮಲ್ಲಿಕಾರ್ಜುನ, 7.ಲತಾ ಎಚ್, 8. ಬಸೆಟ್ಟಿ ಜಯಲಕ್ಮ್ಮಿ,, 9. ಸೊಪ್ಪಿನ ಮಂಜುನಾಥ, 10. ಕೆ. ಪತ್ರೇಶ್, 11.ಲಕ್ಷ್ಮಿ ಭಂಡಾರಿ, 12. ಚಂದ್ರನಾಯ್ಕ, 13. ಎಸ್. ಶಫಿಉಲ್ಲಾ, 14. ಜಮಲಾಬಿ ಗಂಟಿ, 15. ವಾರದ ಮಹ್ಮದ್ ಗೌಸ್ 16. ಅರುಣಿ ಮಹ್ಮದ್ ರಫಿ, 17. ಕಲ್ಕೇರಿ ಮಹ್ಮದ್ ರಫಿ, 18. ನಿರ್ಮಲ, 19. ಐಗೊಳ್ ಸುರೇಶ್, 20. ವಿಶಾಲಾಕ್ಷಿ, 21. ಹನುಮಂತಪ್ಪ, 22. ಎಸ್. ತಿಮ್ಮಪ್ಪ. 23. ಎಂಟಮನಿ ಸರೋಜ,
ಬಿಜೆಪಿಯಿಂದ 1ನೇ ವಾರ್ಡಿಗೆ ಎಸ್. ನಿಜಲಿಂಗಪ್ಪ, 2. ಗಡಗಿ ಗುರುಬಸಮ್ಮ, 3. ಕವಿತಾ ಎಸ್ ಪಾಟೀಲ, 4. ಸೌಭಾಗ್ಯ, 5. ಕೆ. ಹನುಮಂತಪ್ಪ 6.ವೀರೇಶ 7. ಶಾಂತವ್ವ, 8. ಶೋಭಾ, 9. ಸೊಪ್ಪನ ಬಸವರಾಜ್, 10. ಮಂಜುನಾಥ ಜೆ, 11. ಬಿ. ರೇಣುಕಮ್ಮ, 12. ಪಿ. ನಿಂಗಪ್ಪ. 13. ಶಿವಪ್ಪ , 15. ದಾದಾಪೀರ್, 16.ಅನಿಲ್ಬಾಷಾ, 17. ಈಟಿ ಮಾಲತೇಶ್, 18. ಗೀತಾ ಮಲ್ಕಿ ಒಡೆಯರ್, 20. ನಾವಡೆ ಗೌರಮ್ಮ, 21.ಎಂ. ಪ್ರಕಾಶ್, 22. ಶಶಿಧರ್ ಶೆಟ್ಟಿ, 23. ದುರ್ಗವ್ವ ಸ್ಪರ್ಧೆ ಬಯಸಿದರೆ.
ಜೆಡಿಎಸ್ ಪಕ್ಷದಿಂದ 10ನೇ ವಾರ್ಡ್‌ನಲ್ಲಿ ಸಿಯುಎಂ ಕೊಟ್ರಯ್ಯ, 13.ನಬಿಸಾಬ್, 16.ಡಿ. ಅಬೂಬಕರ್, 17.ಎಚ್ ಅಬ್ದುಲ್ ರಹಿಮಾನ್ ಹಾಗೂ 23. ಬಿ ಕಮಲವ್ವ ಸ್ಪರ್ಧೆ ಬಯಸಿದ್ದಾರೆ. ಇನ್ನೂ ಪಕ್ಷೇತರರಾಗಿ 8ನೇ ವಾರ್ಡ್‌ನಿಂದ ಎಂ. ಸುಜಾತಾ, 10.ಕೊಳಚಿ ರುದ್ರಪ್ಪ, 13.ಮಹ್ಮದ್ ರಫಿ, 14.ಶಬಿನಾ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.
ಪುರಸಭೆಗೆ ಚುನಾವಣೆಗೆ ಸ್ಪರ್ಧೆ ಬಯಿಸಿ ನಾಮಪತ್ರ ಸಲ್ಲಿಸಿದ್ದ ಅಕ್ಕಮ್ಮ, ಹಾಲಮ್ಮ, ಕೆ. ಸವಿತಾ, ಆಶಾಬಿ, ರಾಜೇಶ್ವರಿ, ಸಿ. ಗೌರಮ್ಮ, ರಮಿಜಾ ಬಿ, ಜಮೀರುದ್ದಿನ್ ಮರ್ದಾನ್‌ಸಾಬ್, ಎಸ್.ಶಂಭುನಾಥ, ಫೈಜು ಲಕ್ಷ್ಮಿ ಮಹಾಲಕ್ಮಿ ಬಾರಿಕರ ನಾಗರಾಜ್, ಮಹಾದೇವ ಹಕ್ಕಂಡಿ, ವೀರಣ್ಣ ಚಕ್ರಶಾಲಿ, ದೀಪದ ಕೃಷ್ಣ, ಟಿ. ಮಹಾಂತೇಶ್ ನಾಮಪತ್ರ ಹಿಂಪಡೆದರು.
