ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದ ಸಂತ
Team Udayavani, Jan 15, 2022, 8:48 PM IST
ಹಗರಿಬೊಮ್ಮನಹಳ್ಳಿ: ದುರಾಸೆ ಮೆಟ್ಟಿ ನಿಂತಿದ್ದಕ್ಕೆ ವಿವೇಕಾನಂದರು ವಿಶ್ವಮಾನವರಾಗಿದ್ದಾರೆ. ನಡೆ ನುಡಿ ಒಂದಾದಾಗ ಮಾತ್ರ ಸಮಾಜದ ಗೌರವಕ್ಕೆ ಪಾತ್ರರಾಗುತ್ತೇವೆ. ವಿಶ್ವಕ್ಕೆ ಹಿಂದೂತ್ವದ ಮೌಲ್ಯವನ್ನು ಸಾರಿದ, ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದ ಸ್ವಾಮಿ ವಿವೇಕಾನಂದರ ಈ ನಡೆಯಿಂದ ವಿಶ್ವವೇ ಭಾರತ ದೇಶದತ್ತ ನೋಡುವಂತಾಯಿತು ಎಂದು ಮಾನಿಹಳ್ಳಿ ಪುರವರ್ಗ ಮಠದ ಷ.ಬ್ರ. ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಮೂರು ದಿನಗಳ ಕಾಲ ಏರ್ಪಡಿಸಿದ್ದ ವಿವೇಕ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನುಷ್ಯನಲ್ಲಿರುವ ಅಪಾರ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವಿವೇಕಾನಂದರು ದೇಶದ ಯುವಕರ ಆತ್ಮಬಲದ ಕಣಜವಾಗಿದ್ದಾರೆ. ಹಿಂದೂ ಧರ್ಮದ ಜೊತೆಗೆ ಅನ್ಯಧರ್ಮಗಳಿಗೂ ಅಪಾರ ಗೌರವ ನೀಡುತ್ತಿದ್ದ ವೀರಸಂತ ವಿವೇಕಾನಂದರು. ಇಂದಿನ ಯುವಕರು ವಿವೇಕಾನಂದರವರ ತತ್ವಾದರ್ಶಗಳನ್ನು ಅರಿತು ಅಳವಡಿಸಿಕೊಳ್ಳಬೇಕಿದೆ. ರಾಷ್ಟ್ರೋತ್ಥಾನದಲ್ಲಿ ವಿವೇಕ ಸ್ಮರಣೆ ಮೂಲಕ ವಿವೇಕಾನಂದರ ಚಿಂತನೆಗಳನ್ನು ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಇದಕ್ಕೂ ಮುನ್ನಾ ವಿವೇಕಸ್ಮರಣೆಯಲ್ಲಿ ಭಾಗವಹಿಸಿದವರಿಗೆ ಚಾಗಿಪದ ಪಠಣ, ಧ್ಯಾನ ನಡೆಸಲಾಯಿತು. ಮೊದಲ ದಿನ ಹೊಸಪೇಟೆಯ ಗ್ರಂಥಪಾಲಕಿ ಸುಜಾತ ರೇವಣಸಿದ್ದಪ್ಪ, ಎರಡನೇ ದಿನ ಸಂಸ್ಕಾರ ಭಾರತಿಯ ಅಖೀಲ ಭಾರತೀಯ ಸಂಘಟನಾ ಕಾರ್ಯದರ್ಶಿ ದೇಹಲಿಯ ಅಭಿಜಿತ್ ಗೋಖಲೆಜೀ ಉಪನ್ಯಾಸ ನೀಡಿದರು. ವಿವೇಕ ಸ್ಮರಣೆಯಲ್ಲಿ 300 ಜನ ಭಾಗವಹಿಸಿದ್ದರು. ಆರ್‌ಎಸ್‌ಎಸ್ ಪ್ರಮುಖ ಡಾ| ಎಚ್.ಎನ್ .ಪಿ.ವಿಠಲ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಆರ್. ಬಸವನಗೌಡ, ವಿವೇಕ ಸ್ಮರಣೆ ಸಂಚಾಲಕರಾದ ಆರ್. ಕೊಟ್ರಪ್ಪ, ಪ್ರಮುಖರಾದ ರಮೇಶ್ ಬೆಲ್ಲಕೊಂಡ, ಎ.ಎಂ. ದಾನಯ್ಯ, ಸೋಮನಗೌಡ್ರು, ಯೋಗಾನಂದ, ಆನಂದ ಎತ್ತಿನಮನಿ, ಕುಮಾರ್, ಅರುಣ ಕುಲಕರ್ಣಿ, ನಟರಾಜ ಬೆಳ್ಳಕ್ಕಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.