ಹಳೆಗನ್ನಡ ಓದಿ-ಮಾತನಾಡುವಷ್ಟು ಸರಳ


Team Udayavani, Jan 19, 2019, 7:44 AM IST

bell-4.jpg

ಹೊಸಪೇಟೆ: ನವರಸಗಳಿಂದ ಕೂಡಿರುವ ಪಂಪ ಭಾರತ, ರನ್ನನ ಗದಾಯುದ್ಧ, ಆದಿಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ ಹಳೆಗನ್ನಡದ ಕಾವ್ಯಗಳು. ಪ್ರತಿಯೊಬ್ಬರು ಓದಿ, ಮಾತನಾಡುವಷ್ಟು ಸರಳವಾಗಿವೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ಜಿ.ವೆಂಕಟೇಶ್‌ ತಿಳಿಸಿದರು.

ನಗರದ ಶಂಕರ್‌ ಆನಂದ್‌ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿಭಾಗ ಮತ್ತು ಕಸಾಪ ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಹಳೆಗನ್ನಡ ಕಾವ್ಯ ರಸಗ್ರಹಣ, ಅನುಸಂಧಾನ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಹ‌ಳೆಗನ್ನಡವೆನ್ನುವುದು ನಾವು, ನೀವೆಲ್ಲರೂ ಮಾತನಾಡಿದಷ್ಟು ಸರಳವಾಗಿದೆ. ಹಳೆಗನ್ನಡದ ಬಗ್ಗೆ 8ನೇ ಶತಮಾನದಲ್ಲಿ ಟೀಕುಗಳನ್ನು ಬರೆಯುವ ಸಂಪ್ರದಾಯ ನಡೆಯತ್ತಿದ್ದು, ನಂತರದಲ್ಲಿ ದೀಪಿಕೆಗಳು, ಸರಳ ಭಾರತವಾಗಿ ರೂಪುಗೊಂಡಿವೆ. ಹಳಗನ್ನಡದ ಬಗ್ಗೆ ಹೆದರಬೇಕಿಲ್ಲ. ಅದೊಂದು ಸರಳವಾಗಿದ್ದು, ಕಬ್ಬಿಣದ ಕಡಲೆ ಎನ್ನುವುದು ಕೆಲವರ ಮಾನಸಿಕ ರೋಗವಾಗಿದೆ. ಹಳೆಗನ್ನಡ ಕಾವ್ಯಗಳು ಇನ್ನಷ್ಟು ಅನುಸಂಧಾನವಾಗಬೇಕಿದೆ ಎಂದರು.

ಮೂಲ ಕಾವ್ಯಗಳೆಲ್ಲ ಶೃಂಗಾರದಿಂದ ಆರಂಭವಾಗಿ ಶಾಂತತೆಯಿಂದ ಮುಕ್ತಾಯವಾಗುತ್ತವೆ. ಲಕ್ಷ್ಮೀಶನ ಜೈಮಿನಿ ಭಾರತ, ಕುವೆಂಪು ಅವರ ಸಾಹಿತ್ಯದ ಮೇಲೆ ಅಗಾಧ ಪ್ರಭಾವ ಬೀರಿದೆ. ಕಾಲ ಕಾಲಕ್ಕೆ ಅನೇಕ ವಿದ್ವಾಂಸರು ಸರಳವಾಗಿ ಹಳೆಗನ್ನಡವನ್ನು ಕಟ್ಟಿಕೊಟ್ಟಿದ್ದಾರೆ. ಅದರ ಪ್ರವೇಶಕ್ಕೂ ಮುನ್ನ ತಾತ್ಸಾರ, ಟೀಕೆ ಭಾವನೆ ಬೇಡವಾಗಿದೆ ಎಂದರು. ಶಂಕರ್‌ಸಿಂಗ್‌ ಆನಂದ್‌ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ| ಬಿ.ಜಿ.ಕನಕೇಶಮೂರ್ತಿ ಮಾತನಾಡಿ, ಕನ್ನಡ ಪ್ರಾಧ್ಯಾಪಕರು, ಶಿಕ್ಷಕರು ಮೊದಲು ಹಳೆಗನ್ನಡವನ್ನು ಓದಬೇಕಿದೆ. ಅದರಲ್ಲಿನ ರಸಾನುಭವನನ್ನು ಆಸ್ವಾದಿಸುವ ಮೂಲಕ ತಿಳಿದುಕೊಳ್ಳಬೇಕು. ಅಲ್ಲಿನ ಶೃಂಗಾರ ಸೇರಿದಂತೆ ಇತರ ಪ್ರಸಂಗವನ್ನು ವಿದ್ಯಾರ್ಥಿಗಳಿಗೆ ರಸವತ್ತಾಗಿ ಬೋಧಿಸಲು ಅನುಕೂಲವಾಗಲಿದೆ. ಆ ಹಿನ್ನೆಲೆಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗದಿಂದ ವಿದ್ವಾಂಸರು ಆಗಮಿಸಿರುವುದು ಸಂತಸ ತಂದಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಡಾ| ಯತ್ನಳ್ಳಿ ಮಲ್ಲಯ್ಯ, ಸೈಯದ್‌ ನಾಜೀಂ ಮಾತನಾಡಿದರು. ಪಂಪಭಾರತ, ಗದಾಯುದ್ಧದ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ| ಶಿವಾನಂದ ವಿಷಯ ಮಂಡಿಸಿದರು. ಗಮಕ ಕಲಾವಿದರಾದ ಡಾ| ಎಂ.ಆರ್‌.ಸತ್ಯನಾರಾಯಣ, ಖಾಸೀಂ ಮಲ್ಲಿಗೆ ಬಡೇವೂರು ಅವರಿಂದ ಗಮಕ ಗಾಯನ ನಡೆಯಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ನಾಗಣ್ಣ ಕಿಲಾರಿ, ಬಲರಾವ್‌ ಎಸ್‌.ರಾಜಪುರೋಹಿತ್‌ ಇನ್ನಿತರರಿದ್ದರು.

ಹ‌ಳೆಗನ್ನಡವೆನ್ನುವುದು ನಾವು, ನೀವೆಲ್ಲರೂ ಮಾತನಾಡಿದಷ್ಟು ಸರಳವಾಗಿದೆ. ಹಳೆಗನ್ನಡದ ಬಗ್ಗೆ 8ನೇ ಶತಮಾನದಲ್ಲಿ ಟೀಕುಗಳನ್ನು ಬರೆಯುವ ಸಂಪ್ರದಾಯ ನಡೆಯತ್ತಿದ್ದು, ನಂತರದಲ್ಲಿ ದೀಪಿಕೆಗಳು, ಸರಳ ಭಾರತವಾಗಿ ರೂಪುಗೊಂಡಿವೆ. ಹಳಗನ್ನಡದ ಬಗ್ಗೆ ಹೆದರಬೇಕಿಲ್ಲ. ಅದೊಂದು ಸರಳವಾಗಿದ್ದು, ಕಬ್ಬಿಣದ ಕಡಲೆ ಎನ್ನುವುದು ಕೆಲವರ ಮಾನಸಿಕ ರೋಗವಾಗಿದೆ. ಹಳೆಗನ್ನಡ ಕಾವ್ಯಗಳು ಇನ್ನಷ್ಟು ಅನುಸಂಧಾನವಾಗಬೇಕಿದೆ.
ಡಾ| ಮಲ್ಲೇಪುರಂ ಜಿ.ವೆಂಕಟೇಶ್‌, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ.

ಟಾಪ್ ನ್ಯೂಸ್

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.