ಹಡಗಲಿ ಪುರಸಭೆ ಕಣದಲ್ಲಿ 54 ಅಭ್ಯರ್ಥಿಗಳು:
ಸಂಡೂರುಪುರಸಭೆಯ ಚುನಾವಣಾ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳು ಉಳಿದಿದ್ದು, 12 ಅಭ್ಯರ್ಥಿಗಳು ಹಿಂಪಡೆದರೆ 1 ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ತೇನ್ ಸಿಂಗ್ ನಾಯ್ಕ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಮತ್ತು ಪುರಸಭೆಯ ಕಚೇರಿಯಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, 9 ಪಕ್ಷೇತರ ಅಭ್ಯರ್ಥಿಗಳು, 1 ಬಿಎಸ್‌ಪಿ ಮತ್ತು 23 ಕಾಂಗ್ರೆಸ್ 23 ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಸಲ್ಲಿಸಿದವರು 69 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 12 ಅಭ್ಯರ್ಥಿಗಳು ಹಿಂಪಡೆದು 1 ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಿದೆ. ಕಣದಲ್ಲಿ ಉಳಿದ ಪಕ್ಷೇತರ ಅಭ್ಯರ್ಥಿಗಳು 1ನೇ ವಾರ್ಡ್‌ನಲ್ಲಿ ರುಕ್ಸಾನಾ.ಡಿ., 9ನೇ ವಾರ್ಡ್ ನಬಿಸಾಬ್.ಎಂ., 11.ಸಂತೋಷ್‌ಕುಮಾರ್ ಜೆ., ಎ.ಜೆ. ಶ್ರೀಶೈಲ, 13. ಮುನೀರ್ ಅಹ್ಮದ್, ಟಿ.ರವಿ, 16. ಶಹಿನಾಬೀ, 18.ಸುಧಾಕರ.ಪಿ., 21. ತಿಮ್ಮಪ್ಪ, 1 ಬಿಎಸ್‌ಪಿ ಪಕ್ಷದ ಅಭ್ಯರ್ಥಿ 13. ಸ್ಪರ್ಧಿಸಿದ್ದಾರೆ. ಹಿಂಪಡೆದವರು: 3ನೇ ವಾರ್ಡ್ ಕೃಷ್ಣಮೂರ್ತಿ ಎಸ್.ಎಂ, ನೂರ್‌ಅಹ್ಮದ್, 6. ಪಾರ್ವತಿ , ಎಚ್.ಎಂ. ರೋಹಿಣಿ, 11.ಎ.ನಿರಂಜನ್, 13. ಮಹ್ಮದ್ ಮುಕ್ತಿಯಾರ್, ರಾಜಾವಲಿ, 14. ಸ್ವಾತಿ, 16. ಮಹಬುನ್ನೀ ಎಂ., ಶಿಲ್ಪ ಅರುಣ್ ಎಸ್. ಪೋಳ್, ಶೇಕನ್‌ಬೀ, 17ನೇ ವಾರ್ಡ್ ಶಕುಂತಲಾ ಇಂದು ತಮ್ಮ ನಾಮಪತ್ರ ಹಿಂಪಡೆದುಕೊಂಡರು. ಇದೇ ಸಂದರ್ಭದಲ್ಲಿ ತೇನ್ ಸಿಂಗ್ ನಾಯಕ ಮಾತನಾಡಿ, ಅಭ್ಯರ್ಥಿಗಳು ತಾವು ತಿಳಿಸಿದ ಗುರುತುಗಳು, ಅರ್ಜಿ ಪರಿಶೀಲಿಸಲಾಗಿದೆ. ಕೆಲವರು ಕೊಟ್ಟ ಫೋಟೋಗಳು ಸರಿಯಾಗಿರದ ಕಾರಣ ಮೇ 21ರ ಬೆಳಗ್ಗೆ 11 ಗಂಟೆಯವರೆಗೆ ಬದಲಿ ಫೋಟೋ ಕೊಡಲು ಅವಕಾಶವಿದ್ದು, ತಕ್ಷಣ ತಂದು ಕೊಡಬೇಕು. ಅಲ್ಲದೆ ಯಾವುದೇ ಕಾರಣಕ್ಕೂ ನಿಮ್ಮ ಹೆಸರು ಬದಲಿಸಲು ಸಾಧ್ಯವಿಲ್ಲವೆಂದು, ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ನೀಡಿದರು. ಅಲ್ಲದೆ ಈಗಾಗಲೇ ರಾಷ್ಟ್ರೀಯ ಪಕ್ಷಗಳು ಪಡೆದ, ಪ್ರಾದೇಶಿಕ ಪಕ್ಷಗಳು ಪಡೆದ ಚಿಹ್ನೆಗಳನ್ನು ನೀಡಲು ಸಾಧ್ಯವಿಲ್ಲ, ಅವುಗಳನ್ನು ಸೂಚಿಸಬೇಡಿ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.